Home ದಾವಣಗೆರೆ ದಾವಣಗೆರೆಯಲ್ಲಿ KEA ಭೂಮಾಪಕ, ಗ್ರಾಮ ಲೆಕ್ಕಾಧಿಕಾರಿಗಳ ಪರೀಕ್ಷೆ: ಪಾರದರ್ಶಕ, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವಂತೆ ಡಿಸಿ ಕಟ್ಟುನಿಟ್ಟಿನ ಸೂಚನೆ!
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ದಾವಣಗೆರೆಯಲ್ಲಿ KEA ಭೂಮಾಪಕ, ಗ್ರಾಮ ಲೆಕ್ಕಾಧಿಕಾರಿಗಳ ಪರೀಕ್ಷೆ: ಪಾರದರ್ಶಕ, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವಂತೆ ಡಿಸಿ ಕಟ್ಟುನಿಟ್ಟಿನ ಸೂಚನೆ!

Share
ದಾವಣಗೆರೆ
Share

ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಅಕ್ಟೋಬರ್ 2 ರಂದು ನಡೆಯಲಿರುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಹಾಗೂ ಅಕ್ಟೋಬರ್ 4 ರಂದು ನಡೆಯುವ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ, ಸೂಕ್ಷ್ಮ ಹಾಗೂ ಬಿಗಿ ಭದ್ರತೆಯೊಂದಿಗೆ ನಡೆಸಲು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡಬಾರದೆಂದು ಸೂಚಿಸಿದರು.

2 ಸೆಷನ್‌ಗಳಲ್ಲಿ ಪರೀಕ್ಷೆ; 17,000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

ಭೂಮಾಪಕರ ಪರೀಕ್ಷೆ (ಅಕ್ಟೋಬರ್ 2): ದಾವಣಗೆರೆ ನಗರದ 6 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 3,773 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ (ಅಕ್ಟೋಬರ್ 4): ದಾವಣಗೆರೆಯ 22 ಹಾಗೂ ಹರಿಹರದ 2 ಕೇಂದ್ರಗಳು ಸೇರಿದಂತೆ ಒಟ್ಟು 24 ಕೇಂದ್ರಗಳಲ್ಲಿ 13,344 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎರಡೂ ಪರೀಕ್ಷೆಗಳು ಎರಡು ಅವಧಿಗಳಲ್ಲಿ (Two Sessions) ನಡೆಯಲಿವೆ.

ಧಾರ್ಮಿಕ ಸಂಕೇತಗಳ ತಪಾಸಣೆಯಲ್ಲಿ ಗೌರವ ಕಡ್ಡಾಯ

ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಸಂಪೂರ್ಣ ನಿಷೇಧವಿದೆ. ಆದರೆ, ಅಭ್ಯರ್ಥಿಗಳನ್ನು ತಪಾಸಣೆ ಮಾಡುವಾಗ ಜನಿವಾರ, ಶಿವಲಿಂಗ, ತಾಳಿ ಮುಂತಾದ ಧಾರ್ಮಿಕ ಸಂಕೇತಗಳ ವಿಷಯದಲ್ಲಿ ಸೂಕ್ಷ್ಮವಾಗಿ ಮತ್ತು ಗೌರವಯುತವಾಗಿ ನಡೆದುಕೊಳ್ಳಬೇಕು. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಸಿಬ್ಬಂದಿ ಸೌಜನ್ಯದಿಂದ ಕಾರ್ಯನಿರ್ವಹಿಸಬೇಕು ಎಂದು ಡಿಸಿ ನಿರ್ದೇಶಿಸಿದರು.

ನಿಷೇಧಾಜ್ಞೆ ಜಾರಿ ಮತ್ತು ಸಿಸಿಟಿವಿ ಕಣ್ಗಾವಲು

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ व्याಪ್ತಿಯಲ್ಲಿ 144 ನೇ ವಿಧಿ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಪರೀಕ್ಷೆಯ ಹಿಂದಿನ ದಿನವೇ ಕೊಠಡಿಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಗೋಡೆ ಗಡಿಯಾರಗಳನ್ನು ಪರಿಶೀಲಿಸಿ, ಕೊಠಡಿಗಳನ್ನು ಸೀಲ್ ಮಾಡಿ ಕೀಲಿಗಳನ್ನು ಜವಾಬ್ದಾರಿಯುತ ಅಧಿಕಾರಿಗಳ ವಶದಲ್ಲಿಡಬೇಕು.

ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯವಾಗಿದೆ.

ಕೈಗಡಿಯಾರ, ಕ್ಯಾಲ್ಕುಲೇಟರ್, ಬ್ಲೂಟೂಥ್, ಮೊಬೈಲ್, ಇಯರ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಭೂಮಾಪಕರ ಹುದ್ದೆ- ಪರೀಕ್ಷಾ ಕೇಂದ್ರಗಳು (6-ದಾವಣಗೆರೆ ) : 1. ಎ. ವಿ. ಕಮಲಮ್ಮ ಪದವಿ ಪೂರ್ವ ಕಾಲೇಜು , ಅಕ್ಕಮಹಾದೇವಿ ರಸ್ತೆ, ಪಿ. ಜೆ. ಬಡಾವಣೆ 2. ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಿ. ಜೆ. ಬಡಾವಣೆ 3. ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪಿ. ಜೆ. ಬಡಾವಣೆ 4. ಸರ್ಕಾರಿ ಗಂಡುಮಕ್ಕಳ ಪದವಿ ಪೂರ್ವ ಕಾಲೇಜು, ಪಿ. ಜೆ. ಬಡಾವಣೆ, ರೈಲ್ವೆ ನಿಲ್ದಾಣದ ಹತ್ತಿರ 5. ಡಾ. ಶಾಮನೂರು ಶಿವಶಂಕರಪ್ಪ ಪದವಿ ಪೂರ್ವ ಕಾಲೇಜು, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗ, ಎಂ.ಬಿ.ಎ. ಮೈದಾನ, ಎಸ್. ಎಸ್. ಬಡಾವಣೆ ಹಾಗೂ 6. ಸರ್ಕಾರಿ ಎಕ್ಸ್ ಮುನಿಸಿಪಲ್ ಪದವಿ ಪೂರ್ವ ಕಾಲೇಜು, ಕೆ. ಆರ್‌. ರಸ್ತೆ, ಸಿ. ಎಸ್. ಐ. ಜಿಯಾನ್ ಚರ್ಚ್.

ಗ್ರಾಮ ಆಡಳಿತ ಅಧಿಕಾರಿ – 24 ಪರೀಕ್ಷಾ ಕೇಂದ್ರಗಳು (22-ದಾವಣಗೆರೆ, 2-ಹರಿಹರ) :

1. ದಾವಣಗೆರೆಯ ಹಡಡಿ ಮುಖ್ಯ ರಸ್ತೆಯ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಡಿ.ಆರ್.ಎಂ. ವಿಜ್ಞಾನ ಪದವಿ ಪೂರ್ವ ಕಾಲೇಜು, 2.  ಪಿ. ಜೆ. ಬಡಾವಣೆಯ ಅಕ್ಕಮಹಾದೇವಿ ರಸ್ತೆಯಲ್ಲಿರುವ ಎ. ವಿ. ಕಮಲಮ್ಮ ಪದವಿ ಪೂರ್ವ ಕಾಲೇಜು, 3. ಪಿ. ಜೆ. ಬಡಾವಣೆಯಲ್ಲಿರುವ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, 4. ಕೆ.ಆರ್. ರಸ್ತೆಯ ಸಿ.ಎಸ್.ಐ. ಜಿಯಾನ್ ಚರ್ಚ್ ಹತ್ತಿರವಿರುವ ಸರ್ಕಾರಿ ಎಕ್ಸ್ ಮುನಿಸಿಪಲ್ ಪದವಿ ಪೂರ್ವ ಕಾಲೇಜು,

