ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳೆದ ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಕೊನೆಗೂ ಸಿಐಡಿ (CID) ಅಧಿಕಾರಿಗಳ ತಕ್ಷ ಹಾಗೂ ತಾಂತ್ರಿಕ ತನಿಖೆಯಿಂದ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ನಾಪತ್ತೆಯಾಗಿದ್ದ ಯುವತಿಯರು. ಈ ವರ್ಷದ ಜನವರಿ 31ರಂದು ಕಾಲೇಜಿಗೆ ತೆರಳಿದ್ದ ಇಬ್ಬರೂ ವಾಪಸ್ ಮನೆಗೆ ಮರಳಿರದ ಹಿನ್ನೆಲೆಯಲ್ಲಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಹೈಕೋರ್ಟ್ ಆದೇಶ ಹಾಗೂ ಸಿಐಡಿಗೆ ತನಿಖೆ ವರ್ಗಾವಣೆ:
ಸ್ಥಳೀಯ ಪೊಲೀಸರ ತನಿಖೆಯಲ್ಲಿ ಯಾವುದೇ ಸ್ಪಷ್ಟ ಸುಳಿವು ಲಭ್ಯವಾಗದ ಕಾರಣ, ತನಿಷ್ಕಾ ಅವರ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯವು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶಿಸಿತ್ತು. ಸಿಐಡಿ ವಿಶೇಷ ತಂಡವು ಕಳೆದ ಮೂರು ತಿಂಗಳಿಂದ ತೀವ್ರ ಹುಡುಕಾಟ ನಡೆಸಿತ್ತು.
ಆಧಾರ್ ದೃಢೀಕರಣ ತಂತ್ರಜ್ಞಾನದಿಂದ ಸಿಕ್ಕ ಮಹತ್ವದ ಸುಳಿವು:
ಮನೆಯ ಕೌಟುಂಬಿಕ ಒತ್ತಡದಿಂದಾಗಿ ತೆರಳಿದ್ದ ತನಿಷ್ಕಾ, ಮಲೆ ಮಹದೇಶ್ವರ ಬೆಟ್ಟದ ಕಡೆಗೆ ತೆರಳಿ, ಅಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯದ ಬಳಿಕ ತಮಗೆ ಯಾವುದೇ ಕುಟುಂಬವಿಲ್ಲ ಎಂದು ಸುಳ್ಳು ಹೇಳಿ ಆತನೊಂದಿಗೆ ತೆರಳಿದ್ದರು. ಬಳಿಕ ಆ ಯುವಕ ತನಿಷ್ಕಾಳನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದು, ತೇಜಸ್ವಿನಿಯನ್ನು ತಂಗಿ ಎಂದು ಜೊತೆಯಲ್ಲೇ ಆಶ್ರಯ ನೀಡಿದ್ದನು.
ಪ್ರಕರಣದ ತನಿಖೆ ಮುಂದುವರಿಸಿದ ಸಿಐಡಿ ಅಧಿಕಾರಿಗಳಿಗೆ, ಹೊಸ ಸಿಮ್ ಕಾರ್ಡ್ ಖರೀದಿಸುವ ವೇಳೆ ತನಿಷ್ಕಾ ತನ್ನ ಅಧಿಕೃತ ಆಧಾರ್ ಕಾರ್ಡ್ ಬಳಸಿದಾಗ ಟೆಲಿಕಾಂ ಸೇವಾಣಿದಾರರ ಮೂಲಕ ತಾಂತ್ರಿಕ ಮಾಹಿತಿ ಲಭ್ಯವಾಯಿತು. ಆಧಾರ್ ಸಂಖ್ಯೆಯ ದೃಢೀಕರಣದ ಜಾಡು ಹಿಡಿದು ಹೊರಟ ಸಿಐಡಿ ಅಧಿಕಾರಿಗಳು, ನಿಖರವಾದ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇಬ್ಬರ ಇರುವಿಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆಯಾಗಿ ಪ್ರಸ್ತುತ ಗರ್ಭಿಣಿಯಾಗಿರುವ ತನಿಷ್ಕಾ ಹಾಗೂ ತೇಜಸ್ವಿನಿಯನ್ನು ಕೊನೆಗೂ ಸಿಐಡಿ ಅಧಿಕಾರಿಗಳು ರಕ್ಷಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಂಡಿದ್ದಾರೆ.
- Aadhaar card tracking
- Bengaluru missing girls case
- CID investigation Karnataka
- college students traced
- High Court missing case
- Karnataka Latest News
- Malai Mahadeshwara hills
- missing students found safe
- Tanishka and Tejaswini
- Vidyaranyapura police station
- ಆಧಾರ್ ಕಾರ್ಡ್ ಸುಳಿವು
- ಕರ್ನಾಟಕ ಸುದ್ದಿ
- ಕಾಲೇಜು ವಿದ್ಯಾರ್ಥಿನಿಯರು ಪತ್ತೆ
- ತನಿಷ್ಕಾ ಮತ್ತು ತೇಜಸ್ವಿನಿ
- ಬೆಂಗಳೂರು ನಾಪತ್ತೆ ಪ್ರಕರಣ
- ಮಲೆ ಮಹದೇಶ್ವರ ಬೆಟ್ಟ
- ವಿದ್ಯಾರಣ್ಯಪುರ ಪೊಲೀಸ್ ಠಾಣೆ
- ಸಿಐಡಿ ತನಿಖೆ
- ಹೈಕೋರ್ಟ್ ಆದೇಶ





Leave a comment