ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗೆ ಇಲ್ಲಿನ ವಿಕಾಸ ಭವನ ಕಚೇರಿ ಬಳಿಯ ವಸತಿ ಪ್ರದೇಶಕ್ಕೆ ಮಧ್ಯರಾತ್ರಿ ನುಗ್ಗಿದ ಚಿರತೆಯೊಂದು, ಗಾಢ ನಿದ್ರೆಯಲ್ಲಿದ್ದ ಸಾಕು ನಾಯಿಯ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ಸಂಪೂರ್ಣ ರೋಚಕ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೀಕ್ಷಿಸಿ
Dog takes on leopard during night-time attack in Rudraprayag. Watch video pic.twitter.com/jygCGFN3zP
— NDTV (@ndtv) September 9, 2026
ಮನೆಯ ಅಂಗಳದಲ್ಲಿ ನಾಯಿ ಮಲಗಿದ್ದ ವೇಳೆ ಏಕಾಏಕಿ ಪ್ರತ್ಯಕ್ಷವಾದ ಚಿರತೆ ಅದರ ಮೇಲೆ ಎರಚಾಡಿದೆ. ಆದರೆ, ಎಷ್ಟೇ ದೊಡ್ಡ ಮೈಕಟ್ಟು ಹೊಂದಿರುವ ಚಿರತೆಯಾಗಿದ್ದರೂ, ಎದೆಗುಂದದ ಆ ಸಾಕು ನಾಯಿ ತನ್ನ ಪ್ರಾಣ ರಕ್ಷಣೆಗಾಗಿ ಚಿರತೆಯೊಡನೆ ತೀವ್ರವಾಗಿ ಹೋರಾಡಿದೆ. ಬಾಗಿಲ ಬಳಿಯೇ ನಡೆದ ಈ ಕದನದಲ್ಲಿ ನಾಯಿ ಬಿಟ್ಟುಕೊಡದೆ ಪ್ರತಿರೋಧ ಒಡ್ಡಿದ ಪರಿಣಾಮ, ಕಂಗಾಲಾದ ಚಿರತೆ ಕೊನೆಗೆ ಕಾಲ್ಕಿತ್ತಿದೆ. ಅಷ್ಟೇ ಅಲ್ಲದೆ, ಪ್ರಾಣಾಪಾಯದಿಂದ ಪಾರಾದ ಆ ಧೈರ್ಯಶಾಲಿ ನಾಯಿ ಓಡಿಹೋಗುತ್ತಿದ್ದ ಚಿರತೆಯ ಬೆನ್ನಟ್ಟಿ ಹೋಗಿದೆ. ನಂತರ ಮನೆಯೊಳಗಿಂದ ವ್ಯಕ್ತಿಯೊಬ್ಬರು ಹೊರಬಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸ್ಥಳೀಯರಲ್ಲಿ ಹೆಚ್ಚಿದ ಆತಂಕ:
ಈ ಘಟನೆಯಿಂದ ಪ್ರಾಣಾಪಾಯ ತಪ್ಪಿದರೂ, ಸುತ್ತಮುತ್ತಲಿನ ನಿವಾಸಿಗಳು ತೀವ್ರ ಭಯಭೀತರಾಗಿದ್ದಾರೆ. ಕಳೆದ ಕೆಲವು ವಾರಗಳಿಂದ ಜನವಸತಿ ಪ್ರದೇಶಗಳ ಹತ್ತಿರ ಚಿರತೆಗಳ ಓಡಾಟ ವಿಪರೀತವಾಗಿದ್ದು, ಸಾರ್ವಜನಿಕರು ಹಾಗೂ ಸಾಕುಪ್ರಾಣಿಗಳ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿ ವೇಳೆ ಗಸ್ತು ತಿರುಗುವುದನ್ನು ಹೆಚ್ಚಿಸಬೇಕು ಎಂದು ಸ್ಥಳೀಯರು





Leave a comment