5. ಪಿ. ಜೆ. ಬಡಾವಣೆಯಲ್ಲಿರುವ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು, 6. ಪಿ. ಜೆ. ಬಡಾವಣೆಯಲ್ಲೇ ಇರುವ ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು. 7. ನಿಜಲಿಂಗಪ್ಪ ಬಡಾವಣೆಯ ಶ್ರೀ ಗುರುಬಕ್ಕೇಶ್ವರ ಛತ್ರದ ಬಳಿಯಿರುವ ಎಸ್.ಎಲ್. ಪದವಿ ಪೂರ್ವ ಕಾಲೇಜು, 8. ಹಡಡಿ ವಿದ್ಯಾನಗರ ರಸ್ತೆಯ ಅನುಭವ ಮಂಟಪದ ಹತ್ತಿರದ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, 9. ಪಿ. ಜೆ. ಬಡಾವಣೆಯ ಸಾಯಿ ರಾಮ ಪಾರ್ಕ್ ಹತ್ತಿರದ 2ನೇ ಮುಖ್ಯ ರಸ್ತೆ, 2ನೇ ಕ್ರಾಸ್‌ನಲ್ಲಿರುವ ಎಸ್.ಎ.ಜಿ.ಬಿ. ಸಂಯುಕ್ತ ಪದವಿ ಪೂರ್ವ ಕಾಲೇಜು, 10. ಎಸ್. ಎಸ್. ಬಡಾವಣೆ ‘ಎ’ ಬ್ಲಾಕ್‌ನ ಕುಂದವಾಡ ಕೆರೆ ಹತ್ತಿರವಿರುವ ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು,

11. ವಿಶ್ವವಿದ್ಯಾನಿಲಯದ ಪಕ್ಕದ ತೊಳಹುಣಸೆ ಶಿವಗಂಗೋತ್ರಿಯಲ್ಲಿರುವ ಬಾಪೂಜಿ ಎಸ್‌ಪಿಎಸ್ಎಸ್ ಪದವಿ ಪೂರ್ವ ಕಾಲೇಜು, 12. ಪಿ. ಜೆ. ಬಡಾವಣೆಯ ರೈಲ್ವೆ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳು 13. ವಿದ್ಯಾನಗರದ ಈಶ್ವರ ಪಾರ್ವತಿ ದೇವಾಲಯದ ಎದುರಿಗಿರುವ ಮಗನೂರು ಬಸಪ್ಪ ಪದವಿ ಪೂರ್ವ ಕಾಲೇಜು, 14. ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಸೆಂಟ್ ಜಾನ್ಸ್ ವಿಜ್ಞಾನ ಪದವಿ ಪೂರ್ವ ಕಾಲೇಜು, 15. ಸಿದ್ಧಲಿಂಗೇಶ್ವರ ನಗರದ ಡಂಗಿ ಪಾರ್ಕ್ ಹತ್ತಿರವಿರುವ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು,

16. ಎಸ್. ನಿಜಲಿಂಗಪ್ಪ ಬಡಾವಣೆಯ ಅಮೃತ ಪದವಿ ಪೂರ್ವ ಕಾಲೇಜು, 17. ಎಸ್. ಎಸ್. ಬಡಾವಣೆಯ ಎಂ.ಬಿ.ಎ. ಮೈದಾನದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದಲ್ಲಿರುವ ಡಾ. ಶಾಮನೂರು ಶಿವಶಂಕರಪ್ಪ ಪದವಿ ಪೂರ್ವ ಕಾಲೇಜು. 18. ಎಸ್. ಎಸ್. ಬಡಾವಣೆ ‘ಎ’ ಬ್ಲಾಕ್‌ನ ಕುಂದವಾಡ ಕೆರೆ ಹತ್ತಿರವಿರುವ ಎಸ್. ಬಿ. ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು, 19. ಎಂ.ಸಿ.ಸಿ. ‘ಬಿ’ ಬ್ಲಾಕ್‌ನ ಯು.ಬಿ.ಡಿ.ಟಿ. ಬಾಲಕರ ವಸತಿನಿಲಯದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, 20. ಎಸ್. ಎಸ್. ಬಡಾವಣೆ ‘ಎ’ ಬ್ಲಾಕ್‌ನ ಒಳಾಂಗಣ ಕ್ರೀಡಾಂಗಣದ ಹತ್ತಿರವಿರುವ ಬಿ. ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು,21. ಶಾಮನೂರು

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles