Home ದಾವಣಗೆರೆ ಬೆಳ್ಳಿ, ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ: ಅಮೆರಿಕ CPI ಡೇಟಾ ಸೃಷ್ಟಿಸಿದ ಸಂಚಲನ! ಇಲ್ಲಿದೆ ಇಂದಿನ ದರ ವಿವರ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಬೆಳ್ಳಿ, ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ: ಅಮೆರಿಕ CPI ಡೇಟಾ ಸೃಷ್ಟಿಸಿದ ಸಂಚಲನ! ಇಲ್ಲಿದೆ ಇಂದಿನ ದರ ವಿವರ

Share
ಚಿನ್ನ
Share

ನವದೆಹಲಿ / ಬೆಂಗಳೂರು: ಜಾಗತಿಕ ಮಾರುಕಟ್ಟೆಯ ಚಲನವಲನ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ದೇಶಾದ್ಯಂತ ಬಂಗಾರ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಶೇ. 1.68 ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ 4,494 ಡಾಲರ್‌ಗೆ ತಲುಪಿದೆ.

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ):

ಬೆಂಗಳೂರು: 24 ಕ್ಯಾರಟ್ (ಅಪರಂಜಿ) ₹1,52,540 | 22 ಕ್ಯಾರಟ್ (ಆಭರಣ) ₹1,39,840

ದೆಹಲಿ: 24 ಕ್ಯಾರಟ್ ₹1,51,630 | 22 ಕ್ಯಾರಟ್ ₹1,38,990

ಮುಂಬೈ: 24 ಕ್ಯಾರಟ್ ₹1,52,540 | 22 ಕ್ಯಾರಟ್ ₹1,39,840

ಕೋಲ್ಕತ್ತಾ: 24 ಕ್ಯಾರಟ್ ₹1,51,630 | 22 ಕ್ಯಾರಟ್ ₹1,38,990

ಬೆಳ್ಳಿ ದರ:

ಇಂದು ದೇಶದಲ್ಲಿ ಬೆಳ್ಳಿ ಬೆಲೆಯಲ್ಲೂ ಭಾರಿ ಜಿಗಿತ ಕಂಡುಬಂದಿದ್ದು, ರಾಜ್ಯದಲ್ಲಿ ಪ್ರತಿ ಕೆಜಿ ಬೆಳ್ಳಿ ದರ ₹2,56,900 ತಲುಪಿದೆ.

ದರ ಏರಿಕೆಗೆ ಪ್ರಮುಖ ಕಾರಣ: ಈ ವಾರ ಪ್ರಕಟವಾಗಲಿರುವ ಅಮೆರಿಕದ ಸಿಪಿಐ (CPI – ಗ್ರಾಹಕ ಬೆಲೆ ಸೂಚ್ಯಂಕ) ಹಣದುಬ್ಬರ ದತ್ತಾಂಶದ ಮೇಲೆ ಹೂಡಿಕೆದಾರರ ಕಣ್ಣು ನೆಟ್ಟಿದೆ. ಅಮೆರಿಕದ ಫೆಡರಲ್ ರಿಸರ್ವ್‌ನ ಮುಂಬರುವ ಬಡ್ಡಿದರ ನೀತಿಯ ನಿರ್ಧಾರಕ್ಕೆ ಈ ಡೇಟಾ ಅತ್ಯಂತ ನಿರ್ಣಾಯಕವಾಗಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *