ಸಾಗರ (ಮಧ್ಯಪ್ರದೇಶ): ಸೋಶಿಯಲ್ ಮೀಡಿಯಾದಲ್ಲಿ ಗನ್ ಹಿಡಿದು ಫೋಟೊ ಪೋಸ್ಟ್ ಮಾಡಿದ್ದ ಚಾಲಕನೊಬ್ಬನ ಮನೆಗೆ ದಾಳಿ ನಡೆಸಿದ ಪೊಲೀಸರು, ಬೀಗ ಹಾಕಿದ್ದ ಅಲ್ಮೈರಾದಲ್ಲಿ ಸುಮಾರು ₹3 ಕೋಟಿಗೂ ಅಧಿಕ ಅಕ್ರಮ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಸಾಗರ ಜಿಲ್ಲೆಯ ಗೋಪಾಲ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ, ಸೌರಭ್ ಅಹಿರ್ವಾರ್ ಎಂಬಾತ ಬಂದೂಕಿನೊಂದಿಗೆ ಇರುವ ಫೋಟೊ ಕಂಡುಬಂದಿತ್ತು. ಇದರ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲು ಪೊಲೀಸರ ತಂಡ ಸೌರಭ್ ಮನೆಗೆ ತೆರಳಿ ತಪಾಸಣೆ ನಡೆಸಿತು.
ತಪಾಸಣೆ ವೇಳೆ ಯಾವುದೇ ಆಯುಧ ಸಿಗಲಿಲ್ಲವಾದರೂ, ಮನೆಯಲ್ಲಿದ್ದ ಬೀಗ ಹಾಕಿದ ಅಲ್ಮೈರಾವನ್ನು ಕಂಡು ಪೊಲೀಸರು ಅನುಮಾನಗೊಂಡರು. ಕೀ ಇಲ್ಲದ ಕಾರಣ ಸಾಕ್ಷಿಗಳ ಸಮ್ಮುಖದಲ್ಲಿ ಅದನ್ನು ತೆರೆದಾಗ ನಾಲ್ಕು ಬ್ಯಾಗ್‌ಗಳಲ್ಲಿ ನೋಟಿನ ಕಂತೆಗಳು ಪತ್ತೆಯಾಗಿವೆ. ಹಣದ ಪ್ರಮಾಣ ಹೆಚ್ಚಿದ್ದರಿಂದ ಎಲೆಕ್ಟ್ರಾನಿಕ್ ನೋಟು ಎಣಿಕೆ ಯಂತ್ರ ತರಿಸಿ ಎಣಿಕೆ ಮಾಡಲಾಯಿತು. ಮಧ್ಯರಾತ್ರಿಯವರೆಗೂ ನಡೆದ ಎಣಿಕೆಯಲ್ಲಿ ₹3 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.
ವಿಚಾರಣೆ ವೇಳೆ ಕುಟುಂಬಸ್ಥರು, “ಈ ಹಣ ನಮಗ ಸೇರಿದ್ದಲ್ಲ, ಭೋಪಾಲ್‌ನ ಪಿಡಬ್ಲ್ಯೂಡಿ (PWD) ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ ಸಂಬಂಧಿ ರಮೇಶ್ ಅಹಿರ್ವಾರ್ 8-9 ತಿಂಗಳ ಹಿಂದೆ ತಂದು ಇಟ್ಟಿದ್ದರು” ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಪೊಲೀಸರು, ಆದಾಯ ತೆರಿಗೆ ಇಲಾಖೆ (Income Tax) ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
- 3 ಕೋಟಿ ನಗದು ವಶ
- Gopalganj Police Sagar
- Illegal Cash Recovery
- Income Tax Probe Sagar
- Madhya Pradesh crime news
- MP Police Raid 3 Crore
- PWD Engineer Unaccounted Cash
- Sagar Cash Seizure
- Saurabh Ahirwar Cash Recovery
- Viral Gun Photo Raid
- Viral Photo Police Action
- ಅಕ್ರಮ ಹಣ
- ಆದಾಯ ತೆರಿಗೆ ಇಲಾಖೆ
- ಗೋಪಾಲ್‌ಗಂಜ್ ಪೊಲೀಸ್
- ಪಿಡಬ್ಲ್ಯೂಡಿ ಎಂಜಿನಿಯರ್
- ಪೊಲೀಸ್ ರೈಡ್
- ಪೊಲೀಸ್ ರೈಡ್ಸಾಗರ ದಾಳಿ
- ಬಂದೂಕು ಫೋಟೊ ವೈರಲ್
- ಮಧ್ಯಪ್ರದೇಶ ಕ್ರೈಮ್
- ಸಾಗರ ದಾಳಿ
- ಸೌರಭ್ ಅಹಿರ್ವಾರ್





Leave a comment