Home ದಾವಣಗೆರೆ ದಾವಣಗೆರೆಯಲ್ಲಿ ಈದ್ ಮಿಲಾದ್ ಆಚರಣೆ: ವಾಹನ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯಲ್ಲಿ ಈದ್ ಮಿಲಾದ್ ಆಚರಣೆ: ವಾಹನ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ನಗರದಲ್ಲಿ ಆಚರಿಸುವ ಈದ್ ಮಿಲಾದ್ ಹಬ್ಬದ ಆಚರಣೆ ಹಾಗೂ ಮೆರವಣಿಗೆ ಸಂಬಂಧ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಆಗಸ್ಟ್ 26 ರಂದು ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬದಲಾವಣೆ:

ಹರಿಹರ ಕಡೆಯಿಂದ ದಾವಣಗೆರೆಗೆ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಬರುವ ಎಲ್ಲಾ ಭಾರಿ ವಾಹನಗಳು ಅಂದರೆ ಸರಕು ಲಾರಿಗಳು, ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‍ಗಳು ಹರಿಹರ ನಗರದಿಂದಲೇ ದಾವಣಗೆರೆ ಕಡೆಗೆ ಬರುವ ಹಳೇ ಪಿ.ಬಿ ರಸ್ತೆಗೆ ಬಾರದೇ ಹರಿಹರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್.ಹೆಚ್-48 ರಸ್ತೆ ಮೂಲಕ ಆವರಗೆರೆ ಹತ್ತಿರದ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು.

ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ನಂತರ ಖಾಸಗಿ ಬಸ್‍ಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಎ.ಪಿ.ಎಂ.ಸಿ ಮಾರ್ಕೆಟ್‍ನಲ್ಲಿ ಪಾರ್ಕಿಂಗ್ ಮಾಡಬೇಕು.

ಚಿತ್ರದುರ್ಗದ ಕಡೆಯಿಂದ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕ ವಾಹನಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ಲಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು. ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ಖಾಸಗಿ ಬಸ್‍ಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಎ.ಪಿ.ಎಂ.ಸಿ ಮಾರ್ಕೆಟ್‍ನಲ್ಲಿ ಪಾರ್ಕಿಂಗ್ ಮಾಡಬೇಕು.

ಜಿಎಂಐಟಿ ಕಾಲೇಜ್ ಹತ್ತಿರ ತಾತ್ಕಾಲಿಕ ರಸ್ತೆ ಬದಿಯಲ್ಲಿ ನಿಲ್ಲಿಸುವಂತಹ ಗೂಡ್ಸ್ ಲಾರಿಗಳು ರಸ್ತೆಯ ಬದಿಯಲ್ಲಿ ನಿಲ್ಲಿಸದೇ ಖಾಸಗಿ ಪಾಕಿರ್ಂಗ್ ವ್ಯವಸ್ಥೆ ಮಾಡಿಕೊಳ್ಳಲು ಖಾಸಗಿ ಲಾರಿ ಮಾಲೀಕರ ಸಂಘದವರಿಗೆ ಹಾಗೂ ಆರ್.ಟಿ.ಓ ಅಧಿಕಾರಿಗಳಿಗೆ ಆದೇಶಿಸಲು ಕೋರಿರುವರು.

ಚನ್ನಗಿರಿ ಕಡೆಯಿಂದ ಹದಡಿ ಬ್ರಿಡ್ಜ್ ಮೂಲಕ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಬಾಡಾ ಕ್ರಾಸ್ ಮೂಲಕ ಆವರಗೆರೆ ಕಡೆಯಿಂದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು. ನಂತರ ಖಾಸಗಿ ಬಸ್‍ಗಳು ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್ ಹತ್ತಿರದ ಮೈದಾನದಲ್ಲಿ ಪಾಕಿರ್ಂಗ್ ಮಾಡುವುದು. ಚನ್ನಗಿರಿ ಕಡೆಯಿಂದ ಸರಕು ಲಾರಿಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಎ.ಪಿ.ಎಂ.ಸಿ ಮಾರ್ಕೇಟ್‍ನಲ್ಲಿ ಬಂದು ಪಾಕಿರ್ಂಗ್ ಮಾಡುವುದು.

ಜಗಳೂರು ಕಡೆಯಿಂದ ಬರುವ ಕೆ.ಎಸ್‍ಆರ್‍ಟಿಸಿ ಬಸ್‍ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವ ನಂತರ ಜಗಳೂರು ಕಡೆಯಿಂದ ಬರುವ ಖಾಸಗಿ ಬಸ್ ಗಳು ವೆಂಕಟೇಶ್ವರ ಸರ್ಕಲ್ ಗಣೇಶ ಹೋಟೆಲ್ ಸರ್ಕಲ್ ಮುಖಾಂತರ ಎ.ಪಿ.ಎಂ.ಸಿ ಮಾರ್ಕೆಟ್‍ನಲ್ಲಿ ಬಂದು ಪಾರ್ಕಿಂಗ್ ಮಾಡುವುದು. ಹಾಗೂ ಸರಕು ಲಾರಿಗಳು ಮೇಲ್ಕಂಡ ಮಾರ್ಗದಲ್ಲಿ ಸಂಚರಿಸಿ ಎ.ಪಿ.ಎಂ.ಸಿ ಮಾರ್ಕೆಟ್‍ಗೆ ಬರುವುದು.

ಹರಪನಹಳ್ಳಿ ಕಡೆಯಿಂದ ಬೆಂಡಿಗೆರೆ ಕಂಚಿಕೆರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಬೇತೂರು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಎಸ್‍ಆರ್‍ಟಿಸಿ ಬಸ್ ನಿಲ್ಯಾಣಕ, ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು. ನಂತರ ಹರಪನಹಳ್ಳಿ ಕಡೆಯಿಂದ ಕಂಚಿಕೆರೆ ಬೆಂಡಿಗೆರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಖಾಸಗಿ ಬಸ್‍ಗಳು ವೆಂಕಟೇಶ್ವರ ಸರ್ಕಲ್ ಗಣೇಶ ಹೋಟೆಲ್ ಸರ್ಕಲ್ ಮುಖಾಂತರ ಎಪಿಎಂಸಿ ಮಾರ್ಕೆಟ್‍ನಲ್ಲಿ ಬಂದು ಪಾರ್ಕಿಂಗ್ ಮಾಡುವುದು. ಹಾಗೂ ಸರಕು ಲಾರಿಗಳು ಮೇಲ್ಕಂಡ ಮಾರ್ಗದಲ್ಲಿ ಸಂಚರಿಸಿ ಎ.ಪಿ.ಎಂ.ಸಿ ಮಾರ್ಕೆಟ್‍ಗೆ ಬರಬೇಕು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles