ದಾವಣಗೆರೆ: ನಗರದಲ್ಲಿ ನಿರ್ವಹಣಾ ಕಾರ್ಯ ಹಾಗೂ ದುರಸ್ತಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 60+40 ಎಂ.ಎಲ್.ಡಿ ಸಾಮರ್ಥ್ಯದ ಬಾತಿ ನೀರು ಶುದ್ಧೀಕರಣ ಘಟಕದಲ್ಲಿ ಹಾಗೂ ಶುದ್ಧೀಕರಿಸಿದ ನೀರಿನ ಪ್ರಮುಖ ಪೈಪ್ಲೈನ್ನಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.
ಈ ಕಾರಣದಿಂದಾಗಿ ಬರುವ ಸೆಪ್ಟೆಂಬರ್ 9 ಮತ್ತು 10 ರಂದು ದಾವಣಗೆರೆ ನಗರದಾದ್ಯಂತ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಮಹಾಂತೇಶ್ ಅಧಿಕೃತವಾಗಿ ತಿಳಿಸಿದ್ದಾರೆ.
ಪೈಪ್ಲೈನ್ ಮತ್ತು ಶುದ್ಧೀಕರಣ ಘಟಕದ ದೋಷಗಳನ್ನು ಸರಿಪಡಿಸಲು ಈ ಕಾಮಗಾರಿ ಅತ್ಯಗತ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕರು ನೀರನ್ನು ಪೋಲು ಮಾಡದೆ, ಮಿತವಾಗಿ ಬಳಸಿ ಹಾಗೂ ಮುನ್ನೆಚ್ಚರಿಕೆಯಾಗಿ ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಪಾಲಿಕೆ ಕಡೆಯಿಂದ ಮನವಿ ಮಾಡಲಾಗಿದೆ.
- Bathi water purification plant
- DAVANAGERE LATEST NEWS
- Davanagere Mahanagara Palika
- Davanagere Water Supply Disruption
- Davanagere Water Supply News.
- Dr Mahantesh
- drinking water cut
- Karnataka Local News.
- pipeline repair work
- ಕುಡಿಯುವ ನೀರು ವ್ಯತ್ಯಯ
- ಡಾ ಮಹಾಂತೇಶ್
- ದಾವಣಗೆರೆ ನೀರು ಸರಬರಾಜು
- ದಾವಣಗೆರೆ ಪಾಲಿಕೆ
- ದಾವಣಗೆರೆ ಸುದ್ದಿ
- ಪೈಪ್ಲೈನ್ ದುರಸ್ತಿ
- ಬಾತಿ ನೀರು ಶುದ್ಧೀಕರಣ ಘಟಕ





Leave a comment