Home ಕ್ರೈಂ ನ್ಯೂಸ್ JSSC ಪ್ರಶ್ನೆ ಪತ್ರಿಕೆ ಸೋರಿಕೆ ರಹಸ್ಯ: 120 ಪ್ರಶ್ನೆಗಳಿಗೆ ಉತ್ತರ, ವಾಟ್ಸಾಪ್‌ ಗ್ರೂಪ್‌ಗಳು ಮತ್ತು CID ಸ್ಪೋಟಕ ವರದಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

JSSC ಪ್ರಶ್ನೆ ಪತ್ರಿಕೆ ಸೋರಿಕೆ ರಹಸ್ಯ: 120 ಪ್ರಶ್ನೆಗಳಿಗೆ ಉತ್ತರ, ವಾಟ್ಸಾಪ್‌ ಗ್ರೂಪ್‌ಗಳು ಮತ್ತು CID ಸ್ಪೋಟಕ ವರದಿ!

Share
ಪ್ರಶ್ನೆ ಪತ್ರಿಕೆ
Share

ರಾಂಚಿ: ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (JSSC-CGL) 2024ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂಬ ಸತ್ಯ ಈಗ CID ತನಿಖಾ ವರದಿಯಿಂದ ಬಹಿರಂಗವಾಗಿದೆ. ರಾಜ್ಯ ಸರ್ಕಾರವು ಆರಂಭದಲ್ಲಿ ಈ ಅಕ್ರಮದ ಆರೋಪಗಳನ್ನು ತಳ್ಳಿಹಾಕಿ, ಪರೀಕ್ಷೆಗೆ ‘ಕ್ಲೀನ್ ಚೀಟ್’ ನೀಡಿತ್ತು. ಆದರೆ, ಈಗ NDTV ಲಭ್ಯಪಡಿಸಿಕೊಂಡಿರುವ ಸಿಐಡಿ ವರದಿಯು ಪರೀಕ್ಷಾ ಅಕ್ರಮದ ಸಂಪೂರ್ಣ ನೆರಳನ್ನು ಬಯಲು ಮಾಡಿದೆ.

ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಪರೀಕ್ಷೆಗಿಂತ ಮುಂಚಿತವಾಗಿಯೇ ವಾಟ್ಸಾಪ್ (WhatsApp) ಮೂಲಕ ಹಂಚಿಕೊಳ್ಳಲಾಗಿತ್ತು. ಹಜಾರಿಬಾಗ್, ಜಮ್‌ಶೆಡ್‌ಪುರ, ಪಟ್ನಾ, ಪಶ್ಚಿಮ ಬಂಗಾಳ ಹಾಗೂ ನೇಪಾಳದಲ್ಲಿ ಹಣ ನೀಡಿದ ಅಭ್ಯರ್ಥಿಗಳಿಗೆ ಉತ್ತರಗಳನ್ನು ತಲುಪಿಸಲಾಗಿತ್ತು ಎಂದು ವರದಿ ತಿಳಿಸಿದೆ.

120 ಪ್ರಶ್ನೆಗಳು ಲೀಕ್!

2024ರ ಸೆಪ್ಟೆಂಬರ್ 21 ಮತ್ತು 22 ರಂದು ನಡೆದ ಪರೀಕ್ಷೆಯ ಸಮಯದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ, ಲ್ಯಾಂಡ್‌ಲೈನ್ ಫೋನ್‌ಗಳು ಮತ್ತು ವಾಟ್ಸಾಪ್ ಚಿತ್ರಗಳ ಮೂಲಕ 150 ಪ್ರಶ್ನೆಗಳಲ್ಲಿ 120 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಸೆಪ್ಟೆಂಬರ್ 22ರ ಬೆಳಿಗ್ಗೆ 7:23 ರ ಸುಮಾರಿಗೆ ಜಮ್‌ಶೆಡ್‌ಪುರದಲ್ಲಿ ಹಂಚಿಕೊಳ್ಳಲಾದ ಕೈಬರಹದ ಉತ್ತರಗಳ ಫೋಟೋಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗಿವೆ.

ಸರ್ಕಾರದಿಂದ ‘ಕ್ಲೀನ್ ಚೀಟ್’ ನಾಟಕ:

2025ರ ಮಾರ್ಚ್‌ನಲ್ಲಿ CID ಸಲ್ಲಿಸಿದ ವರದಿಯಲ್ಲಿ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿತ್ತು. ಆದರೆ, ಸರ್ಕಾರವು ಆ ವರದಿಯನ್ನು ಮೂಲೆಗೆ ತಳ್ಳಿ, ಹೊಸ ಎಸ್‌ಐಟಿ (SIT) ತನಿಖೆಗೆ ಆದೇಶಿಸಿ ಅಕ್ರಮ ನಡೆದಿಲ್ಲ ಎಂದು ಪರೀಕ್ಷೆಗೆ ಕ್ಲೀನ್ ಚೀಟ್ ನೀಡಿತ್ತು. ಇದೀಗ JPSC ಪರೀಕ್ಷೆಯಲ್ಲೂ ಇಂತಹುದೇ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ನೇತೃತ್ವದಲ್ಲಿ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಬೃಹತ್ ಪ್ರತಿಭಟನೆ ವ್ಯಕ್ತವಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles