Home ಬೆಂಗಳೂರು OYO ಹೋಟೆಲ್‌ನಲ್ಲಿ ಸರಪಳಿಯಿಂದ ಯುವಕನ ಕಟ್ಟಿಹಾಕಿ, ಬಟ್ಟೆ ಬಿಚ್ಚಿ ಥಳಿಸಿದ ಯುವತಿಯರು: ಚೀರಾಟ ಕೇಳಿ ಪೊಲೀಸರ ಕರೆಸಿದ ಸ್ಥಳೀಯರು, ಮುಂದೇನಾಯ್ತು?
ಬೆಂಗಳೂರುಕ್ರೈಂ ನ್ಯೂಸ್ನವದೆಹಲಿ

OYO ಹೋಟೆಲ್‌ನಲ್ಲಿ ಸರಪಳಿಯಿಂದ ಯುವಕನ ಕಟ್ಟಿಹಾಕಿ, ಬಟ್ಟೆ ಬಿಚ್ಚಿ ಥಳಿಸಿದ ಯುವತಿಯರು: ಚೀರಾಟ ಕೇಳಿ ಪೊಲೀಸರ ಕರೆಸಿದ ಸ್ಥಳೀಯರು, ಮುಂದೇನಾಯ್ತು?

Share
ಹೋಟೆಲ್‌
Share

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಫೀಲ್‌ಖಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲ್ ರೋಡ್‌ನಲ್ಲಿರುವ ‘ದ ಗ್ರ್ಯಾಂಡ್ OYO ಹೋಟೆಲ್’ ಒಂದರಲ್ಲಿ ಅಮಾನವೀಯ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ.

ಯುವಕನೊಬ್ಬನನ್ನು ಹೋಟೆಲ್ ಕೊಠಡಿಯಲ್ಲಿ ಬಂಧಿಯಾಗಿಸಿ, ಆತನ ಬಟ್ಟೆಗಳನ್ನು ಬಿಚ್ಚಿಸಿ, ಕಬ್ಬಿಣದ ಸರಪಳಿ ಹಾಗೂ ಹಗ್ಗಗಳಿಂದ ಕಿಟಕಿಗೆ ಕಟ್ಟಿಹಾಕಿ ಇಬ್ಬರು ಯುವತಿಯರು ಕ್ರೂರವಾಗಿ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ ಮತ್ತು ಕೃತ್ಯದ ವಿವರ:

ಸಂತ್ರಸ್ತ ಯುವಕನನ್ನು ಕಾನ್ಪುರ ನಿವಾಸಿ ರಾಹುಲ್ ಗುಪ್ತಾ ಎಂದು ಗುರುತಿಸಲಾಗಿದೆ. ಆರೋಪಿ ಯುವತಿಯರು ಬಾರಾಬಂಕಿ ಮೂಲದವರೆನ್ನಲಾಗಿದ್ದು, OYO ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಯುವಕ ಕೊಠಡಿಗೆ ಬಂದ ನಂತರ, ಆತನ ಮೇಲಿದ್ದ ಬಟ್ಟೆಗಳನ್ನು ಬಿಚ್ಚಿ ಕೈ-ಕಾಲುಗಳನ್ನು ಸರಪಳಿಯಿಂದ ಕಿಟಕಿಗೆ ಬಿಗಿದು ಕಟ್ಟಿಹಾಕಲಾಗಿದೆ.

ಅಲ್ಲದೆ, ಬೆಲ್ಟ್ ಹಾಗೂ ರಾಡ್‌ಗಳಿಂದ ಆತನ ಬೆನ್ನಿನ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಯುವಕನ ಚೀರಾಟ ಹಾಗೂ ಆಕ್ರಂದನ ಮುಗಿಲು ಮುಟ್ಟಿತ್ತು. ಹಲ್ಲೆ ನಡೆಸುವ ಸಂದರ್ಭದಲ್ಲಿ ಯುವತಿಯರು “ಮೊಬೈಲ್ ಕಳವು ಮಾಡಿದ್ದಾನೆ” ಎಂದು ಆರೋಪಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಇಡೀ ಕೃತ್ಯವನ್ನು ರೋಶನ್ ಎಂಬ ಆತನ ಸಹಚರ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ.

ರಕ್ಷಣೆ ಮತ್ತು ಪೊಲೀಸ್ ಕಾರ್ಯಾಚರಣೆ:

ಕೊಠಡಿಯ ಒಳಗಿನಿಂದ ಯುವಕನ ಕರುಣಾಜನಕ ಚೀರಾಟ ಕೇಳಿಬಂದ ತಕ್ಷಣ ಹೋಟೆಲ್ ಅಕ್ಕಪಕ್ಕದ ಅಂಗಡಿಯವರು ಮತ್ತು ಸ್ಥಳೀಯರಿಗೆ ಅನುಮಾನ ಬಂದು ತಕ್ಷಣವೇ ಫೀಲ್‌ಖಾನಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೊಠಡಿಯ ಬಾಗಿಲು ತೆಗೆದು ಸರಪಳಿ ತೆರವುಗೊಳಿಸಿ, ಯುವಕನನ್ನು ರಕ್ಷಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ರಾಹುಲ್ ಗುಪ್ತನನ್ನು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತ್ರಸ್ತ ನೀಡಿದ ದೂರಿನ ಆಧಾರದ ಮೇಲೆ, ಹಲ್ಲೆ ನಡೆಸಿದ ಇಬ್ಬರು ಯುವತಿಯರು, ವಿಡಿಯೋ ಮಾಡಿದ ರೋಶನ್ ಮತ್ತು  ಇತರ ನಾಲ್ವರಿಂದ ಐವರು ವ್ಯಕ್ತಿಗಳ ವಿರುದ್ಧ ವಿವಿಧ ಕಾಯ್ದೆಗಳಡಿ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles