Home ದಾವಣಗೆರೆ ‘ಜೈ ಹನುಮಾನ್’ ಬಳಗಕ್ಕೆ ಸೇರ್ಪಡೆಯಾದ ನಟಿ ವಾಮಿಖಾ ಗಬ್ಬಿ: ರಿಷಬ್ ಶೆಟ್ಟಿ ಅಭಿನಯದ ಮಹಾಕಾವ್ಯದಲ್ಲಿ ಪ್ರಮುಖ ಪಾತ್ರ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ಜೈ ಹನುಮಾನ್’ ಬಳಗಕ್ಕೆ ಸೇರ್ಪಡೆಯಾದ ನಟಿ ವಾಮಿಖಾ ಗಬ್ಬಿ: ರಿಷಬ್ ಶೆಟ್ಟಿ ಅಭಿನಯದ ಮಹಾಕಾವ್ಯದಲ್ಲಿ ಪ್ರಮುಖ ಪಾತ್ರ!

Share
ಜೈ ಹನುಮಾನ್
Share

ನವದೆಹಲಿ: ತಮಿಳಿನ ‘DC’ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಖ್ಯಾತ ನಟಿ ವಾಮಿಖಾ ಗಬ್ಬಿ ಅವರಿಗೆ ಮತ್ತೊಂದು ಬಹುದೊಡ್ಡ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಸಿಕ್ಕಿದೆ. ಹನುಮಾನ್  ಚಿತ್ರದ ಬ್ಲಾಕ್ ಬಸ್ಟರ್ ಸಕ್ಸೆಸ್ ನಂತರ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ಮಿಸುತ್ತಿರುವ ‘ಜೈ ಹನುಮಾನ್’ ಸಿನಿಮಾದಲ್ಲಿ ವಾಮಿಖಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಟಿ-ಸಿರೀಸ್ ಅರ್ಪಿಸುತ್ತಿದೆ.

ಇತ್ತೀಚೆಗೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದಿದ್ದ ಈ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.

ವಾಮಿಖಾ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ಚಿತ್ರತಂಡ ರಹಸ್ಯವಾಗಿಟ್ಟಿದ್ದು, 2027ರ ದ್ವಿತೀಯಾರ್ಧದಲ್ಲಿ ಚಿತ್ರ ವಿಶ್ವದಾದ್ಯಂತ ತೆರೆಕಾಣಲಿದೆ.

Share

Leave a comment

Leave a Reply

Your email address will not be published. Required fields are marked *