• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, May 9, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ನಮನ ಅಕಾಡೆಮಿ “ಶಿವ ಸ್ಮರಣೆ ನೃತ್ಯ ಜಾಗರಣೆ”ಗೆ ಜನರು ಫಿದಾ!

Editor by Editor
February 27, 2025
in ದಾವಣಗೆರೆ
0
ನಮನ ಅಕಾಡೆಮಿ “ಶಿವ ಸ್ಮರಣೆ ನೃತ್ಯ ಜಾಗರಣೆ”ಗೆ ಜನರು ಫಿದಾ!

SUDDIKSHANA KANNADA NEWS/ DAVANAGERE/ DATE:27-02-2025

ದಾವಣಗೆರೆ: ನಮನ ಅಕಾಡೆಮಿಯು ಸತತ ಐದು ವರ್ಷಗಳಿಂದ ಆಯೋಜಿಸುತ್ತಿರುವ “ಶಿವ ಸ್ಮರಣೆ ನೃತ್ಯ ಜಾಗರಣೆ” ಕಾರ್ಯಕ್ರಮವು ಈ ವರ್ಷವೂ ವಿಜೃಂಭಣೆಯಿಂದ ನಡೆಯಿತು. ರಾತ್ರಿ 9 ಗಂಟೆಯಿಂದ ಬೆಳಗಿನ  ಜಾವ 4 ಗಂಟೆಯವರೆಗೂ ಸತತವಾಗಿ ದಾವಣಗೆರೆಯ ನಾಲ್ಕು ಹೆಸರಾಂತ ದೇವಾಲಯಗಳಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆ ನಗರದ ರಿಂಗ್ ರಸ್ತೆಯ ಶಾರದಾ ಮಂದಿರದಲ್ಲಿ ನೆರವೇರಿತು.

ನೃತ್ಯ ಜಾಗರಣೆಯ ವೈಶಿಷ್ಟ್ಯತೆ:

ಈ ವರ್ಷದ ನೃತ್ಯ ಜಾಗರಣೆಯು ರಾತ್ರಿ 9.30ಕ್ಕೆ ಶಾರದಾ ಮಂದಿರದಲ್ಲಿ ಪ್ರಾರಂಭವಾಗಿ ನಂತರ ಲಿಂಗೇಶ್ವರ ದೇವಸ್ಥಾನದಲ್ಲಿ ತದನಂತರ ಕೂಡಲಿ ಶಂಕರ ಮಠದಲ್ಲಿ ಅಂತಿಮವಾಗಿ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಪ್ರಥಮ ನೃತ್ಯ ಗಣೇಶ ಸ್ತುತಿಯಲ್ಲಿ ಗಣೇಶನ ಮಹಿಮೆ ಹಾಗೂ ಎಲ್ಲಾ ದೇವತೆಗಳಿಂದ ಅವನ ಆರಾಧನೆಯನ್ನು ಈ ನೃತ್ಯ ರೂಪದಲ್ಲಿ ತೋರಿಸಲಾಯಿತು.

ಈ ಐದನೇ ವರ್ಷದ ನೃತ್ಯ ಜಾಗರಣೆಗೆ ವಿಶೇಷವಾಗಿ ಸಂಯೋಜಿಸಲಾದ 14 ನಿಮಿಷಗಳ ವರ್ಣಂ, ಭರತನಾಟ್ಯ ಮಾರ್ಗಂನ ಪ್ರಮುಖ ಹಂತವಾಗಿದ್ದು, ಗಂಗಾ ವರ್ಣಂ ಗಂಗೆಯ ಪವಿತ್ರತೆ, ವಾಮನ ಅವತಾರದ ಸಂದರ್ಭದಲ್ಲಿನ ಗಂಗೆಯ ಉದ್ಭವ ಹಾಗೂ ಸಗರ ರಾಜನ 60,000 ಪುತ್ರರ ವಿಮೋಚನೆಗೆ ಗಂಗೆಯ ಉದ್ಭವಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸಲಾಯಿತು. ಈ ವಿಶೇಷ ಪ್ರಸ್ತುತಿಯು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಪಾಲಿನಿ ನೃತ್ಯದಲ್ಲಿ ಶಿವನ ರೌದ್ರಾವತಾರ, ವಿಷಪಾನ ಹಾಗೂ ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ ಅವನಿಗೆ ಶಿವನ ಆಶೀರ್ವಾದ ದೊರಕುವ ದೃಶ್ಯಗಳನ್ನು ಅಭಿನಯಿಸಲಾಯಿತು. ಅರ್ಧನಾರೀಶ್ವರ ಪ್ರಸ್ತುತಿಯಲ್ಲಿ ಶಿವ-ಪಾರ್ವತಿಯ ಸಮತ್ವವನ್ನು ಪ್ರತಿಪಾದಿಸುವ ಅರ್ಧನಾರೀಶ್ವರ ನೃತ್ಯಬಂಧ ಪ್ರಸ್ತುತವಾಯಿತು.

“ಶಿವ ಸ್ಮರಣೆ ನೃತ್ಯ ಜಾಗರಣೆ” ಕಾರ್ಯಕ್ರಮವು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದು, ಸಂಭ್ರಮದಿಂದ ನೆರವೇರಿತು. ಈ ಎಲ್ಲ ನೃತ್ಯ ಪ್ರಸ್ತುತಿಗಳನ್ನು ನಮನ ಅಕಾಡೆಮಿಯ 10 ವಿದ್ಯಾರ್ಥಿಗಳು ಹಾಗೂ ಅವರ ಗುರು ವಿದುಷಿ ಶ್ರೀಮತಿ ಮಾಧವಿ ಡಿ. ಕೆ. ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು.

ಉದ್ಘಾಟನಾ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಬಿ, ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ. ಟಿ. ಅಚ್ಯುತ ಹಾಗೂ ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ನೆರವೇರಿಸಿದರು.

ಉದ್ಘಾಟನಾ ಭಾಷಣದಲ್ಲಿ ಡಾ. ಬಿ. ಟಿ. ಅಚ್ಯುತ ಅವರು ನಮನ ಅಕಾಡೆಮಿಯ ಗುರುಗಳು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ಶಿವರಾತ್ರಿಯಂದು ವಿಶೇಷ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಪ್ರದರ್ಶಿಸುತ್ತಿರುವುದನ್ನು ಶ್ಲಾಘಿಸಿದರು.
“ಶಿವನ ಕುರಿತಾದ ಶಾಸ್ತ್ರೀಯ ಹಾಡುಗಳಿಗೆ ಶಾಸ್ತ್ರೀಯ ನೃತ್ಯವನ್ನು ಸಂಯೋಜಿಸಿ, ನಮ್ಮ ಭಾರತೀಯ ಸಂಸ್ಕೃತಿಯನ್ನು ಪೋಷಿಸಿ, ಬೆಳೆಸುವ ಕಾರ್ಯವನ್ನು ನಮನ ಅಕಾಡೆಮಿ ಮಾಡುತ್ತಿದೆ. ಶ್ರೀ ಶಾರದಾಂಬೆಯ ಆಶೀರ್ವಾದದಿಂದ ಈ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ,” ಎಂದು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಬಿ. ಅವರು ನಮನ ಅಕಾಡೆಮಿಯ ವೈಶಿಷ್ಟ್ಯವನ್ನು ಮೆಚ್ಚಿ, “ನಾನು ಈ ಅಕಾಡೆಮಿಯ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಪ್ರತಿಯೊಂದು ಕಾರ್ಯಕ್ರಮವೂ ವಿಭಿನ್ನವಾಗಿದ್ದು, ಶ್ರಮ ಹಾಗೂ ಅಭ್ಯಾಸದ ಫಲವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ, ನಮ್ಮ ಇಲಾಖೆಯ ಸಹಕಾರ ಸದಾ ಅವರಿಗೆ ಇರುತ್ತದೆ,” ಎಂದು ತಿಳಿಸಿದರು.

ಅಕಾಡೆಮಿಯ ಅಧ್ಯಕ್ಷ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ನಿರ್ದೇಶಕ ಅನಿಲ್ ಬಾರಂಗಳ್ ಸ್ವಾಗತಿಸಿದರು. ನಿರ್ದೇಶಕ ರಾಮನಾಥ್ ಪಿ. ಸಿ. ವಂದಿಸಿದರು. ನೃತ್ಯ ಪ್ರಸ್ತುತಿಗಳ ನಿರೂಪಣೆಯನ್ನು ಕುಮಾರಿ ಯುಕ್ತ ಎಸ್. ಕಟಾರೆ ಮನೋಜ್ಞವಾಗಿ ನಡೆಸಿಕೊಟ್ಟರು.

Next Post
ಮಾ. 21ರಿಂದ ಏಪ್ರಿಲ್ 4ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ: ಯಾವೆಲ್ಲಾ ಸೂಚನೆಗಳ ನೀಡಲಾಗಿದೆ…?

ಮಾ. 21ರಿಂದ ಏಪ್ರಿಲ್ 4ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ: ಯಾವೆಲ್ಲಾ ಸೂಚನೆಗಳ ನೀಡಲಾಗಿದೆ...?

Leave a Reply Cancel reply

Your email address will not be published. Required fields are marked *

Recent Posts

  • ಆಪರೇಷನ್ ಸಿಂಧೂರ ನಡೆದ ದಿನ ಜನಿಸಿದ ಮಗುವಿಗೆ “ಸಿಂಧೂರಿ” ಹೆಸರಿಟ್ಟ ದಂಪತಿ!
  • ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಗೆ ಸಾನಿಯಾ ಮಿರ್ಜಾ ಬಹುಪರಾಕ್!
  • ಪಾಕಿಸ್ತಾನದ ಹಲವು ನೆಲೆಗಳು ಉಡೀಸ್, 50 ಡ್ರೋಣ್ ಗಳು ಪೀಸ್ ಪೀಸ್!
  • ಪಾಕಿಸ್ತಾನದ F-16 ಮತ್ತು ಎರಡು JF-17 ವಿಮಾನ ಹೊಡೆದುರುಳಿಸಿದ ಭಾರತ!
  • ಈ ರಾಶಿಯವರಿಗೆ ವಿದೇಶ ಪ್ರವಾಸ ಯೋಗ: ಈ ರಾಶಿಯವರ ಜೊತೆ ನೀವು ಮದುವೆಯಾದರೆ ನಿಮ್ಮಂತ ಅದೃಷ್ಟಶಾಲಿ ಯಾರು ಇಲ್ಲ!

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In