Home ಕ್ರೈಂ ನ್ಯೂಸ್ ಒಂದೇ ದಿನದಲ್ಲಿ ಮಮತಾ ಬ್ಯಾನರ್ಜಿಗೆ ಭಾರಿ ಆಘಾತ: ಪಕ್ಷದ ಚಿಹ್ನೆ ಜೊತೆಗೆ ನಂದಿಗ್ರಾಮ ಅಭ್ಯರ್ಥಿಯೂ ವಾಕ್ ಔಟ್: ಸಿಎಂ ಸುವೇಂದು ಅಧಿಕಾರಿ ಮಾಸ್ಟರ್ ಸ್ಟ್ರೋಕ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಒಂದೇ ದಿನದಲ್ಲಿ ಮಮತಾ ಬ್ಯಾನರ್ಜಿಗೆ ಭಾರಿ ಆಘಾತ: ಪಕ್ಷದ ಚಿಹ್ನೆ ಜೊತೆಗೆ ನಂದಿಗ್ರಾಮ ಅಭ್ಯರ್ಥಿಯೂ ವಾಕ್ ಔಟ್: ಸಿಎಂ ಸುವೇಂದು ಅಧಿಕಾರಿ ಮಾಸ್ಟರ್ ಸ್ಟ್ರೋಕ್!

Share
ಮಮತಾ ಬ್ಯಾನರ್ಜಿ
Share

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಂದಿಗ್ರಾಮ ಉಪಚುನಾವಣೆಯ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಮಮತಾ ಬ್ಯಾನರ್ಜಿ ಬಣ) ಭಾರಿ ಹಿನ್ನಡೆ ಅನುಭವಿಸಿದೆ. ಮಮತಾ ಬ್ಯಾನರ್ಜಿ ಬಣದ ನಂದಿಗ್ರಾಮ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ಹಠಾತ್ತನೆ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

ಈ ನಿರ್ಧಾರವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಸ್ಥಳೀಯ ಶಾಸಕ ಶುಭೇಂದು ಅಧಿಕಾರಿ ಅವರನ್ನು ರಾಜ್ಯ ಸಚಿವಾಲಯ ‘ನಬನ್ನಾ’ದಲ್ಲಿ ಭೇಟಿಯಾದ ಕೆಲವೇ ಗಂಟೆಗಳಲ್ಲಿ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಚಿಹ್ನೆ ಕಳೆದುಕೊಂಡ ಮಮತಾ ಬಣ: ಇದಕ್ಕೂ ಮುನ್ನ, ಭಾರತೀಯ ಚುನಾವಣಾ ಆಯೋಗವು ಕಳೆದ 28 ವರ್ಷಗಳಿಂದ ತೃಣಮೂಲ ಕಾಂಗ್ರೆಸ್‌ನ ಗುರುತಾಗಿದ್ದ ‘ಹೂವು ಮತ್ತು ಹುಲ್ಲು’ (ಜೋರಾ ಫೂಲ್) ಚಿಹ್ನೆಯನ್ನು ಫ್ರೀಜ್ ಮಾಡಿದೆ. ಪಕ್ಷದ ಆಂತರಿಕ ಭಿನ್ನಮತದಿಂದಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಫುಟ್‌ಬಾಲ್ ಆಟಗಾರ’ ಚಿಹ್ನೆಯನ್ನು ಹಾಗೂ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ‘ಲಫಾಫಾ/ಎನ್‌ವಲಪ್’ ಚಿಹ್ನೆಯನ್ನು ಆಯೋಗ ನೀಡಿದೆ.

ಕಾಂಗ್ರೆಸ್‌ಗೆ ಬೆಂಬಲ ಘೋಷಣೆ:

ತಮ್ಮ ಚಿಹ್ನೆ ರದ್ದಾಗಿರುವುದು ಮತ್ತು ಅಭ್ಯರ್ಥಿಯ ಹಿಂತೆಗೆತದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, “ಇದು ಪ್ರಜಾಪ್ರಭುತ್ವದ ಕಪ್ಪು ದಿನ” ಎಂದು ಕರೆದಿದ್ದಾರೆ. “ಬಿಜೆಪಿಯನ್ನು ಭಾರತದಿಂದ ತೊಲಗಿಸುವುದೇ ನಮ್ಮ ಮುಖ್ಯ ಉದ್ದೇಶ. ‘ಇಂಡಿಯಾ’ (INDIA) ಒಕ್ಕೂಟದ ಪರವಾಗಿ ನಾವು ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದು, ನಮ್ಮ ಕಡೆಯಿಂದ ಯಾವುದೇ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಂದಿಗ್ರಾಮದ ಹಿನ್ನೆಲೆ:

ನಂದಿಗ್ರಾಮವು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. 2021ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಶುಭೇಂದು ಅಧಿಕಾರಿ ವಿರುದ್ಧ ಇಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಪ್ರಸಕ್ತ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಶುಭೇಂದು ಅವರ ಮಾಜಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ತಾಯಿ ಹಸಿರಾಣಿ ರಥ್ ಸ್ಪರ್ಧಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles