ವಾಶಿಂ: ಜಮ್ಮು-ಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳುವ ಮುನ್ನವೇ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಬಳಿಕ ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಭಾರತೀಯ ಸೇನೆಯ ಯೋಧನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ವಾಶಿಂ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಯೋಧನನ್ನು 6 ಮರಾಠಾ ಬಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿರುವ ಜ್ಞಾನೇಶ್ವರ್ ಮಾಡ್ನೆ ಎಂದು ಗುರುತಿಸಲಾಗಿದೆ. ಮೃತ ದುರ್ದೈವಿ ಮಹಿಳೆಯನ್ನು ದೀಪಾಲಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಗುರುವಾರ ಮಧ್ಯಾಹ್ನ ಆರೋಪಿ ಜ್ಞಾನೇಶ್ವರ್, ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿರುವ ಪತ್ನಿಯ ಮನೆಯವರಿಗೆ ಕರೆ ಮಾಡಿ, “ದೀಪಾಲಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ” ಎಂದು ತಿಳಿಸಿದ್ದ. ತಕ್ಷಣವೇ ವಾಶಿಂಗೆ ಆಗಮಿಸಿದ ಕುಟುಂಬಸ್ಥರಿಗೆ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ.
ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಬೇಕಿದ್ದ ಆರೋಪಿ ಮತ್ತು ಪತ್ನಿ ನಡುವೆ ಮನೆಯಲ್ಲಿ ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಜ್ಞಾನೇಶ್ವರ್ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯನ್ನು ಆಂಬುಲೆನ್ಸ್ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಿದ್ದು ಗಾಯಗೊಂಡಿದ್ದಾಗಿ ಸುಳ್ಳು ಹೇಳಿದ್ದ.
ವೈದ್ಯರ ಅನುಮಾನದಿಂದ ಬಯಲಾಯ್ತು ಕೃತ್ಯ:
ಖಾಸಗಿ ಆಸ್ಪತ್ರೆಯ ವೈದ್ಯರು ಸಂಶಯಗೊಂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಅಲ್ಲಿನ ವೈದ್ಯರು ಪರಿಶೀಲಿಸಿದಾಗ ಮೃತರ ಕುತ್ತಿಗೆಯ ಸುತ್ತ ಗಾಯದ ಗುರುತುಗಳು ಕಂಡುಬಂದಿವೆ. ತಕ್ಷಣವೇ ಎಚ್ಚೆತ್ತ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಕ್ರಮ ಸಂಬಂಧವೇ ಕೊಲೆಗೆ ಕಾರಣ?
ಆರೋಪಿ ಜ್ಞಾನೇಶ್ವರ್ಗೆ ಅಕ್ರಮ ಸಂಬಂಧವಿತ್ತು. ಈ ವಿಷಯವಾಗಿ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಮೃತರ ಸಹೋದರ ರಾಹುಲ್ ಮಾನೆ ಆರೋಪಿಸಿದ್ದಾರೆ. ಈ ಹಿಂದೆ ಎರಡೂ ಕುಟುಂಬಗಳು ಸಭೆ ನಡೆಸಿ ರಾಜಿ ಪಂಚಾಯಿತಿ ಮಾಡಿದ್ದರೂ ಕಿರುಕುಳ ಮುಂದುವರಿದಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬ ನೀಡಿದ ದೂರಿನನ್ವಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೈನಿಕ ಹಾಗೂ ಆತನ ಪೋಷಕರನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
- 6 Maratha Battalion
- Army jawan arrested
- Army jawan strangles wife
- Dnyaneshwar Madne
- Maharashtra Crime News
- Maharashtra crime updates
- pregnant wife murdered
- Washim murder case
- ಅಕ್ರಮ ಸಂಬಂಧ ಕೊಲೆ
- ಆರ್ಮಿ ಜವಾನ್ ಬಂಧನ
- ಕುತ್ತಿಗೆ ಹಿಸುಕಿ ಕೊಲೆ
- ಗರ್ಭಿಣಿ ಪತ್ನಿ ಕೊಲೆ
- ಜ್ಞಾನೇಶ್ವರ್ ಮಾಡ್ನೆ
- ಮಹಾರಾಷ್ಟ್ರ ಅಪರಾಧ ಸುದ್ದಿ
- ವಾಶಿಂ ಕೊಲೆ ಪ್ರಕರಣ
- ಸೇನಾ ಯೋಧನ ಕೃತ್ಯ





Leave a comment