SUDDIKSHANA KANNADA NEWS/ DAVANAGERE/ DATE:12-02-2025
ದಾವಣಗೆರೆ: ಹರಿಯುತ್ತಿರುವ ತುಂಗಾಭದ್ರಾ ನದಿಯಲ್ಲಿ ಮೊಸಳೆಯೊಂದು ಆರು ಮರಿಗಳೊಂದಿಗೆ ಮರಳಿನಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಖಬರಸ್ಥಾನದ ಬಳಿ ಕಂಡು ಬಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜಮೀನಿಗೆ ನೀರು ಹಾಯಿಸಲು ನದಿಯಲ್ಲಿ ರೈತರು ಮೋಟಾರ್ ಅಳವಡಿಸಿದ್ದು, ಮೊಸಳೆಯು ಮರಿಗಳೊಂದಿಗೆ ಮಲಗಿರುವುದು ಕಂಡು ಬಂದಿದೆ. ಹಾಗಾಗಿ, ಫೋನ್ ಕರೆ ಮಾಡಿ ಅಕ್ಕಪಕ್ಕದ ಗ್ರಾಮದವರಿಗೆ ನದಿ ದಾಟುವಾಗ ಎಚ್ಚರ ವಹಿಸುವಂತೆ ಮಾಹಿತಿ ನೀಡಲಾಗಿದೆ.
ಕಳೆದ ವರ್ಷವೂ ಮೊಸಳೆ ಕಂಡು ಬಂದಿದ್ದು, ಇದೇ ಜಾಗದಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಭಯ ಹೆಚ್ಚಾಗುವಂತೆ ಮಾಡಿದೆ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮೊಸಳೆ ಮತ್ತು ಮರಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.