Home ಕ್ರೈಂ ನ್ಯೂಸ್ 7 ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಹಂತಕ ಕೊನೆಗೂ ಸಿಕ್ಕಿಬಿದ್ದ: ಭಾರತೀಯ ಮೂಲದ ಹಿಮಾಂಶಿ ಕೊಲೆ ಪ್ರಕರಣದಲ್ಲಿ ದೊಡ್ಡ ತಿರುವು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

7 ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಹಂತಕ ಕೊನೆಗೂ ಸಿಕ್ಕಿಬಿದ್ದ: ಭಾರತೀಯ ಮೂಲದ ಹಿಮಾಂಶಿ ಕೊಲೆ ಪ್ರಕರಣದಲ್ಲಿ ದೊಡ್ಡ ತಿರುವು!

Share
ಭಾರತೀಯ
Share

ಟೊರೊಂಟೋ: ಕೆನಡಾದ ಟೊರೊಂಟೋದಲ್ಲಿ ನಡೆದಿದ್ದ 30 ವರ್ಷದ ಭಾರತೀಯ ಮೂಲದ ಯುವತಿ ಹಿಮಾಂಶಿ ಖುರಾನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಲಿವ್-ಇನ್ ಪಾರ್ಟ್‌ನೆರ್ ಅಬ್ದುಲ್ ಗಫೂರಿ (32) ಎಂಬಾತನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.

ಕಳೆದ ಡಿಸೆಂಬರ್ 19, 2025 ರಂದು ಹಿಮಾಂಶಿ ಖುರಾನಾ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಮರುದಿನ ಬೆಳಿಗ್ಗೆ ಟೊರೊಂಟೋದ ವಸತಿ ಗೃಹವೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿತ್ತು.

ಕೊಲೆಯಾದ ದಿನದಿಂದ ತಲೆಮರೆಸಿಕೊಂಡಿದ್ದ 32 ವರ್ಷದ ಅಬ್ದುಲ್ ಗಫೂರಿ ವಿರುದ್ಧ ಕೆನಡಾ ಪೊಲೀಸರು ರೆಡ್ ಕಾರ್ನರ್ ಮಾದರಿಯ ವಾರಂಟ್ ಹೊರಡಿಸಿ ತೀವ್ರ ಶೋಧ ನಡೆಸುತ್ತಿದ್ದರು. ಅಂತಾರಾಷ್ಟ್ರೀಯ ಪೋಲೀಸ್ ಸಂಸ್ಥೆಗಳ ನೆರವಿನೊಂದಿಗೆ ತನಿಖೆ ನಡೆಸಿದ ಟೊರೊಂಟೋ ಪೊಲೀಸರು, ಶುಕ್ರವಾರ ಟೊರೊಂಟೋ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಕಳವಳ:

ಹಿಮಾಂಶಿ ಖುರಾನಾ ಅವರ ದಾರುಣ ಕೊಲೆಗೆ ಟೊರೊಂಟೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಮತ್ತು ರಾಜತಾಂತ್ರಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles