Home ದಾವಣಗೆರೆ ಅಸ್ತಮಾ ರೋಗಿಗಳಿಗೆ ಶುಭಸುದ್ದಿ: ಮಧುಮೇಹ ಔಷಧಿಯಿಂದ ಶೇ. 40ರಷ್ಟು ಕಡಿಮೆಯಾಗಲಿದೆ ಉಬ್ಬಸದ ದಾಳಿ!
ದಾವಣಗೆರೆನವದೆಹಲಿಬೆಂಗಳೂರು

ಅಸ್ತಮಾ ರೋಗಿಗಳಿಗೆ ಶುಭಸುದ್ದಿ: ಮಧುಮೇಹ ಔಷಧಿಯಿಂದ ಶೇ. 40ರಷ್ಟು ಕಡಿಮೆಯಾಗಲಿದೆ ಉಬ್ಬಸದ ದಾಳಿ!

Share
ಅಸ್ತಮಾ
Share

ಬಾರ್ಸಿಲೋನಾ: ದೈನಂದಿನ ಜೀವನದಲ್ಲಿ ಕೆಮ್ಮು, ಎದೆ ಬಿಗಿತ, ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅಸ್ತಮಾ ರೋಗಿಗಳಿಗೆ ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ ಕಾಂಗ್ರೇಸ್ ಮಹತ್ವದ ಸಂಶೋಧನಾ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ಸಾಮಾನ್ಯವಾಗಿ ಟೈಪ್-2 ಮಧುಮೇಹಹಾಗೂ ಅತಿಯಾದ ಬೊಜ್ಜು ನಿಯಂತ್ರಿಸಲು ಬಳಸಲಾಗುವ ‘ಸೆಮಾಗ್ಲುಟೈಡ್’ (Semaglutide) ಹೆಸರಿನ ಔಷಧಿಯು ಅಸ್ತಮಾ ದಾಳಿಯ ತೀವ್ರತೆಯನ್ನು ಶೇಕಡಾ 40 ರಷ್ಟು ತಗ್ಗಿಸಲು ನೆರವಾಗುತ್ತದೆ ಎಂದು ಈ ಹೊಸ ಅಧ್ಯಯನವು ತಿಳಿಸಿದೆ.

ಲಂಡನ್‌ನ ಇಂಪೀರಿಯಲ್ ಕಾಲೇಜಿನ ನ್ಯಾಷನಲ್ ಹಾರ್ಟ್ ಆಂಡ್ ಲಂಗ್ ಇನ್‌ಸ್ಟಿಟ್ಯೂಟ್‌ನ ಪ್ರೊಫೆಸರ್ ಕ್ಲೋಯ್ ಬ್ಲೂಮ್ ನೇತೃತ್ವದ ಸಂಶೋಧಕರ ತಂಡವು ಯುಕೆಯ ಸುಮಾರು 80,000ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ದಾಖಲೆಗಳನ್ನು ವಿಶ್ಲೇಷಿಸಿ ಈ ವರದಿಯನ್ನು ತಯಾರಿಸಿದೆ. ಜಿಎಲ್‌ಪಿ-1 (GLP-1) ಗುಂಪಿಗೆ ಸೇರಿದ ಈ ಔಷಧಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುವುದರ ಜೊತೆಗೆ, ಶ್ವಾಸಕೋಶದ ಹಾಗೂ ವಾಯುಮಾರ್ಗದ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ವೈದ್ಯರು ನೀಡಿರುವ ಮುಖ್ಯ ಎಚ್ಚರಿಕೆ:

ಈ ಅಧ್ಯಯನದ ಫಲಿತಾಂಶವು ಆಶಾದಾಯಕವಾಗಿದ್ದರೂ, ಪ್ರಸ್ತುತ ಅಸ್ತಮಾ ಪೀಡಿತರು ತಕ್ಷಣವೇ ವೈದ್ಯರ ಸಲಹೆ ಇಲ್ಲದೆ ಈ ಔಷಧಿಯನ್ನು ಸೇವಿಸಲು ಪ್ರಾರಂಭಿಸಬಾರದು ಎಂದು ಪ್ರೊಫೆಸರ್ ಬ್ಲೂಮ್ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಇನ್ಹೇಲರ್‌ಗಳು ಮತ್ತು ವೈದ್ಯರು ಸೂಚಿಸಿದ ನಿಯಮಿತ ಚಿಕಿತ್ಸೆಯನ್ನೇ ಮುಂದುವರಿಸಬೇಕು ಹಾಗೂ ಮುಂದಿನ ಹಂತದಲ್ಲಿ ವ್ಯಾಪಕ ಕ್ಲಿನಿಕಲ್ ಪ್ರಯೋಗಗಳು ನಡೆಸಿದ ನಂತರವಷ್ಟೇ ಇದನ್ನು ಅಧಿಕೃತ ಅಸ್ತಮಾ ಔಷಧಿಯಾಗಿ ಘೋಷಿಸಲು ಸಾಧ್ಯ ಎಂದು ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles