Home ಕ್ರೈಂ ನ್ಯೂಸ್ ಭಾವಿ ಪತ್ನಿಯ ಹುಟ್ಟುಹಬ್ಬಕ್ಕೆ ಬೆನ್ನಿಗೆ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ ಕೇತನ್ ಅಗರವಾಲ್: 5,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಸತ್ಯ ಬಹಿರಂಗ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಭಾವಿ ಪತ್ನಿಯ ಹುಟ್ಟುಹಬ್ಬಕ್ಕೆ ಬೆನ್ನಿಗೆ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ ಕೇತನ್ ಅಗರವಾಲ್: 5,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಸತ್ಯ ಬಹಿರಂಗ!

Share
ಕೇತನ್
Share

ಪುಣೆ: ಮಹಾರಾಷ್ಟ್ರದ ಪುಣೆಯ ಲೋಹಗಡ್ ಕೋಟೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರವಾಲ್ ಕೊಲೆ ಪ್ರಕರಣ ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದ್ದು, ತನಿಖೆಯಿಂದ ಮತ್ತೊಂದು ಭಾವುಕ ಹಾಗೂ ಕ್ರೂರ ವಿಚಾರ ಬೆಳಕಿಗೆ ಬಂದಿದೆ.

ಜೂನ್ 19ರಂದು ತನ್ನ ಭಾವಿ ಪತ್ನಿ ಸಿಯಾ ಗೋಯಲ್ ಹುಟ್ಟುಹಬ್ಬವಿದ್ದ ಕಾರಣ, ಆಕೆಗೆ ವಿಶೇಷ ಸರ್ಪ್ರೈಸ್ ನೀಡಲು ಕೇತನ್ ತನ್ನ ಬೆನ್ನಿನ ಮೇಲೆ ಸಿಯಾ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದ. ಆದರೆ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ (ಜೂನ್ 18) ಸಿಯಾ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆಗೂಡಿ ಲೋಹಗಡ್ ಕೋಟೆಯ ಪ್ರಪಾತಕ್ಕೆ ಕೇತನ್‌ನನ್ನು ತಳ್ಳಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ.

ಸಂಚು ಹೇಗೆ?

ಪುಣೆ ಗ್ರಾಮಾಂತರ ಪೊಲೀಸರು ಸಲ್ಲಿಸಿರುವ 5,053 ಪುಟಗಳ ಬೃಹತ್ ಚಾರ್ಜ್‌ಶೀಟ್‌ನಲ್ಲಿ ಕೊಲೆಯ ಭೀಕರ ದೃಶ್ಯಾವಳಿಗಳನ್ನು ವಿವರಿಸಲಾಗಿದೆ.

ಜೂನ್ 18ರಂದು ಬೆಳಗ್ಗೆ 9 ಗಂಟೆಗೆ ಸಿಯಾ ಹಾಗೂ ಕೇತನ್ ಕೋಟೆಗೆ ಆಗಮಿಸಿದ್ದರು.

ಸಿಯಾಳ ಪ್ರೇಮಿ ಚೇತನ್ ಚೌಧರಿ ಮೊದಲೇ ವೇಷ ಮರೆಸಿಕೊಂಡು ಕೋಟೆಯಲ್ಲಿ ಕಾಯುತ್ತಿದ್ದ.

ಟಿಕೆಟ್ ಕೌಂಟರ್ ಬಳಿ ಸಿಯಾ ನೀಡಿದ ಸಣ್ಣ ಸುಳಿವನ್ನು ಆಧಾರಿಸಿ ಚೇತನ್ ಅವರ ಬೆನ್ನತ್ತಿ ಸಾಗಿದ.

ಪ್ರಪಾತದ ಅಂಚಿಗೆ ಕೇತನ್‌ನನ್ನು ಕರೆದೊಯ್ದಾಗ, ಚೇತನ್ ಹಿಂದಿನಿಂದ ನೂಕಿದರೆ, ಸಿಯಾ ಜೋರಾಗಿ ಕೇತನ್ ಕಾಲಿಗೆ ಒದ್ದಿದ್ದಾಳೆ. ಪರಿಣಾಮ ಕೇತನ್ ನೂರಾರು ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.

ಪ್ರತ್ಯಕ್ಷದರ್ಶಿಗೆ ಬೆದರಿಕೆ:

ಈ ಘಟನೆಯನ್ನು ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ಕಣ್ಣಾರೆ ಕಂಡಿದ್ದರು. ಆ ವೇಳೆ ಆರೋಪಿ ಚೇತನ್ “ಸುಮ್ಮನಿರು, ಇಲ್ಲದಿದ್ದರೆ ನಿನ್ನನ್ನೂ ಕೋಟೆಯಿಂದ ಕೆಳಗೆ ತಳ್ಳುತ್ತೇನೆ” ಎಂದು ಬೆದರಿಕೆಯೊಡ್ಡಿದ್ದ. ಘಟನೆಯಿಂದ ಭಯಗೊಂಡಿದ್ದ ಪ್ರತ್ಯಕ್ಷದರ್ಶಿ, ನಂತರ ಮಾಧ್ಯಮಗಳಲ್ಲಿ ಸುದ್ದಿ ನೋಡಿದ ಮೇಲೆ ಪೊಲೀಸರನ್ನು ಸಂಪರ್ಕಿಸಿ ರಹಸ್ಯ ಹೇಳಿಕೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್, ಆಕೆಯ ಪ್ರೇಮಿ ಚೇತನ್ ಚೌಧರಿ ಹಾಗೂ ಸಹಚರ ರಿತೇಶ್ ಹಿಂಗೆಯನ್ನು ಪೊಲೀಸರು ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles