ದಾವಣಗೆರೆ: ಇಂಗ್ಲೆಂಡ್‌ನ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನಾತಕ ಪದವಿಯ ಪ್ರತಿಭಾನ್ವಿತರು (ಸ್ಕೌಟ್-02) ಅಂತರರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರೈಸಿ ವಾಪಸ್ಸಾಗಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಪ್ರತಿನಿಧಿಸಿದ್ದ ವಿದ್ಯಾರ್ಥಿಗಳಾದ ಆಕರ್ಷ್ ರವಿಶಂಕರ್ ಸವಣೂರ, ಕೆ. ಐಶ್ವರ್ಯ ಲಕ್ಷ್ಮಿ, ಅಲಿಶಾ, ಅವಿಷ್ಕಾರ್ ವಸಂತ್ ಕುಮಾರ್ ಹಾಗೂ ನೋಡಲ್ ಅಧಿಕಾರಿಗಳಾಗಿ ಪ್ರೊ. ಡಾ. ಅಶೋಕ್ ಕುಮಾರ್ ಪಾಳೇದ ಅವರನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಇ. ರಂಗಸ್ವಾಮಿ ಸನ್ಮಾನಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕುಲಸಚಿವ ಎಸ್.ಬಿ.ಗಂಟಿ, ಶಿಕ್ಷಣ ನಿಕಾಯದ ಡೀನ್ ಪ್ರೊ.ಕೆ.ವೆಂಕಟೇಶ ಉಪಸ್ಥಿತರಿದ್ದರು. ಇಂಗ್ಲೆಂಡ್‌ನ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಕಳೆದ ಜೂನ್ 27ರಿಂದ ಜುಲೈ 11ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸುಸ್ಥಿರ ಅಭಿವೃದ್ಧಿ, ಕೃತಕ ಬುದ್ಧಿಮತ್ತೆ, ಆರೋಗ್ಯ ಸೇವೆ, ನಾಯಕತ್ವ, ಉದ್ಯಮಶೀಲತೆ, ಸ್ಮಾರ್ಟ್ ಸಿಟಿಗಳು, ನವೋದ್ಯಮ ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದರು.
ಇದೇ ಸಂದರ್ಭದಲ್ಲಿ ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿ ಶೈಕ್ಷಣಿಕ ಮಾಹಿತಿ ಪಡೆದರು. ವಿದ್ಯಾರ್ಥಿಗಳ ಈ ಸಾಧನೆಯು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಜೊತೆಗೆ ಅವರ ಪ್ರತಿಭೆಯನ್ನು ಬೆಳಗುವ ಕೆಲಸವಾಗಬೇಕು. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತ
ವಿದ್ಯಾರ್ಥಿಗಳ ಉನ್ನತಿಗೆ ಆದ್ಯತೆ ನೀಡಲಾಗುವುದು. ಅದಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕುಲಪತಿ ಪ್ರೊ.ರಂಗಸ್ವಾಮಿ ಭರವಸೆ ನೀಡಿದರು.
- AI training for students
- DAVANAGERE NEWS
- Davanagere student achievement
- DAVANAGERE UNIVERSITY
- Higher education Karnataka
- Oxford Cambridge study visit
- Prof BE Rangaswamy
- SCOUT 02 program
- Wolverhampton University England
- ಆಕ್ಸ್ಫರ್ಡ್ ಕೇಂಬ್ರಿಡ್ಜ್ ಭೇಟಿ
- ಇಂಗ್ಲೆಂಡ್ ಪ್ರವಾಸ
- ಕುಲಪತಿ ಬಿ ಇ ರಂಗಸ್ವಾಮಿ
- ಕೃತಕ ಬುದ್ಧಿಮತ್ತೆ ತರಬೇತಿ
- ದಾವಣಗೆರೆ ವಿಶ್ವವಿದ್ಯಾನಿಲಯ
- ದಾವಣಗೆರೆ ಸುದ್ದಿ
- ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯ
- ಸ್ಕೌಟ್ 02 ತರಬೇತಿ





Leave a comment