ಬರೇಲಿ (ಉತ್ತರ ಪ್ರದೇಶ): ಕಾರು ಧ್ವಂಸಗೊಳಿಸಿದ ವಿಚಾರವಾಗಿ ನಡೆದ ವಿವಾದದ ಹಿನ್ನೆಲೆಯಲ್ಲಿ ತೃತೀಯಲಿಂಗಿಯೊಬ್ಬರ ಮೇಲೆ ಜಿಮ್ ಮಾಲೀಕ ಹಾಗೂ ಆತನ ಸಹಚರರು ಕ್ರೂರವಾಗಿ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿವರ:
ಸಂತ್ರಸ್ತೆ ಸೂರಿ ಅವರ ದತ್ತು ಸಹೋದರ ವಿಶಾಲ್ ಆಗಸ್ಟ್ 7 ರಂದು ಕರೆ ಮಾಡಿ, ಜಿಮ್ ಹೊರಗಡೆ ನಿಲ್ಲಿಸಿದ್ದ ತಮ್ಮ ಕಾರನ್ನು ಯಾರೋ ಧ್ವಂಸಗೊಳಿಸಿದ್ದಾರೆ ಎಂದು ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸೂರಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಬಳಿಕ ಜಿಮ್ ಮಾಲೀಕ ಕರೆ ಮಾಡಿ, ಕಾರು ಧ್ವಂಸಗೊಳಿಸಿದವರ ಮಾಹಿತಿ ಸಿಕ್ಕಿದೆ ಎಂದು ಹೇಳಿ ವಾಪಸ್ ಜಿಮ್‌ಗೆ ಬರುವಂತೆ ತಿಳಿಸಿದ್ದ.
ಅದರಂತೆ ರಾತ್ರಿ 10 ಗಂಟೆ ಸುಮಾರಿಗೆ ಸೂರಿ ಮತ್ತು ಆಕೆಯ ಸಹಚರರು ಜಿಮ್‌ಗೆ ತಲುಪಿದಾಗ ಅಶ್ವಿನ್ ಶರ್ಮಾ, ಸುಶೀಲ್, ಅಂಕಿತ್ ಹಾಗೂ ಅಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಸಣ್ಣ ಮಾತಿನ ಚಕಮಕಿ ಆರಂಭವಾಗಿ, ಜಿಮ್ ಮಾಲೀಕ ಹಾಗೂ ಆತನ ಬೆಂಬಲಿಗರು ಹಾಕಿ ಸ್ಟಿಕ್, ಮುಷ್ಟಿ ಮತ್ತು ಕಾಲುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಸೂರಿಯ ಬಟ್ಟೆ ಹರಿದು ಬೆತ್ತಲೆಗೊಳಿಸಿ ವಿಕೃತಿ ಮೆರೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೋಲಿಸ್ ಕ್ರಮ:
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಕ್ರಿಯರಾದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ದಂಗೆ, ಹಲ್ಲೆ, ನಿಂದನೆ ಮತ್ತು ಕ್ರಿಮಿನಲ್ ಬೆದರಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Ashwani Sharma gym assault
- Bareilly gym incident
- BNS section assault case
- Transgender news UP
- Transperson assaulted Bareilly
- UP police action
- Uttar Pradesh Crime News
- Viral video Bareilly gym
- ಉತ್ತರ ಪ್ರದೇಶ ಸುದ್ದಿ
- ಜಿಮ್ ಮಾಲೀಕ ಬಂಧನ
- ತೃತೀಯಲಿಂಗಿ ಮೇಲೆ ಹಲ್ಲೆ
- ಬರೇಲಿ ಜಿಮ್ ಘಟನೆ
- ಬರೇಲಿ ಪೊಲೀಸ್
- ಭಾರತೀಯ ನ್ಯಾಯ ಸಂಹಿತೆ
- ಯುಪಿ ಅಪರಾಧ ಸುದ್ದಿ
- ವಸ್ತ್ರಾಪಹರಣ ವಿಡಿಯೋ ವೈರಲ್





Leave a comment