ದಾವಣಗೆರೆ: ಛತ್ತೀಸ್‌ಗಢದ ರಾಯ್‌ಪುರದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಮಟ್ಟದ ಕ್ಲಾಸಿಕ್ / ಇಕ್ವಿಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್-2026ರಲ್ಲಿ ನಗರದ ಜಿಎಂ ವಿಶ್ವವಿದ್ಯಾಲಯದ ಕ್ರೀಡಾಪಟುಗಳು 3 ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಜಿಎಂಯು ವಿದ್ಯರ‍್ಥಿ ಕ್ಷೇಮಪಾಲನಾ ನರ‍್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಹಯೋಗದೊಂದಿಗೆ ಸ್ರ‍್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯರ‍್ಥಿಗಳು ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಂಪ್ಯೂಟರ್ ಸೈನ್ಸ್ (ಕ್ಲೌಡ್ ಕಂಪ್ಯೂಟಿಂಗ್) ವಿಭಾಗದ ವಿದ್ಯರ‍್ಥಿ ಫಾಜಿಲ್ ಅಹಮದ್, 105 ಕೆಜಿ ವಿಭಾಗದಲ್ಲಿ ಒಟ್ಟು 485 ಕೆಜಿ ತೂಕ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) ವಿಭಾಗದ ವಿದ್ಯರ‍್ಥಿ ಗಗನ್ ಡಿ.ಹೆಚ್, 69 ಕೆಜಿ ವಿಭಾಗದಲ್ಲಿ ಒಟ್ಟು 450 ಕೆಜಿ ತೂಕ ಎತ್ತಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಪದಕ ವಿಜೇತ ವಿದ್ಯಾರ್ಥಿಗಳ ವಿವರ
| ವಿದ್ಯಾರ್ಥಿಯ ಹೆಸರು | ವಿಭಾಗ (ಕೋರ್ಸ್) | ಸ್ಪರ್ಧಿಸಿದ ವಿಭಾಗ | ಎತ್ತಿದ ಒಟ್ಟು ತೂಕ | ಸಾಧಿಸಿದ ಪದಕ |
| ಫಾಜಿಲ್ ಅಹಮದ್ | ಕಂಪ್ಯೂಟರ್ ಸೈನ್ಸ್ (ಕ್ಲೌಡ್ ಕಂಪ್ಯೂಟಿಂಗ್) | 105 ಕೆಜಿ | 485 ಕೆಜಿ | ಚಿನ್ನ (ಪ್ರಥಮ) |
| ಗಗನ್ ಡಿ.ಹೆಚ್ | ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) | 69 ಕೆಜಿ | 450 ಕೆಜಿ | ಬೆಳ್ಳಿ (ದ್ವಿತೀಯ) |
| ಸಿದ್ಧಾರ್ಥ ಎನ್.ಎಮ್ | ರೋಬೋಟಿಕ್ಸ್ ಮತ್ತು ಆಟೋಮೇಷನ್ | 56 ಕೆಜಿ | 282.5 ಕೆಜಿ |
ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ವಿದ್ಯರ‍್ಥಿ ಸಿದ್ದರ‍್ಥ ಎನ್.ಎಮ್, 56 ಕೆಜಿ ವಿಭಾಗದಲ್ಲಿ ಒಟ್ಟು 282.5 ಕೆಜಿ ತೂಕ ಎತ್ತುವ ಮೂಲಕ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ.
ಕ್ರೀಡಾಪಟುಗಳ ಈ ಅದ್ಭುತ ಸಾಧನೆಗೆ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜ್, ಕುಲಪತಿಗಳಾದ ಎಸ್.ಆರ್. ಶಂಕಪಾಲ್, ಉಪಕುಲಪತಿಗಳಾದ ಡಾ. ಎಂ. ವೇಣುಗೋಪಾಲ್ ರಾವ್, ಕುಲಸಚಿವರಾದ ಸುನೀಲ್ ಕುಮಾರ್ ಬಿ.ಎಸ್, ವಿದ್ಯರ‍್ಥಿ ವ್ಯವಹಾರಗಳ ನರ‍್ದೇಶನಾಲಯ ನರ‍್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್, ಉಪ ನರ‍್ದೇಶಕರಾದ ಎಂ. ಸಂತೋಷ್ ಕುಮಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನರ‍್ದೇಶಕರಾದ ಜಿ.ಬಿ. ಅಜಯ್ಯ ಸೇರಿದಂತೆ ಸಂಬಂಧಿಸಿದ ವಿಭಾಗಗಳ ಡೀನ್ ಗಳು, ನರ‍್ದೇಶಕರು, ಮುಖ್ಯಸ್ಥರು, ಬೋಧಕ ವೃಂದ ಮತ್ತು ಸಹಪಾಠಿಗಳು ರ‍್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
- Chhattisgarh Raipur Powerlifting
- Davangere News
- Fazil Ahmed Powerlifting
- Gagan D H
- GM University Davangere
- GMU Powerlifting Champions
- GMU Sports Achievements
- Karnataka Sports News
- National Powerlifting Championship 2026 Raipur
- Siddharth N M
- ಗಗನ್ ಡಿ ಹೆಚ್
- ಜಿಎಂ ವಿಶ್ವವಿದ್ಯಾಲಯ
- ಜಿಎಂಯು ಕ್ರೀಡಾಪಟುಗಳು
- ದಾವಣಗೆರೆ ಕ್ರೀಡಾ ಸುದ್ದಿ
- ದಾವಣಗೆರೆ ಸುದ್ದಿ
- ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ 2026
- ಫಾಜಿಲ್ ಅಹಮದ್
- ರಾಯ್ಪುರ ಪವರ್‌ಲಿಫ್ಟಿಂಗ್
- ರಾಷ್ಟ್ರೀಯ ಪವರ್‌ಲಿಫ್ಟಿಂಗ್
- ಸಿದ್ಧಾರ್ಥ ಎನ್ ಎಮ್





Leave a comment