SUDDIKSHANA KANNADA NEWS/ DAVANAGERE/ DATE:11-02-2025
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಹೆಚ್ಚಾಗಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ವಂಚಕರ ಜಾಲ ದೊಡ್ಡದಾಗುತ್ತಿದೆ. ಹಾಗಾಗಿ, ಸೈಬರ್ ವಂಚಕರು ಕರೆ ಮಾಡಿದರೆ 24 ಗಂಟೆಯೊಳಗೆ cybercrime.gov.in ದೂರು ಸಲ್ಲಿಸುವಂತೆ ಸಲಹೆ ನೀಡಲಾಗಿದೆ.
ಇಂಟರ್ ನೆಟ್ ಅಪಾಯಗಳು:
ವೈರಸ್ ನ ಅಪಾಯಗಳು, ಹಣಕಾಸಿನ ವಂಚನೆಗಳು, ವೈಯಕ್ತಿಕ ಮಾಹಿತಿಯ ಕಳ್ಳತನ, ದಾರಿ ತಪ್ಪಿಸುವ ಮಾಹಿತಿ, ದ್ವೇಷ ಮತ್ತು ಸುಳ್ಳು ಮಾಹಿತಿಯ ಹರಡುವಿಕೆ, ಟ್ರೋಲ್ಗಳು, ಬೆದರಿಸುವಿಕೆ ಮತ್ತು ಕಿರುಕುಳ, ಕೆಲಸ- ಜೀವನ ಅಸಮತೋಲನ, ಆರೋಗ್ಯ ಸಮಸ್ಯೆಗಳು,ಅಂತರ್ಜಾಲದ ವ್ಯಸನ, ಗಮನದ ಕೊರತೆ, ಸ್ಪ್ಯಾಮ್ಗಳು,ಅನಿಯಂತ್ರಿತ ವೆಚ್ಚಗಳು, ವಂಚಕರು, ಹಣವನ್ನು ವಂಚಿಸಲು, ವೈಯಕ್ತಿಕ ಮಾಹಿತಿಯನ್ನು ಕದಿಯಲು, ಆನ್ಲೈನ್ ಬೆದರಿಸುವಿಕೆಗೆ ಪ್ರಯತ್ನಿಸುತ್ತಿರುತ್ತಾರೆ.
ಇವುಗಳಿಂದ ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನಮ್ಮನ್ನು ಮತ್ತು ನಮ್ಮ ಆತ್ಮೀಯರನ್ನು ರಕ್ಷಿಸಿಕೊಳ್ಳಬೇಕು. ಸೈಬರ್ ಸಹಾಯವಾಣಿಗೆ 1930 ಕರೆ ಮಾಡಿ ದೂರುಗಳನ್ನು ನೋಂದಾಯಿಸಿಕೊಳ್ಳಬಹುದು.
ರಾಷ್ಡ್ರೀಯ ಮಾಹಿತಿ ಕೇಂದ್ರದ ಅಧಿಕಾರಿ ಎಂ. ಎಸ್ .ರಮೇಶ್ ಮಾತಾನಾಡಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೈದ್ಯಕೀಯ ವಿವರಗಳು ಪಾಸ್ ಪೋರ್ಟ್ ವಿವರ, ಮೊಬೈಲ್ ಸಂಖ್ಯೆ ಜನ್ಮದಿನಾಂಕ ಈ ಯಾವುದೇ ಗುರುತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುರಕ್ಷಿತ ಅಂತರ್ಜಾಲ ಇಂಟರ್ನೆಟ್ ದಿನವನ್ನು ಉದ್ದೇಶಿಸಿ ಮಾತಾನಾಡಿದ ಅವರು ಸುರಕ್ಷಿತ ಬ್ರೌಸಿಂಗ್ ವಾಟ್ಸಪ್ ಸುರಕ್ಷಿತ ಸಂದೇಶ ಕಳುಹಿಸಲು ಅಧಿಕಾರಿಗಳು ಡೇಟಾವನ್ನು ಹಾಗೂ ನಿಮ್ಮ ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಒಟಿಪಿ ಮತ್ತು ನಿಮ್ಮ ಡಿಜಿಟಲ್ ಸಹಿ ಟೋಕನ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇತರರ ಸಾಧನಗಳಲ್ಲಿ ಸ್ಥಾಪಿಸಲಾದ ಅಪ್ಲಿಕೇಶನ್ಗಳನ್ನು ನಿಮ್ಮ ವಿವರಗಳೊಂದಿಗೆ ನೋಂದಾಯಿಸಬಾರದು. ನೀವು ಡೇಟಾವನ್ನು ಹಂಚಿಕೊಳ್ಳಲು ಅಧಿಕಾರ ಹೊಂದಿದ್ದರೆ, ಡೇಟಾವನ್ನು ಪಾಸ್ವರ್ಡ್ ರಕ್ಷಿತ ಫೈಲ್ಗಳೊಂದಿಗೆ ಮಾತ್ರ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಹಿತಿ ತಂತ್ರಜ್ಞಾನ ಈ ಕಾಲಘಟ್ಟದಲ್ಲಿ ಇಂಟರ್ ನೆಟ್ ಬಹಳ ಮುಖ್ಯವಾಗಿದ್ದು ಇದನ್ನು ಸದುದ್ದೇಶಕ್ಕೆ ಬಳಕೆಯಾಗಲಿ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ .ಲೋಕೇಶ್ ತಿಳಿಸಿದರು.
ಇತ್ತೀಚಿಗಿನ ದಿನಗಳಲ್ಲಿ ಯುವಜನತೆ ಅಂತರ್ಜಾಲ ಹೆಚ್ಚು ವೀಕ್ಷಣೆ ಮಾಡುವರು. ಇದನ್ನು ಜ್ಞಾನಾರ್ಜನೆಯ ದೃಷ್ಟಿಯಿಂದ ಬಳಕೆ ಮಾಡಿಕೊಳ್ಳಬೇಕು. ಜಾಗೃತಿ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗಿದೆ ಎಂದರು.
ಜಿಲ್ಲಾ ಸರ್ಜನ್ ನಾಗೇಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ಶಿರಸ್ತೇದಾರ್ ಶ್ರೀನಿವಾಸ್, ಹಾಗೂ ಪುಪ್ಪಾ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ರಾಕೇಶ್ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.