Home ದಾವಣಗೆರೆ ಯುಪಿಎಸ್‌ಸಿ ಪಾಸ್ ಮಾಡುವುದು ಹೇಗೆ? ಆಕಾಂಕ್ಷಿಗಳಿಗೆ ವಿಶೇಷ ಸಲಹೆ ನೀಡಿದ ಟಾಪ್ ರ‍್ಯಾಂಕರ್ ಐಎಎಸ್ ಅಧಿಕಾರಿ!
ದಾವಣಗೆರೆನವದೆಹಲಿಬೆಂಗಳೂರು

ಯುಪಿಎಸ್‌ಸಿ ಪಾಸ್ ಮಾಡುವುದು ಹೇಗೆ? ಆಕಾಂಕ್ಷಿಗಳಿಗೆ ವಿಶೇಷ ಸಲಹೆ ನೀಡಿದ ಟಾಪ್ ರ‍್ಯಾಂಕರ್ ಐಎಎಸ್ ಅಧಿಕಾರಿ!

Share
ಯುಪಿಎಸ್‌ಸಿ
Share

ಹೊಸದೆಹಲಿ: ದೇಶದ ಅತ್ಯಂತ ಸವಾಲಿನ ಮತ್ತು ಪ್ರತಿಷ್ಠಿತ ಪರೀಕ್ಷೆಯಾದ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ (UPSC Civil Services Examination) ಸಿದ್ಧತೆ ನಡೆಸುವುದು ಕೇವಲ ಶೈಕ್ಷಣಿಕ ಜ್ಞಾನದ ಪರೀಕ್ಷೆಯಲ್ಲ, ಅದಕ್ಕಿಂತ ಹೆಚ್ಚಾಗಿ ಮನೋಬಲ ಮತ್ತು ಆತ್ಮವಿಶ್ವಾಸದ ಪರೀಕ್ಷೆಯಾಗಿದೆ ಎಂದು 2020ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪರಿ ಬಿಶ್ನೋಯ್ ಅಭಿಪ್ರಾಯಪಟ್ಟಿದ್ದಾರೆ.

ಫೋಟೋಗ್ರಾಫರ್ ಅಂಕಕಿತ್ ಕುಮಾರ್ ಅವರ ಇನ್‌ಸ್ಟಾಗ್ರಾಮ್ ವೀಡಿಯೊ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಆಕಾಂಕ್ಷಿಗಳಲ್ಲಿರುವ ಸ್ಪರ್ಧೆಯ ಭಯ ಹಾಗೂ ಮಾನಸಿಕ ಒತ್ತಡದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರಸ್ತುತ ಸಿಕ್ಕಿಂನಲ್ಲಿ ಜಿಲ್ಲಾಧಿಕಾರಿಯಾಗಿ (District Collector/ADM) ಸೇವೆ ಸಲ್ಲಿಸುತ್ತಿರುವ ಪರಿ ಬಿಶ್ನೋಯ್, ತಾವು ಸಿದ್ಧತೆ ಆರಂಭಿಸಿದ ದಿನಗಳನ್ನು ಈ ವೇಳೆ ಸ್ಮರಿಸಿಕೊಂಡಿದ್ದಾರೆ.

ಸ್ಪರ್ಧೆಯು ನಮ್ಮ ತಲೆಯಲ್ಲಿ ಮಾತ್ರ ಇರುತ್ತದೆ:

ಆರಂಭದಲ್ಲಿ ತಮಗೂ ಕೂಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೋಡಿ “ನಮ್ಮ ನಂಬರ್ ಎಲ್ಲಿ ಬರುತ್ತದೆ?” ಎಂಬ ಆತಂಕವಿತ್ತು ಎಂದು ಪರಿ ತಿಳಿಸಿದ್ದಾರೆ. ಆದರೆ ಸಾಮಾನ್ಯ ಶಾಲಾ-ಕಾಲೇಜು ಹಿನ್ನೆಲೆಯಿಂದ ಬಂದಿದ್ದರೂ ತಾವು ಸ್ವಯಂ ನಂಬಿಕೆಯನ್ನು ಕೈಬಿಡಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, “ಸ್ಪರ್ಧೆಯು ವಾಸ್ತವವಾಗಿ ನಾವಂದುಕೊಂಡಷ್ಟು ದೊಡ್ಡದಲ್ಲ, ಅದು ಹೆಚ್ಚಾಗಿ ನಮ್ಮ ತಲೆಯೊಳಗೆ ಇರುತ್ತದೆ. ನಿಜವಾದ ಸ್ಪರ್ಧೆ ಮಾಡುವವರು ತುಂಬಾ ಕಡಿಮೆ ಜನರಿದ್ದಾರೆ. ಆದರೆ ನಮ್ಮ ಸುತ್ತಮುತ್ತಲಿನ ವಾತಾವರಣದ ಒತ್ತಡದಿಂದಾಗಿ ನಾವೇ ಆತಂಕಕ್ಕೊಳಗಾಗುತ್ತೇವೆ” ಎಂದಿದ್ದಾರೆ.

ಮಾನಸಿಕ ಆಟ 

ಆಕಾಂಕ್ಷಿಗಳು ಇತರರೊಂದಿಗೆ ತಮ್ಮ ಪ್ರಗತಿಯನ್ನು ಪ್ರತಿದಿನ ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು, ತಮ್ಮದೇ ಆದ ಸಿದ್ಧತೆಯ ಮೇಲೆ ಸಂಪೂರ್ಣ ಗಮನಹರಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹಾಗೂ ಸ್ಥಿರತೆಯಿಂದ ತಯಾರಿ ನಡೆಸಿದರೆ ಪರೀಕ್ಷೆಯ ಭಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ತಿಳಿಸಿರುವ ಅವರು, ಯುಪಿಎಸ್‌ಸಿ ಎನ್ನುವುದು ಕೇವಲ ಜ್ಞಾನದ ಪರೀಕ್ಷೆಯಲ್ಲ, ಇದು ಆಕಾಂಕ್ಷಿಯ ಮಾನಸಿಕ ದೃಢತೆಯ ಅಗ್ನಿಪರೀಕ್ಷೆ ಎಂದು ಬಣ್ಣಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles