SUDDIKSHANA KANNADA NEWS/ DAVANAGERE/ DATE:11-09-2023
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ (Karnataka Gruha Lakshmi Scheme) ಯೋಜನೆಯಡಿ ಮನೆ ಯಜಮಾನಿಗೆ ನೀಡುವ 2000 ರೂಪಾಯಿ ಅಕೌಂಟ್ ಗೆ ಬಂದಿಲ್ಲವಾ. ಬಂದಿದ್ದರೆ ಚೆಕ್ ಮಾಡುವುದು ಹೇಗೆ? ಹಣ ಬಾರದಿರುವುದಕ್ಕೆ ಕಾರಣವೇನು ಎಂಬ ಕುರಿತು ಇಲ್ನೋಡಿ.
ಗೃಹಲಕ್ಷ್ಮಿ (Karnataka Gruha Lakshmi Scheme) ಹಣ ಬಾರದಿದ್ದಲ್ಲಿ ಏನು ಮಾಡಬೇಕು ಎಂಬ ಕುತೂಹಲ ಮಹಿಳೆಯರಲ್ಲಿದೆ. ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಮೊಬೈಲ್ ಗೆ ಮೆಸೇಜ್ ಸಹ ಬಂದಿದೆ. ಆದರೂ ಕೆಲವರ ಅಕೌಂಟ್ ಗೆ ಹಣ ಕ್ರೆಡಿಟ್ ಆಗಿಲ್ಲ.
ಗೃಹಲಕ್ಷ್ಮೀ ಯೋಜನೆಯಡಿ ಲಕ್ಷಾಂತರ ಮಹಿಳೆಯರಿಗೆ ಹಣ ಸಂದಾಯವಾಗಿದ್ದರೂ ಅಸಂಖ್ಯಾತ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ದುಡ್ಡು ಬಂದಿಲ್ಲ. ರಾಜ್ಯ ಸರ್ಕಾರವೇ ಹೇಳಿರುವಂತೆ 1.1 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಯೋಜನೆ ಜಾರಿಯಾಗಿ ಹತ್ತು ದಿನ ಕಳೆಯುತ್ತಾ ಬಂದಿದ್ದರೂ ಹಣ ಬಾರದ ಕಾರಣ ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:
(Davanagere): ಶಕ್ತಿ ಯೋಜನೆ ವಿರೋಧಿಸಿ ದಾವಣಗೆರೆಯಲ್ಲಿ ಇಲ್ಲ ಬಂದ್: ಎಂದಿನಂತೆ ಖಾಸಗಿ ಬಸ್ ಗಳ ಸಂಚಾರ
ಇಷ್ಟಕ್ಕೂ ಗೃಹಲಕ್ಷ್ಮೀಯ ಹಣ ಖಾತೆಗೆ ಬಾರದೇ ಇದ್ದ ಮಹಿಳೆಯರು ಏನು ಮಾಡಬೇಕು ಎಂಬ ಗೊಂದಲ ಇದ್ದೇ ಇರುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿಯೂ ನಿಮಗೆ ಹಣ ಬಂದಿಲ್ಲ ಎಂದಾದರೆ ಸರ್ಕಾರವೇ ಸಹಾಯವಾಣಿ ಸಂಖ್ಯೆಯನ್ನು ಕೊಟ್ಟಿದೆ.
ಪಡಿತರ ಚೀಟಿ, ಬ್ಯಾಂಕ್ ಅಕೌಂಟ್, ಆಧಾರ್ ನಂಬರ್ ಮಿಸ್ ಮ್ಯಾಚ್ ಆಗಿದ್ದಲಿ ಇದರ ಮಾಹಿತಿಯನ್ನು ನೀಡಲು ಇಲಾಖೆ ಸಹಾಯವಾಣಿಯ ನಂಬರ್ ವೊಂದನ್ನು ನೀಡಿದೆ. ಅರ್ಜಿಯ ಸ್ಟೇಟಸ್ ಪರಿಶೀಲಿಸಲು ಈ ಸಹಾಯವಾಣಿ ನೆರವಾಗಲಿದೆ.
8147500500 ಈ ನಂಬರ್ ಗೆ ನಿಮ್ಮ ಆಧಾರ್ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ಮೆಸೆಜ್ ಮಾಡಿ. ಹೀಗೆ ಮೆಸೆಜ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆ ಆಧರಿಸಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಂದೇಶ ಬರಲಿದೆ.
ಈ ಮೂಲಕ ನಿಮಗೆ ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು. ಏನಾದರೂ ಇದ್ದರೆ ನ್ಯೂನತೆ ಸರಿಪಡಿಸಿಕೊಳ್ಳಬಹುದು. ನಿಮ್ಮ ಗೊಂದಲ, ಅನುಮಾನಕ್ಕೆ ಈ ನಂಬರ್ ಮೆಸೇಜ್ ನಲ್ಲಿ ಗೊತ್ತಾಗಲಿದೆ.
ಅರ್ಜಿ ಅಸ್ವೀಕೃತವಾಗಿದ್ದರೇ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆಯೂ ಮಾಹಿತಿ ಬರಲಿದೆ. ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಹೆಸರನ್ನು ತಿದ್ದುಪಡಿ ಮಾಡಿಸಲು ಸಪ್ಟೆಂಬರ್ 1 ರಿಂದ 10 ರವರೆಗೆ ಅವಕಾಶ ನೀಡಲಾಗಿತ್ತು. ಈಗ
ಅವಧಿಯನ್ನು ಸಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1.28 ಫಲಾನುವಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 1.11 ಕೋಟಿ ಮಹಿಳೆಯರು ಮಾತ್ರ ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಗೃಹಲಕ್ಷ್ಮೀ ನೋಂದಣಿಗೆ ಯಾವುದೇ ಕೊನೆಯ ದಿನಾಂಕ
ನಿಗದಿಪಡಿಸಿಲ್ಲ. ಹಾಗಾಗಿ ಅರ್ಜಿ ಸಲ್ಲಿಸುವವರು ಏನಾದರೂ ತಿದ್ದುಪಡಿ ಇದ್ದರೆ ಮಾಡಿಸಿಕೊಳ್ಳಬಹುದು.