Home ದಾವಣಗೆರೆ ಭದ್ರಾ ಡ್ಯಾಂ ನೀರಿನ ಮಟ್ಟ 157.3ಕ್ಕೆ ಏರಿಕೆ: ಜಲಾಶಯಕ್ಕೆ ಭಾರೀ ಒಳಹರಿವು, ಎಷ್ಟಿದೆ? ಭದ್ರಾ ಅಚ್ಚುಕಟ್ಟುದಾರರಲ್ಲಿ ಸಂಭ್ರಮ
ದಾವಣಗೆರೆಬೆಂಗಳೂರು

ಭದ್ರಾ ಡ್ಯಾಂ ನೀರಿನ ಮಟ್ಟ 157.3ಕ್ಕೆ ಏರಿಕೆ: ಜಲಾಶಯಕ್ಕೆ ಭಾರೀ ಒಳಹರಿವು, ಎಷ್ಟಿದೆ? ಭದ್ರಾ ಅಚ್ಚುಕಟ್ಟುದಾರರಲ್ಲಿ ಸಂಭ್ರಮ

Share
ಭದ್ರಾ ಡ್ಯಾಂ
Share

ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂಭ್ರಮ ಮನೆ ಮಾಡಿದೆ.  ಭದ್ರಾ ಡ್ಯಾಂ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ (Bhadra Reservoir) ಒಳಹರಿವು ಹೆಚ್ಚಳವಾಗಿದೆ.

ಈ ವರ್ಷ 17 ಸಾವಿರ ಕ್ಯೂಸೆಕ್ ಒಳಹರಿವು ಬಂದಿದ್ದು ಬಿಟ್ಟರೆ ಮತ್ತೆ ಕಡಿಮೆಯಾಗಿತ್ತು. ಆದರೆ ಈಗ ಸುಮಾರು 13 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ರೈತರು ಸ್ವಲ್ಪ ಮಟ್ಟಿಗೆ ಸಮಾಧಾನ ಆಗುವಂತೆ ಮಾಡಿದೆ. ಮಾತ್ರವಲ್ಲ, ಭದ್ರಾ ಡ್ಯಾಂ ಭರ್ತಿಯಾಗಲುಇನ್ನು ಕೇವಲ 28.7 ಅಡಿ ನೀರು ಮಾತ್ರ ಬೇಕು.

ಇಂದು (ಆಗಸ್ಟ್ 01, 2026) ಬೆಳಿಗ್ಗೆ 6 ಗಂಟೆಯ ಅಧಿಕೃತ ವರದಿಯಂತೆ ಜಲಾಶಯಕ್ಕೆ 12,983 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಭದ್ರಾ ಜಲಾಶಯದ ಇಂದಿನ ಜಲಮಟ್ಟದ ವಿವರ:

  • ಗರಿಷ್ಠ ಮಟ್ಟ (FRL): 186.00 ಅಡಿ (2158.00 MSL)

  • ಇಂದಿನ ನೀರಿನ ಮಟ್ಟ: 157′ 3″ ಅಡಿ (2129.25 MSL)

  • ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ: 71.535 ಟಿ.ಎಂ.ಸಿ (TMC)

  • ಇಂದಿನ ನೀರು ಸಂಗ್ರಹ: 40.409 ಟಿ.ಎಂ.ಸಿ

  • ಇಂದಿನ ಒಳಹರಿವು (Inflow): 12,983 ಕ್ಯೂಸೆಕ್

  • ಇಂದಿನ ಹೊರಹರಿವು (Outflow): 182 ಕ್ಯೂಸೆಕ್

    • ರಿವರ್ ಸ್ಲೂಯಿಸ್: 100 ಕ್ಯೂಸೆಕ್

    • ಬಲದಂಡೆ ನಾಲೆ (RBC): 0 ಕ್ಯೂಸೆಕ್

    • ಎಡದಂಡೆ ನಾಲೆ (LBC): 0 ಕ್ಯೂಸೆಕ್

    • ಆವಿಯಾಗುವಿಕೆ (Evaporation): 82 ಕ್ಯೂಸೆಕ್

ಕಳೆದ ವರ್ಷದ ಹೋಲಿಕೆ:

ಕಳೆದ ವರ್ಷ ಇದೇ ದಿನ (ಆಗಸ್ಟ್ 01, 2025) ಜಲಾಶಯದ ನೀರಿನ ಮಟ್ಟ 180.3 ಅಡಿ ಇತ್ತು ಹಾಗೂ 64.478 ಟಿ.ಎಂ.ಸಿ ನೀರು ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದರೂ, ಒಳಹರಿವು ಸ್ಥಿರವಾಗಿ ಹೆಚ್ಚುತ್ತಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.

ಈಗ ಬರುತ್ತಿರುವ ಮಳೆ ಮುಂದುವರಿದರೆ ಭದ್ರಾ ಡ್ಯಾಂ ಭರ್ತಿಯಾಗಲಿದೆ. ಆಗಸ್ಟ್ ತಿಂಗಳಿನಲ್ಲಿ ಮಳೆ ಕೈಕೊಟ್ಟರೆ ಡ್ಯಾಂ ತುಂಬುವುದು ಕಷ್ಟ ಎಂದು ಹೇಳಲಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *