Home ಕ್ರೈಂ ನ್ಯೂಸ್ ದಾವಣಗೆರೆ ಶಕ್ತಿ ದೇವತೆ ದುರ್ಗಾಂಬಿಕಾ ದೇವಿಯ ಒಡವೆಗಳು ಕಳ್ಳತನವಾಗಿರುವುದೆಷ್ಟು? ಮೌಲ್ಯ ಎಷ್ಟು? ಇಂಟ್ರೆಸ್ಟಿಂಗ್ ಮಾಹಿತಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಶಕ್ತಿ ದೇವತೆ ದುರ್ಗಾಂಬಿಕಾ ದೇವಿಯ ಒಡವೆಗಳು ಕಳ್ಳತನವಾಗಿರುವುದೆಷ್ಟು? ಮೌಲ್ಯ ಎಷ್ಟು? ಇಂಟ್ರೆಸ್ಟಿಂಗ್ ಮಾಹಿತಿ!

Share
ದಾವಣಗೆರೆ
Share

ದಾವಣಗೆರೆನಗರದ ಪ್ರಸಿದ್ಧ ಹಾಗೂ ಭಕ್ತರ ಆರಾಧ್ಯ ದೈವ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ (ದುಗ್ಗಮ್ಮನ ಗುಡಿ) ದೇವಿಗೆ ಸೇರಿದ ಅಪಾರ ಮೌಲ್ಯದ ಬಂಗಾರದ ಆಭರಣಗಳು ಕಳುವಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ 16 ವರ್ಷಗಳಿಂದ ದೇವಸ್ಥಾನದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಚ್. ಗೋಣೆಪ್ಪ ಅವರು ಈ ಕುರಿತು ಮಾಹಿತಿ ಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇವಸ್ಥಾನದಲ್ಲಿ ಕಳುವಾಗಿರುವ ಬಂಗಾರದ ಆಭರಣಗಳ ಕುರಿತಂತೆ ತಿಳಿಸಿದ್ದಾರೆ.

ಘಟನೆಯ ವಿವರ:

ದಿನಾಂಕ 24.01.2026 ರಂದು ದೇವಸ್ಥಾನದ ಟ್ರಸ್ಟ್‌ನ ನಿರ್ಧಾರದಂತೆ ಪೂಜಾರಿಕೆಗಾಗಿ 18 ಜನರ ಅರ್ಚಕರ ತಂಡವನ್ನು ನೇಮಿಸಿಕೊಳ್ಳಲಾಗಿತ್ತು. ಈ ವೇಳೆ ದೇವಸ್ಥಾನಕ್ಕೆ ಸೇರಿದ ಒಟ್ಟು 34 ವಿವಿಧ ಬಂಗಾರದ ಆಭರಣಗಳನ್ನು ಅರ್ಚಕರ ವಶಕ್ಕೆ ನೀಡಲಾಗಿತ್ತು. ಆದರೆ, ದಿನಾಂಕ 09.07.2026 ರಂದು ಆಭರಣಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಪ್ರಮುಖ 6 ಚಿನ್ನದ ಆಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.

ಕಳುವಾದ ಪ್ರಮುಖ ಆಭರಣಗಳ ಪಟ್ಟಿ:

  • 2 ಬಂಗಾರದ ಕಣ್ಣುಗಳು

  • 59 ಕಾಸು ಹಾಗೂ ಕೊಂಡಿ ಸಹಿತ ಇರುವ 1 ಬಂಗಾರದ ಕಾಶಿನ ಸರ

  • 40 ಗುಂಡು, 2 ತಾಳಿ, 3 ಹವಳ ಹಾಗೂ 4 ಕರಿಮಣಿ ಸಹಿತ ಇರುವ 1 ಗುಂಡಿನ ಸರ

  • 1 ದೊಡ್ಡ ಪದಕ, 31 ಸಣ್ಣ ಪದಕ ಮತ್ತು 32 ಸಣ್ಣ ಗುಂಡುಗಳಿರುವ ಬಂಗಾರದ ಸರ

  • 50 ಗುಂಡುಗಳಿರುವ 1 ಬಂಗಾರದ ನೆಲ್ಲಿಕಾಯಿ ಗುಂಡಿನ ಸರ

  • 25 ಬೇವಿನಕಾಯಿ ಗುಂಡುಗಳು ಹಾಗೂ ಕೊಂಡಿ ಇರುವ ಬಂಗಾರದ ಸರ

ಸಮುದಾಯ ಭವನ ಮತ್ತು ಲೆಕ್ಕಪತ್ರ:

ಇದೇ ವೇಳೆ, ಹೊಂಡದ ಸರ್ಕಲ್ ಬಳಿ ದಾವಣಗೆರೆ ಸ್ಮಾರ್ಟ್ ಸಿಟಿಯವರಿಂದ ನಿರ್ಮಾಣಗೊಂಡು ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡಿದ್ದ ಸಮುದಾಯ ಭವನವನ್ನು ರಿಪೇರಿ ಮಾಡಿಸಿ, ದಿನಾಂಕ 04-10-2025 ರಂದು ದೇವಸ್ಥಾನದ ಟ್ರಸ್ಟ್ ವಶಕ್ಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ದೇವಸ್ಥಾನದ ಉಳಿದ ಲೆಕ್ಕಪತ್ರಗಳನ್ನು ಮುಂಬರುವ ದಸರಾ ಸಾರ್ವಜನಿಕ ಸಭೆಯಲ್ಲಿ ಪರಿಶೀಲನೆಗೆ ಮುಕ್ತವಾಗಿಡಲಾಗುವುದು ಎಂದು ಧರ್ಮದರ್ಶಿಗಳು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *