Home ಕ್ರೈಂ ನ್ಯೂಸ್ ‘ತಿಳಿದೋ ತಿಳಿಯದೆಯೋ ಇಂತಹ ಹೇಳಿಕೆ ನೀಡಬೇಡಿ’, ಬಿಜೆಪಿಗೆ ಅನುಕೂಲವಾಗುವಂತೆ ಮಾತನಾಡಬೇಡಿ: ಶಶಿ ತರೂರ್‌ ಹೇಳಿಕೆಗೆ ಕೆ.ಸಿ. ವೇಣುಗೋಪಾಲ್ ಎಚ್ಚರಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ತಿಳಿದೋ ತಿಳಿಯದೆಯೋ ಇಂತಹ ಹೇಳಿಕೆ ನೀಡಬೇಡಿ’, ಬಿಜೆಪಿಗೆ ಅನುಕೂಲವಾಗುವಂತೆ ಮಾತನಾಡಬೇಡಿ: ಶಶಿ ತರೂರ್‌ ಹೇಳಿಕೆಗೆ ಕೆ.ಸಿ. ವೇಣುಗೋಪಾಲ್ ಎಚ್ಚರಿಕೆ!

Share
ಕೆ.ಸಿ. ವೇಣುಗೋಪಾಲ್
Share

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದ್ಯಾರ್ಥಿ ಹೋರಾಟದ ಕುರಿತು ಸಂಸದ ಶಶಿ ತರೂರ್ ನೀಡಿದ್ದ ಹೇಳಿಕೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ನಾಯಕರು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು ಮತ್ತು ಬಿಜೆಪಿಗೆ ಅನುಕೂಲವಾಗುವಂತಹ ಮಾತುಗಳನ್ನು ಆಡಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.

ವಿವಾದಕ್ಕೆ ಕಾರಣವೇನು?

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಶಿ ತರೂರ್, ರಾಹುಲ್ ಗಾಂಧಿ ನೇತೃತ್ವದ ‘ಛಾತ್ರೋಂ ಕಿ ಗೂಂಜ್’ ಅಭಿಯಾನಕ್ಕಿಂತ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಜಂತರ್ ಮಂತರ್ ಪ್ರತಿಭಟನೆ ಯುವಜನತೆಯಲ್ಲಿ (Gen Z) ಹೆಚ್ಚು ಸದ್ದು ಮಾಡಿತು. ಕಾಂಗ್ರೆಸ್ ಪಕ್ಷವು ಜನರ ನಾಡಿಮಿಡಿತವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಎಲ್ಲೋ ವಿಫಲವಾಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.

ವೇಣುಗೋಪಾಲ್ ನೀಡಿದ ಸ್ಪಷ್ಟನೆ:

ಈ ಕುರಿತು ಪ್ರತಿಕ್ರಿಯಿಸಿದ ಕೆ.ಸಿ. ವೇಣುಗೋಪಾಲ್, “ಶಶಿ ತರೂರ್ ಅವರು ಬೇಕೆಂದೇ ಅಥವಾ ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ನಾನು ನಂಬುವುದಿಲ್ಲ. ಆದರೂ, ತಿಳಿಯದೆಯೂ ಇಂತಹ ಹೇಳಿಕೆಗಳನ್ನು ನೀಡುವುದರಿಂದ ನಾವು ದೂರವಿರಬೇಕು. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಬಿಜೆಪಿಯನ್ನು ತೃಪ್ತಿಪಡಿಸುವ ಅಥವಾ ಅವರಿಗೆ ರಾಜಕೀಯ ಲಾಭ ತಂದುಕೊಡುವ ಹೇಳಿಕೆಗಳನ್ನು ನೀಡಬಾರದು” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮಗಳಲ್ಲಿ ನಿಜವಾದ ಯುವಜನತೆ ಮತ್ತು ‘Gen Z’ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ಪ್ರತಿಪಾದಿಸಿದ ವೇಣುಗೋಪಾಲ್, ವಿದ್ಯಾರ್ಥಿಗಳ ಪರ ಕಾಂಗ್ರೆಸ್ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದಿದ್ದಾರೆ.

Share

Leave a comment

Leave a Reply

Your email address will not be published. Required fields are marked *