Home ಕ್ರೈಂ ನ್ಯೂಸ್ ತೆರಿಗೆ ಸಲಹೆಗಾರ, ವೀರಶೈವ ಲಿಂಗಾಯತ ಮುಖಂಡ ಜಂಬಗಿ ರಾಧೇಶ್ ಹಠಾತ್ ನಿಧನ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ತೆರಿಗೆ ಸಲಹೆಗಾರ, ವೀರಶೈವ ಲಿಂಗಾಯತ ಮುಖಂಡ ಜಂಬಗಿ ರಾಧೇಶ್ ಹಠಾತ್ ನಿಧನ

Share
ತೆರಿಗೆ
Share

ದಾವಣಗೆರೆ: ನಗರದ ಹಸನ್ಮುಖಿ ವ್ಯಕ್ತಿತ್ವದ ಜನಾನುರಾಗಿ, ಹಿರಿಯ ತೆರಿಗೆ ಸಲಹೆಗಾರರು ಹಾಗೂ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಜಂಬಗಿ ರಾಧೇಶ್ ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಅವರ ಹಠಾತ್ ಅಗಲಿಕೆಯ ಸುದ್ದಿ ದಾವಣಗೆರೆ ನಗರದಾದ್ಯಂತ ಹಾಗೂ ಅವರ ಹಿತೈಷಿಗಳಲ್ಲಿ ತೀವ್ರ ಆಘಾತ ಮತ್ತು ಶೋಕವನ್ನು ಉಂಟುಮಾಡಿದೆ.

ಸಹೃದಯಿ, ನೇರ ನುಡಿಯ ವ್ಯಕ್ತಿತ್ವ:

ತಮ್ಮ ವೃತ್ತಿಪರ ತೆರಿಗೆ ಸಲಹೆಗಾರ ಕೆಲಸದ ಜತೆಗೆ ಸದಾ ಎಲ್ಲರೊಂದಿಗೆ ನಗುತ್ತಾ ಬೆರೆಯುವ ಗುಣ ಹೊಂದಿದ್ದ ಜಂಬಗಿ ರಾಧೇಶ್ ಅವರು, ಸಮಾಜ ಹಾಗೂ ಜನರ ಹಿತಚಿಂತಕರಾಗಿದ್ದರು. ಯಾವುದೇ ಗೊಂದಲಗಳಿದ್ದರೂ ನೇರವಾಗಿ, ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳುತ್ತಿದ್ದ ಅವರು ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದ ಸಹೃದಯಿ ಜೀವಿ.

ಬಜೆಟ್ ಸಮಯದಲ್ಲಾಗಲಿ, ತೆರಿಗೆ ಹಾಗೂ ಲೆಕ್ಕಪತ್ರಗಳ ವಿಚಾರದಲ್ಲಾಗಲಿ ಪ್ರತಿಯೊಬ್ಬರಿಗೂ ಸರಳವಾಗಿ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಿದ್ದರು. ತಮ್ಮ ಬಳಿ ಬರುವ ಗ್ರಾಹಕರು ಅಥವಾ ಮಾಧ್ಯಮ ಮಿತ್ರರಿಗೆ ತೆರಿಗೆ ನಿಯಮಗಳ ಕುರಿತು ಅರಿವು ಮೂಡಿಸುವಲ್ಲಿ ಅವರು ವಿಶೇಷ ಕಾಳಜಿ ವಹಿಸುತ್ತಿದ್ದರು.

ಅವರ ಅಗಲಿಕೆಗೆ ನಗರದ ಗಣ್ಯರು, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಪ್ರೆಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಹಿತೈಷಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ದಾವಣಗೆರೆಯಲ್ಲಿ ರಾಧೇಶ್ ಜಂಬಗಿ ಅವರು ಪ್ರಮುಖ ಲೆಕ್ಕ ಪರಿಶೋಧಕರು  ಮತ್ತು ತೆರಿಗೆ ಸಲಹೆಗಾರರಾಗಿದ್ದಾರೆ.  ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಮತ್ತು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಒಕ್ಕೂಟದ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.  ಪತ್ನಿ ಜ್ಯೋತಿ ರಾಧೇಶ್ ಜಂಬಗಿ ಅವರು ಸಹ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *