ಬೆಂಗಳೂರು: ವಿಧಾನಸೌಧ ಹಾಗೂ ವಿಕಾಸ ಸೌಧದ ಆವರಣದಲ್ಲಿರುವ ಸಚಿವರು, ಶಾಸಕರು ಮತ್ತು ಐಎಎಸ್ ಅಧಿಕಾರಿಗಳು ಬಳಸುವ ಕ್ಯಾಂಟೀನ್‌ಗಳ ಮೇಲೆ ಆರೋಗ್ಯ ಮತ್ತು ಆಹಾರ ಭದ್ರತಾ ಇಲಾಖೆ (FDA) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಆಹಾರ ಸರಬರಾಜು ಮಾಡುವ ತಟ್ಟೆಗಳಲ್ಲೇ ಜಿರಳೆಗಳು ಪತ್ತೆಯಾಗಿದ್ದು, ಅಡುಗೆ ಮನೆಯ ನೈರ್ಮಲ್ಯ ಕೊರತೆ ಹಾಗೂ ಕಳಪೆ ಮಟ್ಟದ ಆಹಾರ ಸಂಗ್ರಹಣೆ ಬೆಳಕಿಗೆ ಬಂದಿದೆ.
ಶಾಸಕರ ಭವನ ಹಾಗೂ ವಿಕಾಸ ಸೌಧ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಪರಿಶೀಲನೆ ನಡೆಸಿದ ವೇಳೆ ಕ್ರಿಮಿಕೀಟ ನಿಯಂತ್ರಣ (Pest Control) ಮಾಡದಿರುವುದು ಕಂಡುಬಂದಿದೆ. ಅಲ್ಲದೆ, ನಿನ್ನೆಯಷ್ಟೇ ಆರೋಗ್ಯ ಇಲಾಖೆಯ ಮುಖ್ಯ ಕಚೇರಿಯಾದ ‘ಆರೋಗ್ಯ ಸೌಧ’ ಕ್ಯಾಂಟೀನ್ ಮೇಲೆಯೂ ದಾಳಿ ನಡೆಸಿದ್ದ ಅಧಿಕಾರಿಗಳಿಗೆ, ಅವಧಿ ಮುಗಿದ ಇಡ್ಲಿ ರವೆ ಹಾಗೂ ಕೊಬ್ಬರಿ ಪುಡಿ ಪತ್ತೆಯಾಗಿತ್ತು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್, ಕ್ವಿಕ್ ಕಾಮರ್ಸ್ ವೇರ್‌ಹೌಸ್‌ಗಳು ಹಾಗೂ 3 ರಿಂದ 5 ನಕ್ಷತ್ರ ಹೋಟೆಲ್‌ಗಳ ಮೇಲೆಯೂ ಆಹಾರ ಭದ್ರತಾ ಕಾಯ್ದೆಯಡಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಕ್ಯಾಂಟೀನ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.





Leave a comment