SUDDIKSHANA KANNADA NEWS/ DAVANAGERE/ DATE:23-02-2025
ದಾವಣಗೆರೆ: ಮದುವೆ ದಿನವೇ ಹಣ, ಆಭರಣ ಕಳ್ಳತನ ಮಾಡಿದ ಘಟನೆ ನಗರದ ಪಕ್ಕದ ಬೇತೂರು ಗ್ರಾಮದಲ್ಲಿ ನಡೆದಿದೆ.
ಬೇತೂರು ಚನ್ನಪ್ಪ ಎಂಬುವರ ಮದುವೆ ಮನೆಯಲ್ಲಿ ಕಳ್ಳತನ ಸಂಭವಿಸಿದ್ದು, 13 ತೊಲ ಬಂಗಾರ, ಒಂದುವರೆ ಕೆಜಿ ಬೆಳ್ಳಿ , 4.50ಲಕ್ಷ ಹಣ ಕಳ್ಳತನ ಆಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಮದುವೆ ಮನೆಯಲ್ಲಿ ಕಳ್ಳತನದಿಂದ ಸಂಭ್ರಮ ಕುಂದಿದೆ. ಚನ್ನಪ್ಪ ಅವರ ಪುತ್ರನ ಮದುವೆ ಇತ್ತು. ಮನೆಗೆ ಬೀಗ ಹಾಕಿ ದಾವಣಗೆರೆಯ ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರು ವಾಪಸ್ ಮನೆಗೆ ಬರುತ್ತಿದ್ದಂತೆ ಶಾಕ್ ಗೆ ಒಳಗಾಗಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿ ಕಳ್ಳರು ಕಳ್ಳತನ ಮಾಡಿದ್ದು, ಮದುವೆ ದಿನ ಕಳ್ಳತನವಾಗಿದ್ದರಿಂದ ಮದುವೆ ಸಂಭ್ರಮ ಮರೆತ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. 13 ತೊಲ ಬಂಗಾರ ಕನಿಷ್ಠ ಎಂದರೂ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಇನ್ನು ಒಂದೂವರೆ ಕೆಜಿ ಬೆಳ್ಳಿ, 4.5 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಹೋಗಿದ್ದು, ಮನೆಯವರು ಸಾಲ ಸೋಲ ಮಾಡಿ ಹಣ ಹೊಂದಿಸಿದ್ದರು. ಕಳ್ಳರ ಕೃತ್ಯದಿಂದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಆತಂಕ ತಂದಿದೆ.
ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಆಗಮಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.