ದಾವಣಗೆರೆ: ಭದ್ರಾ ಡ್ಯಾಂ ಒಳಹರಿವಿನಲ್ಲಿ ಕಡಿಮೆಯಾಗಿದೆ. ಆಗಸ್ಟ್ 23ರ ಇಂದು ಜಲಾಶಯದ ನೀರಿನ ಮಟ್ಟ 175 ಅಡಿ ದಾಟಿದೆ. ಒಂದೆಡೆ ನೀರು ಹರಿಸಬೇಕೆಂದು ದಾವಣಗೆರೆ ಭಾಗದ ರೈತರು ಒತ್ತಾಯ ಮಾಡುತ್ತಿದ್ದರೆ, ಮತ್ತೆ ಕೆಲವರು ನೀರು ಸಂಗ್ರಹಿಸಿಟ್ಟುಕೊಂಡು ಮುಂದಿನ ಬೇಸಿಗೆಗೆ ನೀರು ಹರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ನಡುವೆ ಭದ್ರಾ ಡ್ಯಾಂ ನೀರಿನ ಮಟ್ಟ 175 ಅಡಿ ದಾಟಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.
ಭದ್ರಾ ಜಲಾಶಯದ ನೀರಿನ ಮಟ್ಟದ ವರದಿ — 23.08.2026
ಸಮಯ: ಬೆಳಿಗ್ಗೆ 6:00 ಗಂಟೆಗೆ
ದಿನಾಂಕ: 23.08.2026
ಡ್ಯಾಮ್ ವಿವರಗಳು
ಗರಿಷ್ಠ ಮಟ್ಟ (F.R.L): 186 ಅಡಿ (ಸಮುದ್ರ ಮಟ್ಟದಿಂದ: 2158.0 ಅಡಿ)
ಒಟ್ಟು ಜಲಸಾಮರ್ಥ್ಯ: 71.535 TMC
ಪ್ರಸ್ತುತ ನೀರಿನ ಮಟ್ಟ
ಜಲಾಶಯದ ಮಟ್ಟ: 175 ಅಡಿ 2 ಇಂಚು (ಸಮುದ್ರ ಮಟ್ಟದಿಂದ: 2147.16 ಅಡಿ)
ಪ್ರಸ್ತುತ ಜಲಸಂಗ್ರಹ: 58.569 TMC
ಒಳಹರಿವು: 3,504 ಕ್ಯೂಸೆಕ್ಸ್
ಹೊರಹರಿವು: 205 ಕ್ಯೂಸೆಕ್ಸ್
ಹೊರಹರಿವು ಮತ್ತು ನಷ್ಟದ ವಿವರ
ಬಲದಂಡೆ ನಾಲು (R.B.C): 0 ಕ್ಯೂಸೆಕ್ಸ್
ಎಡದಂಡೆ ನಾಲೆ (L.B.C): 0 ಕ್ಯೂಸೆಕ್ಸ್
ನದಿ ಕಾಲುವೆ (River Sluice): 100 ಕ್ಯೂಸೆಕ್ಸ್
ಆವಿಯಾಗುವಿಕೆ (Evaporation): 105 ಕ್ಯೂಸೆಕ್ಸ್
ಕಳೆದ ವರ್ಷದ ಇದೇ ದಿನದ ವಿವರ
ಕಳೆದ ವರ್ಷದ ನೀರಿನ ಮಟ್ಟ: 184 ಅಡಿ
ಕಳೆದ ವರ್ಷದ ಜಲಸಂಗ್ರಹ: 69.035 TMC
ಕಳೆದ ವರ್ಷದ ಒಳಹರಿವು: 6,215 ಕ್ಯೂಸೆಕ್ಸ್
ಕಳೆದ ವರ್ಷದ ಹೊರಹರಿವು: 6,215 ಕ್ಯೂಸೆಕ್ಸ್
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 9 ಅಡಿ ಅಷ್ಟು ನೀರು ಕಡಿಮೆಯಾಗಿದೆ. ಭದ್ರಾ ಡ್ಯಾಂ ಈ ಬಾರಿ ಭರ್ತಿಯಾಗಲು ಇನ್ನೂ ಹತ್ತು ಅಡಿಗೂ ಹೆಚ್ಚು ನೀರು ಹರಿದು ಬರಬೇಕಿದೆ.





Leave a comment