Home ದಾವಣಗೆರೆ ‘ಒಳ್ಳೆಯ ಹವಾಮಾನ ಇಟ್ಟುಕೊಂಡು ಉಪ್ಪಿನಕಾಯಿ ಹಾಕಬೇಕಾ?’ ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತ ಹೈದರಾಬಾದ್ ಟೆಕ್ಕಿ!
ದಾವಣಗೆರೆನವದೆಹಲಿಬೆಂಗಳೂರು

‘ಒಳ್ಳೆಯ ಹವಾಮಾನ ಇಟ್ಟುಕೊಂಡು ಉಪ್ಪಿನಕಾಯಿ ಹಾಕಬೇಕಾ?’ ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತ ಹೈದರಾಬಾದ್ ಟೆಕ್ಕಿ!

Share
ಬೆಂಗಳೂರು
Share

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ತಣ್ಣನೆಯ ಹವಾಮಾನ ಮತ್ತು ಹಸಿರು ಪರಿಸರಕ್ಕೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಆದರೆ, ಈ ಆಹ್ಲಾದಕರ ವಾತಾವರಣಕ್ಕಿಂತ ನಗರದ ಕಂಟಕಪ್ರಾಯವಾಗಿರುವ ಟ್ರಾಫಿಕ್ ದಟ್ಟಣೆಯೇ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:

https://www.instagram.com/chetnasingh___/?utm_source=ig_embed&ig_rid=AhOGuB1VYQQXPpmozxpuJnP

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಹೈದರಾಬಾದ್ ಮೂಲದ ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಎಂಜಿನಿಯರ್ ಚೇತನಾ ಸಿಂಗ್, ಇಲ್ಲಿನ ರಸ್ತೆ ಸಂಚಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಒಂದು ವಾರದ ಮಟ್ಟಿಗೆ ಬೆಂಗಳೂರಿಗೆ ಬಂದಿದ್ದ ಚೇತನಾ, ಇಲ್ಲಿನ ಸಂಚಾರ ವ್ಯವಸ್ಥೆಯನ್ನ ಕಂಡು ತೀವ್ರ ಅಸಮಾಧಾನಗೊಂಡಿದ್ದಾರೆ. “ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಕನಿಷ್ಠ ಒಂದೂವರೆಯಿಂದ ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಕಳೆಯಬೇಕಾಗಿದೆ. ಹೊರಗೆ ಎಲ್ಲೂ ಹೋಗಲು ಸಾಧ್ಯವಾಗದಿರುವಾಗ ಈ ತಂಪಾದ ಹವಾಮಾನವನ್ನು ಇಟ್ಟುಕೊಂಡು ಏನು ಮಾಡಬೇಕು, ಉಪ್ಪಿನಕಾಯಿ ಹಾಕಬೇಕಾ?” ಎಂದು ಅವರು ತಮ್ಮ ವಿಡಿಯೋದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿಗಿಂತ ಸಾರಿಗೆ ಮತ್ತು ಮೂಲಸೌಕರ್ಯದ ದೃಷ್ಟಿಯಿಂದ ಹೈದರಾಬಾದ್ ನಗರವೇ ಎಷ್ಟೋ ಮೇಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಲವು ನೆಟ್ಟಿಗರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಮ್ಮತಿ ಸೂಚಿಸಿದರೆ, ಮತ್ತೆ ಕೆಲವರು ನಗರದ ಸೌಂದರ್ಯ ಮತ್ತು ಹವಾಮಾನವನ್ನು ಬೆಂಬಲಿಸಿ ಕಾಮೆಂಟ್ ಮಾಡುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *