Home ಕ್ರೈಂ ನ್ಯೂಸ್ “ಕಲ್ಲು ಬಿದ್ದಿದ್ದರೆ ಜೀವವೇ ಹೋಗುತ್ತಿತ್ತು”: ಪೊಲೀಸರ ವಿರುದ್ಧ ಮಮತಾ ಬ್ಯಾನರ್ಜಿ ಕೆಂಡಾಮಂಡಲ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಕಲ್ಲು ಬಿದ್ದಿದ್ದರೆ ಜೀವವೇ ಹೋಗುತ್ತಿತ್ತು”: ಪೊಲೀಸರ ವಿರುದ್ಧ ಮಮತಾ ಬ್ಯಾನರ್ಜಿ ಕೆಂಡಾಮಂಡಲ!

Share
ಮಮತಾ ಬ್ಯಾನರ್ಜಿ
Share

ಕೋಲ್ಕತ್ತಾ: ಉತ್ತರ 24 ಪರಗಣ ಜಿಲ್ಲೆಯ ಹಾಲಿಸಹರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಇಟ್ಟಿಗೆ ಮತ್ತು ಕಲ್ಲುಗಳಿಂದ ತೀವ್ರ ದಾಳಿ ನಡೆಸಿದ್ದಾರೆ.ಘಟನೆಯಲ್ಲಿ ಕಾರಿನ ಗಾಜುಗಳು ಮುಚ್ಚಿದ್ದರಿಂದ ಅನಾಹುತ ತಪ್ಪಿದ್ದು, “ಗಾಜು ತೆರೆದಿದ್ದರೆ ತಲೆಗೆ ಪೆಟ್ಟು ಬಿದ್ದು ಜೀವವೇ ಹೋಗುತ್ತಿತ್ತು” ಎಂದು ಮಮತಾ ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಯ ಹಿನ್ನೆಲೆ:

ಪೊಲೀಸ್ ಕಸ್ಟಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಟಿಎಂಸಿ ಕಾರ್ಯಕರ್ತ ಬೀರ್ಜು ಕೇವಟ್ ಅವರ ಕುಟುಂಬಸ್ಥರನ್ನು ಭೇಟಿಯಾಗಲು ಮಮತಾ ಬ್ಯಾನರ್ಜಿ ತೆರಳುತ್ತಿದ್ದರು. ಈ ವೇಳೆ ಸ್ಥಳೀಯ ಪ್ರತಿಭಟನಾಕಾರರು ಕಾರನ್ನು ಸುತ್ತುವರಿದು, ‘ಚೋರ್ ಭಗಾವೋ’ ಎಂಬ ಘೋಷಣೆಗಳನ್ನು ಕೂಗುತ್ತಾ ಕಾರಿನ ಮೇಲೆ ಕೆಸರು, ನೀರು ಹಾಗೂ ಶೂಗಳನ್ನು ಎಸೆದಿದ್ದಾರೆ.

ಪೋಲಿಸರ ವಿರುದ್ಧ ಆರೋಪ:

ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ಪೊಲೀಸರ ಸಮ್ಮುಖದಲ್ಲೇ ಹೊರಗಿನಿಂದ ಬಂದ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ನಮಗೆ ಭದ್ರತೆ ನೀಡಬೇಕಿದ್ದ ಪೊಲೀಸರು ಬಿಜೆಪಿ ಬೆಂಬಲಿಗರಿಗೆ ರಕ್ಷಣೆ ನೀಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು. ಅವರ ಜೊತೆಯಲ್ಲಿದ್ದ ಸಂಸದ ಕಲ್ಯಾಣ್ ಬ್ಯಾನರ್ಜಿ ಹಾಗೂ ಡೋಲಾ ಸೇನ್ ಕೂಡ ಆಡಳಿತ ಯಂತ್ರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಬಿಜೆಪಿ ಸ್ಪಷ್ಟನೆ:

ಈ ಮಧ್ಯೆ, ದಾಳಿಯನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಶಮೀಕ್ ಭಟ್ಟಾಚಾರ್ಯ, “ಈ ಹಿಂಸಾಚಾರಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಬೀರ್ಜು ಕೇವಟ್ ಅವರನ್ನು ಲಾಕಪ್‌ನಲ್ಲಿ ತೀವ್ರವಾಗಿ ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದ್ದು, ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles