Home ಕ್ರೈಂ ನ್ಯೂಸ್ ಪ್ರಧಾನಿ ಮೋದಿ- ಮನಮೋಹನ್ ಸಿಂಗ್ ಆಡಳಿತದ ನಡುವೆ ಆಕಾಶ, ಪಾತಾಳ ವ್ಯತ್ಯಾಸವಿದೆ: ಸೋನಿಯಾ ಗಾಂಧಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಧಾನಿ ಮೋದಿ- ಮನಮೋಹನ್ ಸಿಂಗ್ ಆಡಳಿತದ ನಡುವೆ ಆಕಾಶ, ಪಾತಾಳ ವ್ಯತ್ಯಾಸವಿದೆ: ಸೋನಿಯಾ ಗಾಂಧಿ!

Share
ಮನಮೋಹನ್ ಸಿಂಗ್
Share

ನವದೆಹಲಿ: ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮನಮೋಹನ್ ಸಿಂಗ್ ಅವರ ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯು ನರೇಂದ್ರ ಮೋದಿ ಸರ್ಕಾರದ ಆಡಳಿತ ವೈಖರಿಗೆ ನೇರ ವಿರೋಧವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸೋನಿಯಾ ಗಾಂಧಿ, ದಿವಂಗತ ಮನಮೋಹನ್ ಸಿಂಗ್ ಅವರ ವಿರುದ್ಧ ನಡೆದ ಆರೋಪಗಳು ರಾಜಕೀಯ ಪ್ರೇರಿತ ದುರುದ್ದೇಶದಿಂದ ಕೂಡಿದ್ದವು ಎಂದು ಆರೋಪಿಸಿದ್ದಾರೆ.

2014ರ ಜನವರಿಯಲ್ಲಿ ಮನಮೋಹನ್ ಸಿಂಗ್ ಅವರು “ಇತಿಹಾಸವು ನನ್ನನ್ನು ಮಾಧ್ಯಮಗಳು ಅಥವಾ ವಿರೋಧ ಪಕ್ಷಗಳಿಗಿಂತ ಹೆಚ್ಚು ದಯೆಯಿಂದ ನೆನಪಿಸಿಕೊಳ್ಳುತ್ತದೆ” ಎಂದು ಹೇಳಿದ್ದ ಮಾತುಗಳು ಇಂದು ನಿಜವಾಗಿವೆ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು 2017ರಲ್ಲಿ ರಾಜ್ಯಸಭೆಯಲ್ಲಿ ಸಿಂಗ್ ಅವರ ವಿರುದ್ಧ ಮಾಡಿದ್ದ ವ್ಯಂಗ್ಯದ ಟೀಕೆಗಳನ್ನು ಪ್ರಸ್ತಾಪಿಸಿದ ಅವರು, ಅದು ಸಂಸತ್ ಇತಿಹಾಸದ ಅತ್ಯಂತ ಕನಿಷ್ಠ ಮಟ್ಟದ ರಾಜಕೀಯ ಎಂದು ಟೀಕಿಸಿದ್ದಾರೆ.

ಸಿಂಗ್ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಆರ್ಥಿಕ ಸುಧಾರಣೆಗಳು, ಆರ್‌ಟಿಇ, ಎಂಜಿಎನ್‌ಆರ್‌ಇಜಿಎ (ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ) ಮತ್ತು ಐತಿಹಾಸಿಕ ಇಂಡೋ-ಯುಎಸ್ ಪರಮಾಣು ಒಪ್ಪಂದವನ್ನು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *