Home ದಾವಣಗೆರೆ ಬಿಎಸ್‌ಎನ್‌ಎಲ್‌ ಧಮಾಕಾ ಆಫರ್: ಸಂಪೂರ್ಣ ಉಚಿತ ಸಿಮ್ ಮತ್ತು 24 ದಿನಗಳವರೆಗೆ ಉಚಿತ ಡೇಟಾ, ಕರೆ ಸೌಲಭ್ಯ!
ದಾವಣಗೆರೆನವದೆಹಲಿಬೆಂಗಳೂರು

ಬಿಎಸ್‌ಎನ್‌ಎಲ್‌ ಧಮಾಕಾ ಆಫರ್: ಸಂಪೂರ್ಣ ಉಚಿತ ಸಿಮ್ ಮತ್ತು 24 ದಿನಗಳವರೆಗೆ ಉಚಿತ ಡೇಟಾ, ಕರೆ ಸೌಲಭ್ಯ!

Share
ಬಿಎಸ್‌ಎನ್‌ಎಲ್‌
Share

ದಾವಣಗೆರೆ: ಭಾರತದ ವಿಶ್ವಾಸಾರ್ಹ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಫ್ರೀಡಮ್ ಪ್ಲಾನ್‍ಅನ್ನು ಪರಿಚಯಿಸಿದೆ.

ಇದು ಸೀಮಿತ ಅವಧಿಯ ರ ಕೊಡುಗೆಯಾಗಿದ್ದು, ಬಳಕೆದಾರರಿಗೆ 24 ದಿನಗಳವರೆಗೆ ಬಿಎಸ್‍ಎನ್‍ಎಲ್‍ನ 40 ಮೊಬೈಲ್ ಸೇವೆಗಳನ್ನು ಅನುಭವಿಸಲು ಅವಕಾಶ ನೀಡುತ್ತದೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಉಪಕ್ರಮವನ್ನು ಕೈಗೊಂಡಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿದ 40 ತಂತ್ರಜ್ಞಾನವನ್ನು ಉಚಿತವಾಗಿ ಅನುಭವಿಸುವ ಅವಕಾಶವನ್ನು ನೀಡಲಾಗುತ್ತಿದೆ.

ಈ ಯೋಜನೆಯ ವೈಶಿಷ್ಟ್ಯಗಳು ಹೀಗಿವೆ: ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ, ಎಸ್‍ಟಿಡಿ), ದಿನಕ್ಕೆ 1 ಜಿಬಿ ಹೈ-ಸ್ಪೀಡ್ ಡೇಟಾ, ದಿನಕ್ಕೆ  100 ಎಸ್‍ಎಂಎಸ್ ಮತ್ತು ಬಿಎಸ್‍ಎನ್‍ಎಲ್ ಸಿಮ್ ಕಾರ್ಡ್ ಸಂಪೂರ್ಣ ಉಚಿತ. ವ್ಯಾಲಿಡಿಟಿ 24 ದಿನಗಳು, ಅನ್ವಯವಾಗುವ ಆಗಸ್ಟ್ 12 ರಿಂದ ಸೆಪ್ಟೆಂಬರ್ 29 ರವರೆಗೆ ಜೊತೆಗೆ, ಬಿಎಸ್‍ಎನ್‍ಎಲ್  ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಹೆಚ್ಚುವರಿ ಮಾನ್ಯತೆ ಕೊಡುಗೆಯನ್ನೂ ಪರಿಚಯಿಸಿದೆ.

ಇದರ ಅಡಿಯಲ್ಲಿ ಪಿವಿ-2399 ಯೋಜನೆಯೊಂದಿಗೆ ಹೆಚ್ಚುವರಿಯಾಗಿ 47 ದಿನಗಳ ವ್ಯಾಲಿಡಿಟಿ ಸಿಗಲಿದ್ದು, ಒಟ್ಟು ಅವಧಿಯು  412 ದಿನಗಳಾಗಲಿದೆ. ಗ್ರಾಹಕರು ಹತ್ತಿರದ ಬಿಎಸ್‍ಎನ್‍ಎಲ್ ಗ್ರಾಹಕ ಸೇವಾ ಕೇಂದ್ರ ಅಥವಾ ರಿಟೈಲ್ ಮಾರಾಟ ಮಳಿಗೆಗೆ ಭೇಟಿ ನೀಡುವ ಮೂಲಕ ಈ ‘ಫ್ರೀಡಮ್ ಬ್ಲಾನ್’ ಅನ್ನು ಪಡೆಯಬಹುದು ಎಂದು ದಾವಣಗೆರೆಯ ಡಿಜಿಎಂ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles