Home ದಾವಣಗೆರೆ ನಾನು ಅಮಿತ್ ಶಾ ಆಗಲು ಬಯಸುವುದಿಲ್ಲ, ಮೈತ್ರಿ ಒಡೆದಿಲ್ಲ: ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ!
ದಾವಣಗೆರೆನವದೆಹಲಿಬೆಂಗಳೂರು

ನಾನು ಅಮಿತ್ ಶಾ ಆಗಲು ಬಯಸುವುದಿಲ್ಲ, ಮೈತ್ರಿ ಒಡೆದಿಲ್ಲ: ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ!

Share
ಅಮಿತ್ ಶಾ
Share

ಬೆಂಗಳೂರು: “ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತೆ ರಾಜಕೀಯ ತಂತ್ರ ಮಾಡಲು ಬಯಸುವುದಿಲ್ಲ. ನಾನು ಕೇವಲ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷ ನೀಡಿದ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸುತ್ತಿದ್ದೇನೆ” ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ತಾವು ಒಡೆದಿಲ್ಲ ಎಂದು ಸ್ಪಷ್ಟಪಡಿಸಿದರು. “ರಾಜ್ಯದ ಭವಿಷ್ಯ ಅಡಗಿರುವುದು ಕಾಂಗ್ರೆಸ್ ಸರ್ಕಾರದಲ್ಲೇ ಎಂದು ಪ್ರತಿಪಕ್ಷಗಳ ಶಾಸಕರೇ ನಂಬಿದ್ದಾರೆ. ಹೀಗಾಗಿಯೇ ರಾಜ್ಯಸಭಾ ಚುನಾವಣೆಯಲ್ಲಿ 12 ವಿರೋಧ ಪಕ್ಷದ ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಮತ ನೀಡಿದ್ದಾರೆ” ಎಂದು ಹೇಳಿದರು.

ಅಡ್ಡ ಮತದಾನದ ಕುರಿತು ವಿರೋಧ ಪಕ್ಷಗಳು ನಡೆಸಿದ ತನಿಖೆಯ ವರದಿ ಏನಾಯಿತು ಎಂದು ಪ್ರಶ್ನಿಸಿದ ಅವರು, “ತಮಗೆ ಮೊದಲೇ ಸೋಲು ಗೊತ್ತಿತ್ತು, ಶಾಸಕರ ಆಂತರಂಗ ತಿಳಿಯಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ” ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದನ್ನು ನೆನಪಿಸಿದರು. ಇದೇ ವೇಳೆ, ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ಇನ್ನಷ್ಟು ಅಚ್ಚರಿ ಹಾಗೂ ದೊಡ್ಡ ಬದಲಾವಣೆಗಳು ನಡೆಯಲಿವೆ ಎಂಬ ಸೂಚನೆಯನ್ನು ನೀಡಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.