Home ದಾವಣಗೆರೆ “ವಿಜಯೇಂದ್ರ, ಆರ್. ಅಶೋಕ್ ಟೆಲಿಪ್ರಾಂಪ್ಟರ್ ಅಥವಾ ಕಾಗದದ ಹಾಳೆ ನೋಡದೇ ವಂದೇ ಮಾತರಂನ ಆರೂ ಚರಣ ಹಾಡಿದರೆ ರಾಜೀನಾಮೆ ಕೊಡ್ತೀನಿ”: ಪ್ರಿಯಾಂಕ್ ಖರ್ಗೆ ಬಹಿರಂಗ ಸವಾಲ್!
ದಾವಣಗೆರೆನವದೆಹಲಿಬೆಂಗಳೂರು

“ವಿಜಯೇಂದ್ರ, ಆರ್. ಅಶೋಕ್ ಟೆಲಿಪ್ರಾಂಪ್ಟರ್ ಅಥವಾ ಕಾಗದದ ಹಾಳೆ ನೋಡದೇ ವಂದೇ ಮಾತರಂನ ಆರೂ ಚರಣ ಹಾಡಿದರೆ ರಾಜೀನಾಮೆ ಕೊಡ್ತೀನಿ”: ಪ್ರಿಯಾಂಕ್ ಖರ್ಗೆ ಬಹಿರಂಗ ಸವಾಲ್!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ರಾಜ್ಯದ ಅಧಿಕೃತ ಹಾಗೂ ಸರ್ಕಾರಿ ಸಮಾರಂಭಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು (ಪ್ಯಾರಾ) ಮಾತ್ರ ಹಾಡಲು ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ತೀವ್ರಗೊಂಡಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಪ್ರತಿಪಕ್ಷ ಬಿಜೆಪಿಗೆ ನೇರ ಸವಾಲು ಎಸೆದಿರುವ ಸಚಿವ ಪ್ರಿಯಾಂಕ್ ಖರ್ಗೆ, “ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಅವರು ಯಾವುದೇ ಟೆಲಿಪ್ರಾಂಪ್ಟರ್ ಅಥವಾ ಕಾಗದದ ಹಾಳೆಯನ್ನು ನೋಡದೆ ‘ವಂದೇ ಮಾತರಂ’ ಗೀತೆಯ ಸಂಪೂರ್ಣ ಆರೂ ಚರಣಗಳನ್ನು ಹಾಡಿದರೆ, ನಾನು ತಕ್ಷಣವೇ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಸವಾಲು ಹಾಕಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ನಮ್ಮ ಹಿರಿಯರಾದ ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ್ ಟಾಗೋರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ಮಹಾನಾಯಕರು 1937ರ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಿದಂತೆ ನಾವು ಎರಡು ಚರಣಗಳನ್ನು ಹಾಡುತ್ತಿದ್ದೇವೆ. ಈಗಿನ ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಹಾನಾಯಕರಿಗಿಂತ ದೊಡ್ಡವರೇ?” ಎಂದು ಪ್ರಶ್ನಿಸಿದ್ದಾರೆ.

ವಿವಾದದ ಹಿನ್ನೆಲೆ:

ಕೇಂದ್ರ ಗೃಹ ಸಚಿವಾಲಯವು ಜನೆವರಿಯಲ್ಲಿ ಹೊರಡಿಸಿದ್ದ ಮಾರ್ಗದರ್ಶನದಲ್ಲಿ, ‘ವಂದೇ ಮಾತರಂ’ 150ನೇ ವರ್ಷಾಚರಣೆಯ ಅಂಗವಾಗಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವ ಮೊದಲು ‘ವಂದೇ ಮಾತರಂ’ನ ಎಲ್ಲಾ ಆರೂ ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಸೂಚಿಸಿತ್ತು. ಆದರೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಹಾಗೂ ಕರ್ನಾಟಕ ಸರ್ಕಾರವು 1937ರ ಹಳೆಯ ನಿರ್ಣಯದಂತೆ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿದೆ.

ಬಿಜೆಪಿ ಪ್ರತಿಭಟನೆ ಹಾಗೂ ಹೈಕೋರ್ಟ್‌ನಲ್ಲಿ ಪಿಐಎಲ್:

ರಾಜ್ಯ ಸರ್ಕಾರದ ಈ ಆದೇಶವನ್ನು “ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ” ಎಂದು ಕ ಕರೆದಿರುವ ರಾಜ್ಯ ಬಿಜೆಪಿ, ರಾಜ್ಯಾದ್ಯಂತ 5 ದಿನಗಳ ಕಾಲ ‘ಪಾದಯಾತ್ರೆ’ ನಡೆಸಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಇನ್ನೊಂದೆಡೆ, ರಾಜ್ಯ ಸರ್ಕಾರದ ಈ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಕೋರಿ ವಕೀಲ ಗಿರೀಶ್ ಭಾರದ್ವಾಜ್ ಎಂಬುವವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮಾರ್ಗದರ್ಶನಗಳನ್ನು ರಾಜ್ಯ ಉಲ್ಲಂಘಿಸುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles