ದಾವಣಗೆರೆಯ ಜಿ.ಎಂ. ವಿಶ್ವವಿದ್ಯಾಲಯದಲ್ಲಿ “ಜಿ.ಎಂ.ಯು. ಲಾಂಚ್ ಪ್ಯಾಡ್ 2026” ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ವಿದ್ಯಾರ್ಥಿಗಳು 18ಕ್ಕೂ ಹೆಚ್ಚು ನವೀನ ಸ್ಟಾರ್ಟ್‌ಅಪ್ ಯೋಜನೆಗಳನ್ನು ಪ್ರದರ್ಶಿಸಿ ಉದ್ಯಮ ತಜ್ಞರಿಂದ ಮಾರ್ಗದರ್ಶನ ಪಡೆದರು.
ದಾವಣಗೆರೆ: ಇಲ್ಲಿನ ಜಿ.ಎಂ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ನಾವೀನ್ಯತೆ (Innovation), ಉದ್ಯಮಶೀಲತೆ (Entrepreneurship) ಹಾಗೂ ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ “ಜಿ.ಎಂ.ಯು. ಲಾಂಚ್ ಪ್ಯಾಡ್ 2026” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪೂರ್ಣಗೊಂಡಿತು.
ವಿವಿಧ ಶೈಕ್ಷಣಿಕ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಸುಪ್ತ ಜ್ಞಾನ ಮತ್ತು ನಾವೀನ್ಯತಾ ಚಿಂತನೆಗಳನ್ನು (Innovative Mind) ಹೊರಹಾಕಲು ಈ ಕಾರ್ಯಕ್ರಮವು ಅತ್ಯುತ್ತಮ ಬೃಹತ್ ವೇದಿಕೆಯನ್ನು ಕಲ್ಪಿಸಿಕೊಟ್ಟಿತು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಒಟ್ಟು 18ಕ್ಕೂ ಹೆಚ್ಚು ನವೀನ ಯೋಜನೆಗಳನ್ನು (Projects) ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
“ಐಡಿಯಾಸ್ ಟುಡೇ, ಸ್ಟಾರ್ಟ್‌ಅಪ್ಸ್ ಟುಮಾರೋ, ಇಂಪ್ಯಾಕ್ಟ್ ಫಾರೆವರ್” (Ideas Today, Startups Tomorrow, Impact Forever) ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಯುವ ನಾವೀನ್ಯಕಾರರಿಗೆ ಹೂಡಿಕೆದಾರರನ್ನು ಭೇಟಿ ಮಾಡಲು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತು.
ಪ್ರದರ್ಶನದ ಪ್ರಮುಖ ಆಕರ್ಷಣೆಗಳು:
ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ತಮ್ಮ ಸೃಜನಶೀಲ ಮಾದರಿಗಳನ್ನು ಪ್ರದರ್ಶಿಸಿದರು.
ಪ್ರಮುಖವಾದವುಗಳು:
ಸ್ಮಾರ್ಟ್ ನೀರಾವರಿ ವ್ಯವಸ್ಥೆ (Smart Irrigation System): ಆಧುನಿಕ ತಂತ್ರಜ್ಞಾನ ಬಳಸಿ ಕೃಷಿಯಲ್ಲಿ ನೀರನ್ನು ಮಿತವಾಗಿ ಹಾಗೂ ಸಮರ್ಥವಾಗಿ ಬಳಸುವ ವಿಧಾನ.
ಕೃಷಿ ಉಪಕರಣ:
ಟ್ರ್ಯಾಕ್ಟರ್-ಮೌಂಟೆಡ್ ಸ್ವಯಂಚಾಲಿತ ಕೀಟನಾಶಕ ಸಿಂಪಡಣೆ ಯಂತ್ರ.
ಪರಿಸರ ಸ್ನೇಹಿ ಉತ್ಪನ್ನಗಳು:
ಸುಸ್ಥಿರ ಅಡಿಕೆ ಹಾಳೆಯ ನೀರಿನ ಬಾಟಲಿಗಳು ಮತ್ತು ಅಡಿಕೆ ಸಿಪ್ಪೆಯ ಟೈಲ್ಸ್‌ಗಳ ತಯಾರಿಕೆ.
ತಂತ್ರಜ್ಞಾನ ಹಾಗೂ ಆರೋಗ್ಯ ಕ್ಷೇತ್ರ:
ಕೃತಕ ಬುದ್ಧಿಮತ್ತೆ (AI) ಆಧಾರಿತ ಕೌಶಲ್ಯ ತರಬೇತಿ ಮತ್ತು ನ್ಯೂರಲ್ ಫಿಸಿಯೋ ಎಐ (Neural Physio AI) ತಂತ್ರಜ್ಞಾನ.
ಕಾರ್ಯಕ್ರಮದ ಪ್ರಮುಖ ಉದ್ದೇಶಗಳು
ನಾವೀನ್ಯತೆ ಪ್ರೋತ್ಸಾಹ:
ವಿದ್ಯಾರ್ಥಿಗಳಲ್ಲಿ ನಾವೀನ್ಯತಾ ಚಿಂತನೆ ಮತ್ತು ನೈಜ ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳನ್ನು ಉತ್ತೇಜಿಸುವುದು.
ಬಂಡವಾಳ ಹೂಡಿಕೆ ಅವಕಾಶ:
ವಿನೂತನ ಕಲ್ಪನೆಗಳನ್ನು ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೂಡಿಕೆದಾರರು ಮತ್ತು ಉದ್ಯಮ ತಜ್ಞರ ನೇರ ಸಂಪರ್ಕ ಕಲ್ಪಿಸುವುದು.
ಮಾರ್ಗದರ್ಶನ ಮತ್ತು ಬೆಂಬಲ:
ಭವಿಷ್ಯದ ನಾವೀನ್ಯತೆಗಳಿಗೆ ಆರ್ಥಿಕ ನೆರವು, ತರಬೇತಿ ಹಾಗೂ ಇನ್‌ಕ್ಯುಬೇಷನ್ ಬೆಂಬಲ ಒದಗಿಸುವುದು.
ಆತ್ಮನಿರ್ಭರ ಭಾರತ: ಹೊಸ ಸ್ಟಾರ್ಟ್‌ಅಪ್‌ಗಳನ್ನು ಹುಟ್ಟುಹಾಕುವ ಮೂಲಕ ದೇಶದ ‘ಆತ್ಮನಿರ್ಭರ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡುವುದು.
ಅನುಭವದ ಮಾರ್ಗದರ್ಶನ ನೀಡಿದ ಉದ್ಯಮಿಗಳು
ಈ ಲಾಂಚ್ ಪ್ಯಾಡ್ ನಲ್ಲಿ ಭಾಗವಹಿಸಿದ್ದ ಸ್ವಾತಿ ಕುಕ್ಕರ್ ಉದ್ಯಮಿ ಸತ್ಯನಾರಾಯಣ, ಹರ್ಷ ಪ್ರದೀಪ್, ದೀಪ ಇಂಡಸ್ಟ್ರೀಸ್ ಹನುಮಂತ್ ರಾವ್, ಸಂಪದಾ ಆರ್ಗಾನಿಕ್ ರಾಜಶೇಖರ್ ಪ್ರಮೋದ್, ಸ್ಮಾರ್ಟ್ ಸಿಟಿಯ ಮಾಲ್ತೇಶ್ ಬಿ, ಯಶವಂತ್ ಎಸ್ ಎಸ್, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ನಾಗೇಶ್ ಎಲ್, ಬೆಂಗಳೂರಿನ ಆಕ್ಟೆವಿಯಾದ ನಾಗರಾಜ್, ಕಮಲ್ ಅಗರ್ವಾಲ್, ಸ್ಮಿತಾ ಎಂಟರ್‌ಪ್ರೈಸಸ್ ಅರುಣ್, ಕತ್ರಾ ಫೈಟೋಕೆಮ್ ಡಾ. ರವೀಂದ್ರ ಕುಲಕರ್ಣಿ, ತುಮ್ಕೋಸ್ ನ ಸಿದ್ದೇಶ್ ಎಮ್ ಎಸ್, ಮೋದಿ ಕೇರ್ ನ ಆರ್. ಜಿ. ಕುಲಕರ್ಣಿ, ಚೆನ್ನೈ ಮಾಲ್ ನ ಮಧು, ಸುರಕ್ಷಾ ಕಂಪನಿಯ ಪ್ರಮೋದ್ ಸೇರಿದಂತೆ ಉದ್ಯಮ ತಜ್ಞರು, ಕೈಕಾರಿಕೋದ್ಯಮಿಗಳು ವಿದ್ಯಾರ್ಥಿಗಳ ಈ ನಾವೀನ್ಯತಾ ಚಿಂತನೆಯಲ್ಲಿ ಸೃಷ್ಟಿಯಾದ ಪ್ರಾಜೆಕ್ಟ್ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಉದ್ಯಮಶೀಲತೆ ಹಾಗೂ ಸ್ಟಾರ್ಟ್‌ಅಪ್ ಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡು ಉಪಯುಕ್ತ ಮಾರ್ಗದರ್ಶನ ಮಾಡಿದರು.
- Arecanut Leaf Water Bottle
- DAVANAGERE NEWS
- GM University Davanagere
- GMU Launch Pad 2026
- Innovation and Entrepreneurship
- Karnataka Startup News
- Neural Physio AI
- Smart Irrigation System
- Student Startups Karnataka
- ಅಡಿಕೆ ಹಾಳೆಯ ಬಾಟಲಿ
- ಆತ್ಮನಿರ್ಭರ ಭಾರತ
- ಕೃಷಿ ತಂತ್ರಜ್ಞಾನ
- ಜಿಎಂ ವಿಶ್ವವಿದ್ಯಾಲಯ ದಾವಣಗೆರೆ
- ಜಿಎಂಯು ಲಾಂಚ್ ಪ್ಯಾಡ್ 2026
- ದಾವಣಗೆರೆ ಸುದ್ದಿ
- ನಾವೀನ್ಯತೆ ಮತ್ತು ಉದ್ಯಮಶೀಲತೆ
- ವಿದ್ಯಾರ್ಥಿ ಸ್ಟಾರ್ಟ್ಅಪ್ಗಳು






Leave a comment