Home ಕ್ರೈಂ ನ್ಯೂಸ್ ಆಸ್ಥಾ ಕುಂಜ್ ಪಾರ್ಕ್ ಅತ್ಯಾಚಾರ ಪ್ರಕರಣ: ದೆಹಲಿಯ ಲೇಡಿ ಶ್ರೀರಾಮ್ ಕಾಲೇಜು ಬಂದ್, ಆನ್‌ಲೈನ್ ಕ್ಲಾಸ್‌ಗೆ ಸೂಚನೆ
ಕ್ರೈಂ ನ್ಯೂಸ್ಬೆಂಗಳೂರು

ಆಸ್ಥಾ ಕುಂಜ್ ಪಾರ್ಕ್ ಅತ್ಯಾಚಾರ ಪ್ರಕರಣ: ದೆಹಲಿಯ ಲೇಡಿ ಶ್ರೀರಾಮ್ ಕಾಲೇಜು ಬಂದ್, ಆನ್‌ಲೈನ್ ಕ್ಲಾಸ್‌ಗೆ ಸೂಚನೆ

Share
ಶ್ರೀರಾಮ್
Share

ನವದೆಹಲಿ: ದೆಹಲಿಯ ಕಲ್ಕಾಜಿ ಮಂದಿರದ ಬಳಿ ಇರುವ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲಿನ ಭೀಕರ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲ್ಲೇ, ಸಮೀಪದಲ್ಲಿರುವ ಪ್ರಸಿದ್ಧ ಲೇಡಿ ಶ್ರೀರಾಮ್ ಮಹಿಳಾ ಕಾಲೇಜು ಭೌತಿಕ ತರಗತಿಗಳನ್ನು ರದ್ದುಗೊಳಿಸಿ ಆನ್‌ಲೈನ್ ಮೋಡ್‌ಗೆ ಸ್ಥಳಾಂತರಿಸಿದೆ.

ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಭದ್ರತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಮಂಗಳವಾರ ತರಗತಿಗಳನ್ನು ರದ್ದುಗೊಳಿಸಿದ ಬಳಿಕ ಬುಧವಾರದಿಂದ ಆನ್‌ಲೈನ್ ಮೂಲಕ ಪಾಠ ಪ್ರವಚನ ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ಪೊಲೀಸ್ ಎನ್‌ಕೌಂಟರ್ ಹಾಗೂ ಬಂಧನ:

ಈ ಪ್ರಕರಣ ಸಂಬಂಧ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಲೇಜಿನ ಹಿಂಭಾಗದ ಗೇಟ್ ಬಳಿ ಆರೋಪಿ ಆಸಿಫ್ ಎಂಬಾತನನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆರೋಪಿಯ ಕಾಲಿಗೆ ಗುಂಡು ತಗಲಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ.

ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದ್ದು, ಕಾಲೇಜು ಸುತ್ತಮುತ್ತ ಪೊಲೀಸ್ ಗಸ್ತು ಹೆಚ್ಚಿಸುವಂತೆ ಪ್ರಿನ್ಸಿಪಾಲ್ ಕನಿಕಾ ಕೆ. ಅಹುಜಾ ವಿನಂತಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles