ಮುಂಬೈ: ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕರು ಹಾಗೂ ಯುವಕರನ್ನು ಲೈಂಗಿಕವಾಗಿ ಶೋಷಿಸಿ, ವಿಡಿಯೋ ಬೆದರಿಕೆಯೊಡ್ಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರೈಸಿಂಗ್‌ಪುರ ನಿವಾಸಿ ಚೇತನ್ ಪ್ರಕಾಶ್ ಕೋಲಿ ಎಂದು ಗುರುತಿಸಲಾಗಿದೆ.
ಆರೋಪಿಯು 2022 ರಿಂದ 2026ರ ಆಗಸ್ಟ್ ಅವಧಿಯವರೆಗೆ ಸಂತ್ರಸ್ತರನ್ನು ಹಣದ ಆಮಿಷವೊಡ್ಡಿ ಲೈಂಗಿಕವಾಗಿ ಶೋಷಿಸುತ್ತಿದ್ದ. ಬಳಿಕ ಆ ಕೃತ್ಯಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನ ಮೊಬೈಲ್ ಫೋನ್ ಪರೀಕ್ಷಿಸಿದಾಗ 600ಕ್ಕೂ ಹೆಚ್ಚು ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಡಿಯೋಗಳು ಮತ್ತು ಫೋಟೋಗಳು ಪತ್ತೆಯಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶ್ವಿನಿ ಸನಾಪ್ ಅವರ ನೇತೃತ್ವದಲ್ಲಿ ವಿಧಿವಿಜ್ಞಾನ (Forensic) ತಂಡವು ಮೊಬೈಲ್ ಫೋನ್ ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದೆ. ವಿಡಿಯೋಗಳ ಆಧಾರದ ಮೇಲೆ ಸಂತ್ರಸ್ತರನ್ನು ಗುರುತಿಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- 600 Videos Seized.
- Ashwini Sanap IPS
- Blackmail Video Case
- Chetan Prakash Koli Arrest
- Maharashtra Crime News
- Nandurbar Police Investigation
- Nandurbar Sexual Abuse Case
- POCSO Act Maharashtra
- ಚೇತನ್ ಪ್ರಕಾಶ್ ಕೋಲಿ
- ಡಿಜಿಟಲ್ ಸಾಕ್ಷ್ಯ.
- ನಂದೂರ್ಬಾರ್ ಬಂಧನ
- ಪೊಲೀಸರ ತನಿಖೆ
- ಪೋಕ್ಸೋ ಪ್ರಕರಣ
- ಬ್ಲಾಕ್‌ಮೇಲ್ ವಿಡಿಯೋ
- ಮಹಾರಾಷ್ಟ್ರ ಅಪರಾಧ ಸುದ್ದಿ
- ಲೈಂಗಿಕ ದೌರ್ಜನ್ಯ ಪ್ರಕರಣ





Leave a comment