Home ಕ್ರೀಡೆ ‘ನಮಗೆ ದೇಶವೇ ಮೊದಲು, ಟ್ರೋಫಿ ಅಲ್ಲ’: ಮಹಿಳಾ ಏಷ್ಯಾ ಕಪ್ 8ನೇ ಬಾರಿ ಚಾಂಪಿಯನ್ ಆದ್ರೂ ಪಾಕ್ ಸಚಿವನಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

‘ನಮಗೆ ದೇಶವೇ ಮೊದಲು, ಟ್ರೋಫಿ ಅಲ್ಲ’: ಮಹಿಳಾ ಏಷ್ಯಾ ಕಪ್ 8ನೇ ಬಾರಿ ಚಾಂಪಿಯನ್ ಆದ್ರೂ ಪಾಕ್ ಸಚಿವನಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ!

Share
ಭಾರತ
Share

ದುಬೈ: ಮಹಿಳಾ ಏಷ್ಯನ್ ಕಪ್ 2026ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 72 ರನ್‌ಗಳಿಂದ ಮಣಿಸಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಾಖಲೆಯ 8ನೇ ಬಾರಿ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಆದರೆ, ಪಂದ್ಯದ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರಿಂದ ವಿಜೇತ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ ನಿರಾಕರಿಸಿದೆ.

ವರದಿಗಳ ಪ್ರಕಾರ, ಈ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಚಿತವಾಗಿಯೇ ACC ಅಧಿಕೃತರಿಗೆ ತಿಳಿಸಿತ್ತು.

ಹೈಡ್ರಾಮಾ ಮತ್ತು ಪರ್ಯಾಯ ಪ್ರಸ್ತಾಪ:

ಫೈನಲ್ ಪಂದ್ಯ ಮುಗಿದ ಬಳಿಕ ಸುಮಾರು 40 ನಿಮಿಷಗಳ ಕಾಲ ಪ್ರಶಸ್ತಿ ವಿತರಣೆ ವಿಳಂಬವಾಯಿತು. ವೇದಿಕೆಯಲ್ಲಿ ನಖ್ವಿ ನಿಂತಿರುವುದನ್ನು ಕಂಡ ಉಪನಾಯಕಿ ಸ್ಮೃತಿ ಮಂದಾನ ಹಾಗೂ ತಂಡದ ಇತರ ಆಟಗಾರ್ತಿಯರು ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರಕಾರ, ACC ಯ ಉಪಾಧ್ಯಕ್ಷರಾದ ಖಾಲಿದ್ ಅಲ್ ಝರೂನಿ ಅವರಿಂದ ಟ್ರೋಫಿ ವಿತರಿಸುವಂತೆ ಭಾರತ ಮನವಿ ಮಾಡಿತ್ತು. ಆದರೆ, ನಖ್ವಿ ಇದಕ್ಕೆ ಒಪ್ಪದ ಕಾರಣ ಭಾರತ ತಂಡ ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಹಿಷ್ಕರಿಸಿತು. ಕೊನೆಗೆ ಶ್ರೀಲಂಕಾ ತಂಡಕ್ಕೆ ಮಾತ್ರ ರನ್ನರ್-ಅಪ್ ಪ್ರಶಸ್ತಿ ನೀಡಿ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.

ಬಿಸಿಸಿಐ ಮತ್ತು ಕೋಚ್ ನಿಲುವು: ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಮಾತನಾಡಿ, “ನಮಗೆ ಅಧಿಕೃತವಾಗಿ ನಾವು ಚಾಂಪಿಯನ್ಸ್ ಎಂಬುದು ಮುಖ್ಯ. ಟ್ರೋಫಿ ಕೈಗೆ ಸಿಗಲಿ ಸಿಗದಿರಲಿ ಅದು ವಿಷಯವಲ್ಲ. ಇದು ಬಿಸಿಸಿಐ ತೆಗೆದುಕೊಂಡ ನಿಲುವು, ನಾವು ಅದಕ್ಕೆ ಬದ್ಧರಾಗಿದ್ದೇವೆ” ಎಂದಿದ್ದಾರೆ.

ಕಳೆದ ವರ್ಷ (2025) ದುಬೈನಲ್ಲಿ ನಡೆದ ಪುರುಷರ ಏಷ್ಯಾ ಕಪ್ ಫೈನಲ್‌ನಲ್ಲೂ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡವು ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿ, ಪ್ರಶಸ್ತಿ ಇಲ್ಲದೆಯೇ ಸಂಭ್ರಮಿಸಿತ್ತು. ಈ ಬಾರಿಯೂ ಭಾರತೀಯ ಮಹಿಳಾ ಪಡೆ ಅದೇ ದೇಶಪ್ರೇಮದ ನಿಲುವನ್ನು ಮುಂದುವರಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles