ವಾಷಿಂಗ್ಟನ್: ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಹರಿಣಿ ಎಂಬ ಮಹಿಳೆ, ವಿದೇಶಿ ಕಂಪನಿಯಲ್ಲಿ ತಾವು ಕಲಿತ ಪ್ರಮುಖ ಪಾಠವೊಂದನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಅದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಆರಂಭದಲ್ಲಿ ತಮ್ಮ ಅಮೆರಿಕನ್ ಸಹೋದ್ಯೋಗಿಗಳು ತಮಗಿಂತ ಹೆಚ್ಚು ಜ್ಞಾನ ಹೊಂದಿದ್ದಾರೆ ಎಂದು ಅವರು ಭಾವಿಸಿದ್ದರು. ಆದರೆ ದಿನ ಕಳೆದಂತೆ ಅಸಲಿ ವಿಚಾರ ಏನೆಂಬುದು ಅವರಿಗೆ ಅರಿವಾಯಿತು.
ಅಮೆರಿಕದ ಉದ್ಯೋಗಿಗಳು ವಿಷಯ ಸಂಪೂರ್ಣವಾಗಿ ತಿಳಿಯದಿದ್ದರೂ ಸಹ, ತಮ್ಮ ಅನಿಸಿಕೆಗಳನ್ನು ಆಫೀಸ್ ಸಭೆಗಳಲ್ಲಿ ಧೈರ್ಯವಾಗಿ ಹಂಚಿಕೊಳ್ಳುತ್ತಾರೆ. ಭಾರತದಲ್ಲಿ ಬೆಳೆದ ನಮಗೆ “ಸಂಪೂರ್ಣವಾಗಿ ಖಚಿತವಾದ ಮೇಲೆಯೇ ಮಾತನಾಡು” ಎಂದು ಕಲಿಸಲಾಗಿರುತ್ತದೆ. ಇದರಿಂದಾಗಿ ನಮಗೆ ಸರಿಯಾದ ಕಲ್ಪನೆ ಇದ್ದರೂ, ಹೇಳಲು ಸೂಕ್ತ ಸಮಯ ಕಾಯುತ್ತಾ ಕೂರುವುದರಿಂದ ಅವಕಾಶ ಕೈತಪ್ಪುತ್ತದೆ ಎಂದು ಹರಿಣಿ ವಿವರಿಸಿದ್ದಾರೆ.
ಆತ್ಮವಿಶ್ವಾಸ ಎಂಬುದು ಹುಟ್ಟಿನಿಂದ ಬರುವುದಲ್ಲ, ಅದನ್ನು ಅಭ್ಯಾಸದಿಂದ ಬೆಳೆಸಿಕೊಳ್ಳಬಹುದು. ಪ್ರತಿಯೊಂದಕ್ಕೂ ನೂರಕ್ಕೆ ನೂರರಷ್ಟು ಪರ್ಫೆಕ್ಟ್ ಆಗಿರಲು ಕಾಯುವ ಬದಲು, ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಧೈರ್ಯ ತೋರುವುದೇ ನಿಜವಾದ ಆತ್ಮವಿಶ್ವಾಸ ಎಂದು ಅವರು ಹೇಳಿದ್ದಾರೆ.
- confidence at work
- Harini Nagireddi
- Indian vs American work culture
- Indian woman in US
- Trending News
- US corporate culture
- viral Instagram post
- workplace confidence
- ಅಮೆರಿಕ ಕೆಲಸದ ಅನುಭವ
- ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ
- ಕಾರ್ಪೊರೇಟ್ ಕಾನ್ಫಿಡೆನ್ಸ್
- ಟ್ರೆಂಡಿಂಗ್ ನ್ಯೂಸ್
- ಭಾರತೀಯ ಉದ್ಯೋಗಿ
- ಯುಎಸ್ ಉದ್ಯೋಗ ಸಂಸ್ಕೃತಿ
- ವೈರಲ್ ಇನ್‌ಸ್ಟಾಗ್ರಾಮ್ ಪೋಸ್ಟ್
- ಹರಿಣಿ ಹರಿಣಿ_ನಾಗಿರೆಡ್ಡಿ





Leave a comment