ನವದೆಹಲಿ: ನಾವು ಪ್ರತಿದಿನ ಬಳಸುವ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲೆ ಸಸ್ಯಾಹಾರ ಅಥವಾ ಮಾಂಸಾಹಾರ ಎಂಬುದನ್ನು ಗುರುತಿಸಲು ಹಸಿರು ಮತ್ತು ಕೆಂಪು/ಕಂದು ಬಣ್ಣದ ಚುಕ್ಕಿ ಗುರುತುಗಳಿರುವುದನ್ನು ಕಾಣುತ್ತೇವೆ. ಆದರೆ, ಈಗ ಈ ನಿಯಮವು ಕೇವಲ ತಿನ್ನುವ ಆಹಾರಕ್ಕೆ ಮಾತ್ರ ಸೀಮಿತವಾಗಿರದೆ, ನಾವು ಬಳಸುವ ಸಾಬೂನು, ಶ್ಯಾಂಪೂ, ಸೋಪು, ಟೂತ್‌ಪೇಸ್ಟ್ ವಸ್ತುಗಳಿಗೂ ವಿಸ್ತರಿಸಲ್ಪಟ್ಟಿದೆ.
ಗ್ರಾಹಕರ ಹಿತರಕ್ಷಣೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಲೀಗಲ್ ಮೆಟ್ರಾಲಜಿ (ಪ್ಯಾಕೇಜ್ಡ್ ಕಮೋಡಿಟೀಸ್) ನಿಯಮಗಳು, 2011’ ಕ್ಕೆ ತಿದ್ದುಪಡಿ ತಂದಿದ್ದು, ಈ ಹೊಸ ನೂತನ ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ನಿಯಮದಲ್ಲೇನಿದೆ?
ಹಸಿರು ಚುಕ್ಕಿ: ಸಂಪೂರ್ಣವಾಗಿ ಸಸ್ಯಾಹಾರಿ (Vegetarian) ಮೂಲದ ಪದಾರ್ಥಗಳಿಂದ ತಯಾರಿಸಿದ ಸಾಬೂನು, ಶ್ಯಾಂಪೂ ಮತ್ತು ಕಾಸ್ಮೆಟಿಕ್ ಉತ್ಪನ್ನಗಳ ಪ್ಯಾಕೆಟ್ ಮೇಲೆ ಹಸಿರು ಬಣ್ಣದ ಚುಕ್ಕಿ ಗುರುತನ್ನು ಮುದ್ರಿಸುವುದು ಕಡ್ಡಾಯ.
ಕೆಂಪು/ಕಂದು ಚುಕ್ಕಿ : ಪ್ರಾಣಿಗಳ ಕೊಬ್ಬು ಅಥವಾ ಮಾಂಸಾಹಾರಿ (Non-Vegetarian) ಮೂಲದ ಅಂಶಗಳನ್ನು ಒಳಗೊಂಡಿರುವ ಉತ್ಪನ್ನಗಳ ಮೇಲೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕಿ ಗುರುತಿರಬೇಕು.
ಮುಖ ಸ್ಥಾನದಲ್ಲಿ ಗುರುತು: ಈ ಸಸ್ಯಾಹಾರಿ ಅಥವಾ ಮಾಂಸಾಹಾರಿ ಸಂಕೇತಗಳನ್ನು ಪ್ಯಾಕ್‌ನ ಮುಂಭಾಗದ ಪ್ರಮುಖ ಭಾಗದಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ಮೇಲ್ಭಾಗದಲ್ಲಿ ಮುದ್ರಿಸಬೇಕಾಗುತ್ತದೆ.
ಗ್ರಾಹಕರಿಗೆ ಇದರಿಂದಾಗುವ ಪ್ರಯೋಜನ:
ಅನೇಕ ಜನರು ತಾವು ಬಳಸುವ ಟೂತ್‌ಪೇಸ್ಟ್ ಅಥವಾ ಸಾಬೂನುಗಳಲ್ಲಿ ಪ್ರಾಣಿಜನ್ಯ ಕೊಬ್ಬು ಅಥವಾ ಇತರ ಅಂಶಗಳಿವೆಯೇ ಎಂಬ ಗೊಂದಲದಲ್ಲಿರುತ್ತಿದ್ದರು. ಈ ನೂತನ ನಿಯಮದಿಂದಾಗಿ ಗ್ರಾಹಕರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವಾಗ, ಉತ್ಪನ್ನದ ಮೂಲವನ್ನು ಸುಲಭವಾಗಿ ಗುರುತಿಸಿ ತಮ್ಮ ಧಾರ್ಮಿಕ ಮತ್ತು ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ.
- Green and red dot for soap shampoo
- India cosmetics labelling rules
- Legal Metrology Packaged Commodities Amendment
- New packaging rules 2026
- Veg and non veg symbol on cosmetics
- ಕಾಸ್ಮೆಟಿಕ್ಸ್ ಲೇಬಲಿಂಗ್
- ಕೇಂದ್ರ ಸರ್ಕಾರದ ಹೊಸ ಪ್ಯಾಕೇಜಿಂಗ್ ನಿಯಮ
- ಲೀಗಲ್ ಮೆಟ್ರಾಲಜಿ ತಿದ್ದುಪಡಿ
- ಸಸ್ಯಾಹಾರಿ ಮತ್ತು ಮಾಂಸಾಹಾರಿ ಗುರುತು
- ಸಾಬೂನು ಮತ್ತು ಶ್ಯಾಂಪೂ ನಿಯಮ





Leave a comment