Home ದಾವಣಗೆರೆ ಪತ್ನಿ ಮನೆ ತೊರೆದ ಬೆನ್ನಲ್ಲೇ ಬೆಚ್ಚಿಬೀಳಿಸುವ ಕೃತ್ಯ: 4 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮಂಧ ತಂದೆ ಬಂಧನ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪತ್ನಿ ಮನೆ ತೊರೆದ ಬೆನ್ನಲ್ಲೇ ಬೆಚ್ಚಿಬೀಳಿಸುವ ಕೃತ್ಯ: 4 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮಂಧ ತಂದೆ ಬಂಧನ

Share
ಪತ್ನಿ
Share

ಗಾಂಧಿನಗರ: ಪತ್ನಿಯ ಗೆಳತಿಗೆ ಲೈಂಗಿಕ ಕಿರುಕುಳ ನೀಡಿದ ವಿಚಾರವಾಗಿ ದಂಪತಿ ನಡುವೆ ಉಂಟಾದ ಗಲಾಟೆ ಕೊನೆಗೆ ದುರಂತದಲ್ಲಿ ಅಂತ್ಯವಾಗಿದೆ. ಪತ್ನಿ ಮನೆ ತೊರೆದು ಹೋದ ಸಿಟ್ಟಿನಲ್ಲಿ, ತನ್ನ ನಾಲ್ಕು ವರ್ಷದ ಹೆತ್ತ ಮಗಳ ಮೇಲೆಯೇ ತಂದೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್‌ನ ಗಾಂಧಿನಗರದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 32 ವರ್ಷದ ಆರೋಪಿ ತಂದೆಯನ್ನು ಪೋಕ್ಸೋ (POCSO) ಕಾಯ್ದೆಯಡಿ ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.

ಘಟನೆಯ ವಿವರ:

ಪೋಲಿಸರು ನೀಡಿದ ಮಾಹಿತಿಯ ಪ್ರಕಾರ, ಸಂತ್ರಸ್ತೆ ಮಹಿಳೆಯ ಗೆಳತಿಯೊಬ್ಬರು ಇವರ ಮನೆಯಲ್ಲಿ ತಂಗಿದ್ದರು. ಈ ವೇಳೆ ಆರೋಪಿ ಆಕೆಗೆ ಅಶ್ಲೀಲವಾಗಿ ವರ್ತಿಸಿ, ಏಕಾಂತದಲ್ಲಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗಂಡ-ಹೆಂಡತಿಯ ನಡುವೆ ತೀವ್ರ ಗಲಾಟೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಪತ್ನಿ, ತನ್ನ ನಾಲ್ಕು ವರ್ಷದ ಮಗಳು ಮತ್ತು ಎರಡು ವರ್ಷದ ಮಗನನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದಳು.

ಬಳಿಕ ತವರು ಮನೆಗೆ ತೆರಳಿದ ಆರೋಪಿ, ಮಕ್ಕಳಲ್ಲಿ ಒಬ್ಬರನ್ನು ತನ್ನೊಂದಿಗೆ ಕಳುಹಿಸುವಂತೆ ಪಟ್ಟು ಹಿಡಿದಿದ್ದಾನೆ. ಕುಟುಂಬಸ್ಥರು ಆರಂಭದಲ್ಲಿ ನಿರಾಕರಿಸಿದರೂ, ಕೊನೆಗೆ ಹೆಣ್ಣುಮಗಳನ್ನು ಆತನೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ಅತ್ಯಾಚಾರ ಮತ್ತು ವೈದ್ಯಕೀಯ ಪರೀಕ್ಷೆ:

ಮನೆಗೆ ಕರೆತಂದ ರಾತ್ರಿ ಮಗಳ ಮೇಲೆ ಕಾಮಂಧ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗು ನೋವಿನಿಂದ ಕಿರುಚಾಡಿದಾಗ ಆತ ಕೃತ್ಯವನ್ನು ನಿಲ್ಲಿಸಿದ್ದಾನೆ. ಮರುದಿನ ಬೆಳಿಗ್ಗೆ ಮಗುವಿಗೆ ಸ್ನಾನ ಮಾಡಿಸುವಾಗ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ ಅತ್ತೆ, ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಮಗುವನ್ನು ಗಾಂಧಿನಗರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಸಂತ್ರಸ್ತ ಕುಟುಂಬಸ್ಥರು ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *