Home ಕ್ರೈಂ ನ್ಯೂಸ್ ಪ್ರಿಯಕರನ ಜೊತೆಗೂಡಿ ಸ್ಕೆಚ್: ಔಷಧಿ ತರಲೆಂದು ಬೈಕ್‌ನಲ್ಲಿ ಕರೆದೊಯ್ದು ಗಂಡನಿಗೆ ವಿಷಕಾರಿ ಜ್ಯೂಸ್ ಕುಡಿಸಿದ ಪತ್ನಿ! ಮುಂದೇನಾಯ್ತು?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪ್ರಿಯಕರನ ಜೊತೆಗೂಡಿ ಸ್ಕೆಚ್: ಔಷಧಿ ತರಲೆಂದು ಬೈಕ್‌ನಲ್ಲಿ ಕರೆದೊಯ್ದು ಗಂಡನಿಗೆ ವಿಷಕಾರಿ ಜ್ಯೂಸ್ ಕುಡಿಸಿದ ಪತ್ನಿ! ಮುಂದೇನಾಯ್ತು?

Share
ಪ್ರಿಯಕರ
Share

ಜೈಪುರ: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಭೀಕರ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನು 27 ವರ್ಷದ ಮಹೇಶ್ ಮೀನಾ ಎಂದು ಗುರುತಿಸಲಾಗಿದೆ. ಈತನ ಪತ್ನಿ ಕವಿತಾ ಮೀನಾ (23) ಹಾಗೂ ಆಕೆಯ ಪ್ರಿಯಕರ ಗಣೇಶ್ ಮೀನಾ (27) ಸೇರಿ ಈ ಕೃತ್ಯ ಎಸಗಿದ್ದಾರೆ.

ಘಟನೆಯ ವಿವರ:

ಆಗಸ್ಟ್ 5 ರಂದು ಪತ್ನಿ ಕವಿತಾ, ಔಷಧಿ ತರುವ ನೆಪದಲ್ಲಿ ಗಂಡ ಮಹೇಶ್‌ನನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಳು. ಪ್ಲಾನ್ ಪ್ರಕಾರ ಮಾರ್ಗಮಧ್ಯೆ ಮಹೇಶ್‌ಗೆ ವಿಷ ಬೆರೆಸಿದ ಜ್ಯೂಸ್ ಕುಡಿಸಿದ್ದಾಳೆ. ಜ್ಯೂಸ್ ಕುಡಿದ ಸ್ವಲ್ಪ ಸಮಯದಲ್ಲೇ ಮಹೇಶ್ ಆರೋಗ್ಯ ತೀವ್ರವಾಗಿ ಕ್ಷೀಣಿಸಿದೆ. ಈ ವೇಳೆ ಕವಿತಾ ತನ್ನ ಪ್ರಿಯಕರ ಗಣೇಶ್‌ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾಳೆ.

ಇಬ್ಬರೂ ಸೇರಿ ಮಹೇಶ್‌ನನ್ನು ಬೈಕ್‌ನಲ್ಲಿ ಸೇತುವೆಯೊಂದರ ಕಡೆಗೆ ಕರೆದೊಯ್ದು, ಸಾವು ಸಹಜ ಕಾಯಿಲೆಯಿಂದ ಸಂಭವಿಸಿದೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಬಳಿಕ ಕವಿತಾ ತನ್ನ ಭಾವ ಮನೀಷ್‌ಗೆ ಕರೆ ಮಾಡಿ, ಮಹೇಶ್‌ಗೆ ದಿಢೀರ್ ಅನಾರೋಗ್ಯ ಉಂಟಾಗಿದೆ ಎಂದು ನಾಟಕವಾಡಿದ್ದಾಳೆ. ಕೂಡಲೇ ಮಹೇಶ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪೊಲೀಸ್ ತನಿಖೆ:

ಮಹೇಶ್ ಸಾವಿನ ಬಗ್ಗೆ ಆತನ ಕುಟುಂಬಸ್ಥರಿಗೆ ಅನುಮಾನ ವ್ಯಕ್ತವಾಗಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಜೈಪುರ ಪಶ್ಚಿಮ ವಿಭಾಗದ ಡಿಸಿಪಿ ಪ್ರಶಾಂತ್ ಕಿರಣ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಪೊಲೀಸರು, ಕವಿತಾ ಮತ್ತು ಗಣೇಶ್‌ ಹಾಗೂ ಅವರ ಸಂಚನ್ನು ಬಯಲಿಗೆಳೆದು ಇಬ್ಬರನ್ನೂ ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *