Home ಕ್ರೈಂ ನ್ಯೂಸ್ ನಟಿ ಕೋಮಲ್ ಜೊತೆ ಏರ್‌ಪೋರ್ಟ್‌ಗೆ ಬಂದ ನಟ ಗೋವಿಂದ ‘ಹೀರೋ ನಂ.1 ಅಲ್ಲ, ಚೀಟರ್ ನಂ.1’,” ವಿನಾಶ ಕಾಲೇ ವಿಪರೀತ ಬುದ್ಧಿ”: ಪತ್ನಿ ಸುನಿತಾ ಅಹುಜಾ ಸಿಡಿಮಿಡಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುಸಿನಿಮಾ

ನಟಿ ಕೋಮಲ್ ಜೊತೆ ಏರ್‌ಪೋರ್ಟ್‌ಗೆ ಬಂದ ನಟ ಗೋವಿಂದ ‘ಹೀರೋ ನಂ.1 ಅಲ್ಲ, ಚೀಟರ್ ನಂ.1’,” ವಿನಾಶ ಕಾಲೇ ವಿಪರೀತ ಬುದ್ಧಿ”: ಪತ್ನಿ ಸುನಿತಾ ಅಹುಜಾ ಸಿಡಿಮಿಡಿ!

Share
ಗೋವಿಂದ
Share

ಮುಂಬೈ: ಬಾಲಿವುಡ್‌ನ ‘ಹೀರೋ ನಂ. 1’ ನಟ ಗೋವಿಂದಾ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಅವರ 40 ವರ್ಷಗಳ ದಾಂಪತ್ಯ ಜೀವನದ ಗೊಂದಲಗಳು ಈಗ ಮತ್ತೆ ಬೀದಿಗೆ ಬಂದಿವೆ.

ಇತ್ತೀಚೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ನವನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಗೋವಿಂದಾ ಕಾಣಿಸಿಕೊಂಡ ಬೆನ್ನಲ್ಲೇ, ಅವರ ಪತ್ನಿ ಸುನಿತಾ ಅಹುಜಾ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮುಂಬೈನಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದ ಸುನಿತಾ ಅವರ ಬಳಿ ಪಪಾರಾಜಿಗಳು, “ಕೋಮಲ್ ಜೊತೆ ಗೋವಿಂದಾ ಕಾಣಿಸಿಕೊಂಡ ವೀಡಿಯೊ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?” ಎಂದು ಪ್ರಶ್ನಿಸಿದರು. ಇದಕ್ಕೆ ಖಾರವಾಗಿ ಉತ್ತರಿಸಿದ ಸುನಿತಾ, “ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಗಾದೆ ಕೇಳಿದ್ದೀರಾ? ಅವನ ಬುದ್ಧಿ ಭ್ರಷ್ಟವಾಗಿದೆ (ಕೆಟ್ಟಿದೆ), ಅದಕ್ಕೇ ಈ ರೀತಿ ಮಾಡುತ್ತಿದ್ದಾನೆ. ಈಗ ನಾನು ಇನ್ನೇನು ಹೇಳಲಿ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು, ‘ಹೀರೋ ನಂಬರ್ 1 ಈಗ ಚೀಟರ್ ನಂಬರ್ 1 ಆಗಿದ್ದಾರೆಯೇ?’ ಎಂಬ ಪ್ರಶ್ನೆಗೆ, “ಈ ಪ್ರಶ್ನೆಯನ್ನು ನೀವು ಗೋವಿಂದಾ ಅವರ ಅಭಿಮಾನಿಗಳಿಗೆ ಕೇಳಬೇಕು. ನಾನು ಏನಾದರೂ ಹೇಳಿದರೆ ಎಲ್ಲರೂ ನನ್ನನ್ನೇ ಟ್ರೋಲ್ ಮಾಡುತ್ತಾರೆ. ಹಾಗಾಗಿ ಇದಕ್ಕೆ ಅವರ ಅಭಿಮಾನಿಗಳೇ ಉತ್ತರಿಸಲಿ” ಎಂದು ಹೇಳಿದರು.

ಗೋವಿಂದಾ ಸಮಜಾಯಿಷಿ:

ಇನ್ನೊಂದೆಡೆ, ತಮ್ಮ ಮೇಲಿನ ಅಫೇರ್ ಆರೋಪಗಳ ಕುರಿತು ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಗೋವಿಂದಾ, “ಆಕೆ (ಸುನಿತಾ) ಪ್ರೀತಿಯಿಂದಲೇ ನನ್ನನ್ನು ಬಯ್ಯುತ್ತಾಳೆ, ಅದನ್ನು ನಾನು ಸ್ವೀಕರಿಸುತ್ತೇನೆ. ಆಕೆಯ ಕೋಪದ ಹಿಂದೆ ಪ್ರೀತಿಯೇ ಹೆಚ್ಚಾಗಿ ಕಾಣಿಸುತ್ತದೆ” ಎಂದು ಹೇಳುವ ಮೂಲಕ ಆರೋಪಗಳನ್ನು ತಳ್ಳಿಹಾಕಲು ಯತ್ನಿಸಿದ್ದರು.

ಗೋವಿಂದಾ ತಮ್ಮ ಸ್ವಂತ ನಿರ್ಮಾಣದ ‘ರೂಪಾ’ ಚಿತ್ರದ ಮೂಲಕ ಕೋಮಲ್ ರಾಣಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆದರೆ, ಈ ಹಿಂದೆ ನೀಡಿದ್ದ ಸಂದರ್ಶನಗಳಲ್ಲೂ ಸುನಿತಾ ಅವರು ಗೋವಿಂದಾ ಮತ್ತು ಕೋಮಲ್ ಹೆಸರಿನ ನಟಿಯ ನಡುವಿನ ಸಂಬಂಧದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಪ್ರಸ್ತುತ ಏರ್‌ಪೋರ್ಟ್ ವೀಡಿಯೊ ವೈರಲ್ ಆಗುತ್ತಿದ್ದಂತೆ ಈ ವಿವಾದ ಮತ್ತೆ ಕಾವು ಪಡೆದುಕೊಂಡಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles