ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ವೀವ್ಸ್ಗಳಿಗಾಗಿ ಜನರು ಎಂತಹ ಕೀಳುಮಟ್ಟದ ಸಾಹಸಗಳಿಗೂ ಇಳಿಯುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಮದುವೆ ನಿಶ್ಚಯವಾದ ವಿಷಯ ತಿಳಿಸಲು ಮಾಜಿ ಪ್ರಿಯಕರನ ಬಳಿ ಬಂದ ಯುವತಿಯೊಬ್ಬಳು, ಆತನಿಗೆ ಲಗ್ನಪತ್ರಿಕೆ ನೀಡಿ ನೀಡಿದ ವಿಚಿತ್ರ ಆಫರ್ ಕೇಳಿ ಯುವಕ ಮಾತ್ರವಲ್ಲದೇ ಇಡೀ ನೆಟ್ಟಿಗರ ಪಡೆ ಆಘಾತಕ್ಕೊಳಗಾಗಿದೆ.
ಘಟನೆಯ ವಿವರ:
ವೈರಲ್ ಆಗಿರುವ ವಿಡಿಯೋದ ಪ್ರಕಾರ, ಯುವತಿಯೊಬ್ಬಳು ಅತ್ಯಂತ ಉತ್ಸಾಹದಿಂದ ತನ್ನ ಮಾಜಿ ಪ್ರಿಯಕರನ ಬಳಿ ಬರುತ್ತಾಳೆ. ತನ್ನ ಮದುವೆಯ ಆಹ್ವಾನ ಪತ್ರಿಕೆಯನ್ನು ಆತನ ಕೈಗಿಟ್ಟು, “ನನಗೆ ಮದುವೆ ನಿಶ್ಚಯವಾಗಿದೆ, ನೀನು ಖಂಡಿತ ಮದುವೆಗೆ ಬರಬೇಕು” ಎಂದು ಪ್ರೀತಿಯಿಂದ ಆಹ್ವಾನಿಸುತ್ತಾಳೆ. ದಿಢೀರ್ ಆಗಿ ನಡೆದ ಈ ಬೆಳವಣಿಗೆಯಿಂದ ವಿಚಲಿತನಾಗುವ ಪ್ರಿಯಕರ, “ನೀನು ಯಾರನ್ನು ಮದುವೆಯಾಗುತ್ತಿದ್ದೀಯಾ?” ಎಂದು ಆತಂಕದಿಂದ ಪ್ರಶ್ನಿಸುತ್ತಾನೆ.
ಆಗ ಆ ಯುವತಿ ಕಿಂಚಿತ್ತೂ ಹಿಂಜರಿಕೆಯಿಲ್ಲದೆ, ಮುಗುಳುನಗುತ್ತಲೇ.. “ಮದುವೆ ಬೇರೆಯವರ ಜೊತೆ ನಿಶ್ಚಯವಾಗಿದೆ ಬಿಡು, ಆದರೆ ಮದುವೆಗೆ ಮುನ್ನ ಕೊನೆಯದಾಗಿ ಒಮ್ಮೆ ನಾವಿಬ್ಬರೂ ‘ಓಯೋ’ ರೂಮಿಗೆ ಹೋಗಿ ಒಟ್ಟಿಗೆ ಸಮಯ ಕಳೆಯೋಣ” ಎಂದು ನೇರವಾಗಿ ಬೇಡಿಕೆ ಇಡುತ್ತಾಳೆ. ಇದನ್ನು ಕೇಳಿದ ಪ್ರಿಯಕರನಿಗೆ ದಿಕ್ಕೇ ತೋಚದಂತಾಗಿ ದಂಗಾಗಿ ನಿಲ್ಲುತ್ತಾನೆ.
ನೆಟ್ಟಿಗರ ಆಕ್ರೋಶ ಮತ್ತು ಸಾರ್ವಜನಿಕ ವಲಯದ ಚರ್ಚೆ: ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದು ನಿಜವಾದ ಘಟನೆಯೋ ಅಥವಾ ಕೇವಲ ವೈರಲ್ ಆಗಲು ಸೃಷ್ಟಿಸಿದ ‘ಸ್ಕ್ರಿಪ್ಟೆಡ್ ರೀಲ್ಸ್’ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇಂತಹ ವಿಡಿಯೋಗಳ ಸೃಷ್ಟಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಕೇವಲ ವೈರಲ್ ಆಗುವ ಹಾಗೂ ವ್ಯೂವ್ಸ್ ಪಡೆಯುವ ದುರಾಶೆಯಿಂದ ಸಾಮಾಜಿಕ ಮೌಲ್ಯಗಳು, ಸಂಬಂಧಗಳ ಪವಿತ್ರತೆ ಮತ್ತು ನೈತಿಕತೆಯನ್ನು ಗಾಳಿಗೆ ತೂರಿ ಇಂತಹ ಕಂಟೆಂಟ್ ರೂಪಿಸುತ್ತಿರುವುದು ಯುವಜನತೆಯ ಮನಸ್ಸನ್ನು ಕೆಡಿಸುತ್ತಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ





Leave a comment