ದಾವಣಗೆರೆ: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಶಾಸಕಿಯರಿಗೆ ಸಚಿವ ಸ್ಥಾನ ನೀಡದೇ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದೆ. ಚುನಾವಣೆಗಳಲ್ಲಿ ಮಹಿಳೆಯರ ಮತ ಬೇಕು. ಆದರೆ ಪ್ರಾತಿನಿಧ್ಯ ಕೊಡುವುದಿಲ್ಲ ಎಂಬ ಧೋರಣೆ ಹೊಂದಿರುವ ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೇತನಾ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿರೋಧಿಸಿದ್ದೂ ಅಲ್ಲದೇ, ಮಹಿಳೆಯರು ಮತ ಹಾಕಲು ಮಾತ್ರ ಬೇಕು, ಪ್ರಾತಿನಿಧ್ಯ ಕೇಳಬಾರದು ಎನ್ನುವ ನಿಲುವ ತೋರಿರುವುದು ಜಗಜ್ಜಾಹೀರಾಗಿದೆ. ರಾಜ್ಯದ ಸಚಿವ ಸಂಪುಟದಲ್ಲಿ ಓರ್ವ ಮಹಿಳೆಗೂ ಸಚಿವ ಸ್ಥಾನ ನೀಡದೇ ಮಹಿಳಾ ಸಮುದಾಯ ಕಡೆಗಣಿಸಿದೆಯಷ್ಟೇ ಅಲ್ಲ, ಸ್ತ್ರೀಕುಲಕ್ಕೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದ್ದಾರೆ.
ಗೃಹಲಕ್ಷ್ಮಿ, ಉಚಿತ ಬಸ್ ಯೋಜನೆಗಳನ್ನು ಕೊಟ್ಟು ಮಹಿಳೆಯರಿಗೆ ಆಸೆ ತೋರಿಸಿ ಮತ ಪಡೆದ ಕಾಂಗ್ರೆಸ್ ಈಗ ಮಹಿಳೆಯರ ಮತಗಳಿಂದ ಗೆದ್ದಿದ್ದೇವೆ ಎಂಬುದನ್ನು ಮರೆತಂತೆ ಕಾಣುತ್ತದೆ. ಪುರುಷ ಮತದಾರರಿಗಿಂತ ಹೆಚ್ಚು ಮತದಾರರಿವುದು
ಮಹಿಳೆಯರು. ಮಹಿಳೆಯರನ್ನು ಇಷ್ಟು ಕಡೆಗಣಿಸಿರುವ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಸಂಸತ್ ಮತ್ತು ವಿಧಾನಸಭೆಗಳಲ್ಲಿ ನೀಡುವ ನಾರಿಶಕ್ತಿ ವಂದನಾ ಮಸೂದೆಯನ್ನು ವಿರೋಧಿಸಿ, ಮಹಿಳೆಯರನ್ನು ಅವಮಾನಿಸಿದ ಕಾಂಗ್ರೆಸ್ ಪಕ್ಷದಿಂದ ಮಹಿಳಾ ಆದ್ಯತೆ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಒಬ್ಬ ಶಾಸಕಿಯರಿಗೂ ಸಚಿವ ಸ್ಥಾನ ನೀಡದೇ ಮೋಸ ಮಾಡಿರುವ ಕಾಂಗ್ರೆಸ್ ಗೆ ಮಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಚೇತನಾ ಶಿವಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ಭವಿಷ್ಯ ನುಡಿದಿದ್ದಾರೆ.
- BJP Mahila Morcha
- Chetana Shivakumar
- Congress Women Cabinet Representation
- DAVANAGERE BJP
- DAVANAGERE NEWS
- Gruha Lakshmi Scheme
- Karnataka Cabinet expansion
- Karnataka Politics
- Nari Shakti Vandan Adhiniyam
- ಕರ್ನಾಟಕ ರಾಜಕೀಯ
- ಕರ್ನಾಟಕ ಸಚಿವ ಸಂಪುಟ
- ಕಾಂಗ್ರೆಸ್ ಮಹಿಳಾ ವಿರೋಧಿ
- ಗೃಹಲಕ್ಷ್ಮಿ ಯೋಜನೆ
- ಚೇತನಾ ಶಿವಕುಮಾರ್
- ದಾವಣಗೆರೆ ಸುದ್ದಿ
- ನಾರಿಶಕ್ತಿ ವಂದನಾ ಕಾಯ್ದೆ
- ಬಿಜೆಪಿ ಮಹಿಳಾ ಮೋರ್ಚಾ
- ಮಹಿಳಾ ಪ್ರಾತಿನಿಧ್ಯ
- ಶಕ್ತಿ ಯೋಜನೆ






Leave a comment