Home ದಾವಣಗೆರೆ ದಾವಣಗೆರೆಯ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ರೂ.6000 ವಿದ್ಯಾರ್ಥಿವೇತನ: ಅಂಚೆ ಇಲಾಖೆಯಿಂದ ಅರ್ಜಿ ಆಹ್ವಾನ!
ದಾವಣಗೆರೆಬೆಂಗಳೂರುವಾಣಿಜ್ಯ

ದಾವಣಗೆರೆಯ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ರೂ.6000 ವಿದ್ಯಾರ್ಥಿವೇತನ: ಅಂಚೆ ಇಲಾಖೆಯಿಂದ ಅರ್ಜಿ ಆಹ್ವಾನ!

Share
ದಾವಣಗೆರೆ
Share

ದಾವಣಗೆರೆ: ಅಂಚೆ ಇಲಾಖೆ ವತಿಯಿಂದ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸಲು ದೀನ್ ದಯಾಳ್ ಸ್ಪರ್ಶ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಮಕ್ಕಳು ಪ್ರಸಕ್ತ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ.60 ರಷ್ಟು ಅಂಕವನ್ನು ಗಳಿಸಿರಬೇಕು. ಕಡ್ಡಾಯವಾಗಿ ಮಕ್ಕಳು ಅಂಚೆ ಚೀಟಿ ಠೇವಣಿ ಖಾತೆಯನ್ನು ಅಥವಾ ಅಂಚೆ ಚೀಟಿ ಕ್ಲಬ್‍ನ ಸದಸ್ಯರಾಗಿರಬೇಕು.

ದೀನ್ ದಯಾಳ್ ಸ್ಪರ್ಶ ಯೋಜನೆ (ವಿದ್ಯಾರ್ಥಿವೇತನ) – ಪ್ರಮುಖ ವಿವರಗಳು

  • ಆಯೋಜನೆ: ಅಂಚೆ ಇಲಾಖೆ (ದಾವಣಗೆರೆ ವಿಭಾಗ)

  • ಅರ್ಹತೆ: 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು (ಕಳೆದ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು)

  • ಪ್ರಮುಖ ಷರತ್ತು: ವಿದ್ಯಾರ್ಥಿಗಳು ಅಂಚೆ ಚೀಟಿ ಠೇವಣಿ ಖಾತೆ (Philatelic Deposit Account) ಅಥವಾ ಶಾಲೆಯ ಅಂಚೆ ಚೀಟಿ ಕ್ಲಬ್‍ನ ಸದಸ್ಯರಾಗಿರಬೇಕು.

  • ವಿದ್ಯಾರ್ಥಿವೇತನ ಮೊತ್ತ: ₹6,000/- (ವರ್ಷಕ್ಕೆ)

  • ಆಯ್ಕೆ ಪ್ರಕ್ರಿಯೆ: ಅಂಚೆ ಚೀಟಿ ಆಧಾರಿತ ಬಹು ಆಯ್ಕೆ (MCQ) ಲಿಖಿತ ಪರೀಕ್ಷೆ ಮತ್ತು ಪ್ರಾಜೆಕ್ಟ್ ಆಧಾರದ ಮೇಲೆ.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 10

ಸಂಪರ್ಕ ಮತ್ತು ಹೆಚ್ಚಿನ ಮಾಹಿತಿಗಾಗಿ:

ಆಸಕ್ತ ಶಾಲಾ ಆಡಳಿತ ಮಂಡಳಿಗಳು ಹಾಗೂ ವಿದ್ಯಾರ್ಥಿಗಳು ತಕ್ಷಣವೇ ದಾವಣಗೆರೆ ಅಂಚೆ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

ಅಂಚೆ ಚೀಟಿ ಬಹು ಆಯ್ಕೆ ಲಿಖಿತ ಪರೀಕ್ಷೆ ಮತ್ತು ಅಂಚೆ ಚೀಟಿ ಸಂಗ್ರಹ ಪ್ರಾಜೆಕ್ಟ್‍ನ ಆಧಾರದ ಮೇಲೆ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂ.6000/- ವಿದ್ಯಾರ್ಥಿವೇತನ ನೀಡಲಾಗುವುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನಾಂಕ.ದಾವಣಗೆರೆ ಶೈಕ್ಷಣಿಕ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಮತ್ತು ಶಾಲೆಗಳು ಮೊ.ನಂ 8861126883 ಅಥವಾ ವೆಬ್ ಸೈಟ್ www.indiapost.gov. ಅಥವಾ http://app.indiapost.gov.in/circleportal/karnataka ಗೆ ವೀಕ್ಷಿಸಬಹುದು ಎಂದು ಅಂಚೆ ಅಧೀಕ್ಷಕರಾದ ಎಸ್.ಪಿ ರವಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles