Home ದಾವಣಗೆರೆ ಸೆಪ್ಟೆಂಬರ್ 30 ಕೊನೆಯ ದಿನ: ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾಭ್ಯಾಸ ಸಾಲ!
ದಾವಣಗೆರೆಬೆಂಗಳೂರು

ಸೆಪ್ಟೆಂಬರ್ 30 ಕೊನೆಯ ದಿನ: ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾಭ್ಯಾಸ ಸಾಲ!

Share
ನೀಟ್
Share

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಆಯ್ಕೆಯಾಗಿರುವ ಸಿಇಟಿ (CET) ಮತ್ತು ನೀಟ್ (NEET) ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ‘ಅರಿವು ನವೀಕರಣ ಸಾಲ ಯೋಜನೆ’ಯ (Arivu Renewal Loan Scheme) ಅಡಿಯಲ್ಲಿ ವಿದ್ಯಾಭ್ಯಾಸ ಸಾಲಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಗೆ ತಂದಿರುವ ಈ ಯೋಜನೆಯು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಬಹಳ ಸಹಕಾರಿಯಾಗಿದೆ. ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಇ, ಬಿ.ಆರ್ಕ್, ಬಿ.ಟೆಕ್, ಬಿ.ಆಯುಷ್, ಬಿ.ಎಸ್‍ಸಿ (ಅಗ್ರಿ, ಫಿಶರೀಸ್, ವೆಟರ್ನರಿ), ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿ.ಫರ್ಮಾ, ಎಂ.ಫರ್ಮಾ ಹಾಗೂ ಫರ್ಮಾ.ಡಿ ಮುಂತಾದ ಉನ್ನತ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ಕ್ರಿಶ್ಚಿಯನ್ ಸಮುದಾಯವನ್ನು ಹೊರತುಪಡಿಸಿ) ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಆಸಕ್ತ ವಿದ್ಯಾರ್ಥಿಗಳು ನಿಗಮದ ಅಧಿಕೃತ ವೆಬ್‌ಸೈಟ್ ಆದ kmdconline.karnataka.gov.in ಮೂಲಕ ಸೆಪ್ಟೆಂಬರ್ 30 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ಸಲ್ಲಿಸಿದ ಬಳಿಕ, ಅದರ ಹಾರ್ಡ್ ಕಾಪಿಗಳನ್ನು ಹಾಗೂ ‘ಇಂಡೆಮ್ನಿಟಿ ಬಾಂಡ್’ (Indemnity Bond) ಅನ್ನು ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:

ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಕುರುಬರ ಹಾಸ್ಟೆಲ್ ಕಟ್ಟಡ, ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ-577002. ದೂರವಾಣಿ ಸಂಖ್ಯೆ: 8277944215 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *