Home ಕ್ರೈಂ ನ್ಯೂಸ್ ಅತ್ಯಾಚಾರ ಕೇಸ್ ದಾಖಲಿಸಿದ್ದ ಸಂತ್ರಸ್ತೆ: ದಾವಣಗೆರೆ ಪವರ್ ಫಿಟ್ನೆಸ್ ಮಾಲೀಕ ಇಸ್ಮಾಯಿಲ್ ಬಂಧಿಸಿದ ಪೊಲೀಸರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಅತ್ಯಾಚಾರ ಕೇಸ್ ದಾಖಲಿಸಿದ್ದ ಸಂತ್ರಸ್ತೆ: ದಾವಣಗೆರೆ ಪವರ್ ಫಿಟ್ನೆಸ್ ಮಾಲೀಕ ಇಸ್ಮಾಯಿಲ್ ಬಂಧಿಸಿದ ಪೊಲೀಸರು!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ನಗರದ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಸಮೀಪದ ಪವರ್ ಫಿಟ್ನೆಸ್ ಮಾಲೀಕ ಹಾಗೂ ಸರಸ್ವತಿ ಬಡಾವಣೆ ನಿವಾಸಿ ಇಸ್ಮಾಯಿಲ್ ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್. ಟಿ. ಶೇಖರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತ ಮಹಿಳೆಯು ಅತ್ಯಾಚಾರ ಕೇಸ್ ಅನ್ನು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಇಸ್ಮಾಯಿಲ್ ನನ್ನು ಬಂಧನಕ್ಕೊಳಪಡಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇಸ್ಮಾಯಿಲ್ ಬಂಧನಕ್ಕೆ ಒತ್ತಾಯಿಸಿ ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಆಗ್ರಹಿಸಿದ್ದವು. ಮಾತ್ರವಲ್ಲ, ಆರೋಪಿ ಮಾಲೀಕತ್ವದ ಪವರ್ ಫಿಟ್ನೆಸ್ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದರು. ಆರೋಪಿ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಟಾರ್ಗೆಟ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ವಿಡಿಯೋ, ಫೋಟೋ ತೋರಿಸಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿದ್ದವು.

ಸಂತ್ರಸ್ತೆ ನೀಡಿದ ಸ್ಪಷ್ಟನೆ:

ಘಟನೆ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತ ಮಹಿಳೆ, “ಜಿಮ್ ಮಾಲೀಕನ ತಾಯಿ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಜಿಮ್‌ನಲ್ಲಿ ನನ್ನ ಬಟ್ಟೆ ಬದಲಿಸುವ ವೀಡಿಯೋ ಮಾಡಿ, ಅದನ್ನು ತೋರಿಸಿ ಅತ್ಯಾಚಾರ ಎಸಗಿದ್ದಾನೆ. ತಾಳಿ, ಬಂಗಾರ ಕೊಡದಿದ್ದರೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಹೆದರಿಸುತ್ತಿದ್ದ. ನನ್ನ ಪತಿ ಕೆಲಸ ಮಾಡುವ ಸ್ಥಳಕ್ಕೂ ಹೋಗಿ ಬೆದರಿಕೆ ಹಾಕಿದ್ದ” ಎಂದು ತಮ್ಮ ಅಳಲು ತೋಡಿಕೊಂಡಿದ್ದರು.

ಮಹಿಳೆ ಕೊಟ್ಟಿದ್ದ ದೂರಿನಲ್ಲೇನಿತ್ತು?

ದೂರಿನ ವಿವರ:

ದೂರುದಾರ ಮಹಿಳೆಯು ದಾವಣಗೆರೆಯ ಸರಸ್ವತಿ ನಗರದ ನಿವಾಸಿಯಾಗಿದ್ದು, ಅವರ ಪತಿ  ಪ್ರಾಧ್ಯಾಪಕರಾಗಿದ್ದಾರೆ. ನೊಂದ ಮಹಿಳೆಯು ಕಳೆದ ಒಂದೂವರೆ ವರ್ಷದಿಂದ ತನ್ನ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ನಿಟ್ಟುವಳ್ಳಿ ರಸ್ತೆಯ ದುರ್ಗಾಂಬಿಕ ಹೈಸ್ಕೂಲ್ ಹತ್ತಿರವಿರುವ “ಪವರ್ ಫಿಟ್‌ನೆಸ್ ಜಿಮ್‌”ಗೆ ಪ್ರತಿದಿನ ಬೆಳಗ್ಗೆ ಹೋಗುತ್ತಿದ್ದರು. ಈ ಜಿಮ್‌ನ ಮಾಲೀಕ ಮತ್ತು ತರಬೇತುದಾರನಾಗಿದ್ದ ಇಸ್ಮಾಯಿಲ್ ಎಂ., ಜಿಮ್‌ನ ಬಟ್ಟೆ ಬದಲಾಯಿಸುವ ಪ್ರತ್ಯೇಕ ಕೋಣೆಯಲ್ಲಿ ಮಹಿಳೆಯ ರಹಸ್ಯ
ನಗ್ನ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿದ್ದ ಎನ್ನಲಾಗಿದೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಈ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ, “ನಾನು ಕರೆದಾಗಲೆಲ್ಲ ಬರಬೇಕು, ಲೈಂಗಿಕ ಸಂಪರ್ಕಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಹರಿಬಿಟ್ಟು ನಿನ್ನ ಹಾಗೂ ನಿನ್ನ ಪತಿಯ ಗೌರವ ಮಣ್ಣುಪಾಲು ಮಾಡುತ್ತೇನೆ” ಎಂದು ಇಸ್ಮಾಯಿಲ್ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ಮಾನ ಮರ್ಯಾದೆಗೆ ಅಂಜಿ ಮಹಿಳೆಯು ಒಳಗೊಳಗೇ ನರಕಯಾತನೆ ಅನುಭವಿಸುತ್ತಿದ್ದೇನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬಲವಂತವಾಗಿ ಕರೆಸಿಕೊಂಡು ಅತ್ಯಾಚಾರ:

ದಿನಾಂಕ 28.03.2026 ರಂದು ರಾತ್ರಿ ಇಸ್ಮಾಯಿಲ್ ಕರೆ ಮಾಡಿ, “ಇದೇ ರಾತ್ರಿ ಜಿಮ್‌ಗೆ ಬರದಿದ್ದರೆ ಮನೆಯ ಬಳಿ ಬಂದು ನಿನ್ನ ಗಂಡನಿಗೆ ಫೋಟೋ ತೋರಿಸಿ ಸಂಸಾರ ಹಾಳು ಮಾಡುತ್ತೇನೆ” ಎಂದು ಹೆದರಿಸಿದ್ದನು. ರಾತ್ರಿ 11 ಗಂಟೆಗೆ ಜಿಮ್‌ಗೆ ಕರೆಯಿಸಿಕೊಂಡು ಮಹಿಳೆಯ ಅಸಹಾಯಕತೆಯನ್ನು ಬಳಸಿಕೊಂಡು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಅಲ್ಲದೆ, “ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಹಾಗೂ ನಿನ್ನ ಕುಟುಂಬದವರನ್ನು ಕೊಲೆ ಮಾಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದನು. ತದನಂತರವೂ ಇದೇ ರೀತಿ ಫೋಟೋಗಳನ್ನು ತೋರಿಸಿ ಹಲವಾರು ಬಾರಿ ಅತ್ಯಾಚಾರ ಮುಂದುವರಿಸಿದ್ದನು ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸ್ ಠಾಣೆಗೆ ದೂರು:

ಆರೋಪಿಯ ನಿರಂತರ ಕಿರುಕುಳ ಹಾಗೂ ಅತ್ಯಾಚಾರದಿಂದ ಮನನೊಂದ ಮಹಿಳೆ ಧೃತಿಗೆಟ್ಟು, ಅಂತಿಮವಾಗಿ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ. ಪ್ರಸ್ತುತ ಕುಟುಂಬವು ತೀವ್ರ ಮಾನಸಿಕ ಅಶಾಂತಿ ಮತ್ತು ಜೀವಭಯದಲ್ಲಿದ್ದು, ದಿನಾಂಕ 15-07-2026 ರಂದು ನೊಂದ ಮಹಿಳೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ದಾವಣಗೆರೆ ಪೊಲೀಸರು ಆರೋಪಿ ಇಸ್ಮಾಯಿಲ್ ಎಂ. ವಿರುದ್ಧ ಗುನ್ನೆ ನಂ: 97/2026, ಸೆಕ್ಷನ್ 64(2)(m) (ಅತ್ಯಾಚಾರ), 351(2) (ಕ್ರಿಮಿನಲ್ ಬೆದರಿಕೆ), 77 (ರಹಸ್ಯ ಚಿತ್ರೀಕರಣ/Voyeurism) ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *